ಯೋಧರ ಸಾವು ಸಂಭ್ರಮಿಸಿದವನ ವಿರುದ್ಧ ಕೇಸು ದಾಖಲು
ಕೊಡಗು

ಯೋಧರ ಸಾವು ಸಂಭ್ರಮಿಸಿದವನ ವಿರುದ್ಧ ಕೇಸು ದಾಖಲು

February 20, 2019

ಸೋಮವಾರಪೇಟೆ: ಕಾಶ್ಮೀ ರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಸೈನಿಕರು ಹುತಾತ್ಮರಾದ ಮಾರನೇ ದಿನದಂದು ಪಟ್ಟಣದ ರೇಂಜರ್ ಬ್ಲಾಕ್ ನಲ್ಲಿ ವ್ಯಕ್ಯಿಯೋರ್ವ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾನೆ ಎಂಬ ಆರೋಪದಡಿ ಓರ್ವನ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇಂಜರ್ ಬ್ಲಾಕ್ ನಿವಾಸಿ ಷಂಶುದ್ಧೀನ್ ಆರೋಪಿ. ಹಿಂದೂ ಜಾಗರಣಾ ವೇದಿ ಕೆಯ ತಾಲ್ಲೂಕು ಅಧ್ಯಕ್ಷ ಎಂ.ಬಿ. ಉಮೇಶ್ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.15ರಂದು ಸಂಜೆ 7 ಗಂಟೆಯ ಸುಮಾರಿಗೆ ರೇಂಜರ್ ಬ್ಲಾಕ್‍ನ ಷಂಶು ದ್ಧೀನ್ ಎಂಬುವರ ಮನೆಯ ಮುಂದೆ ಪಟಾಕಿ ಸಿಡಿಸಿದರು ಎಂದು ಪ್ರತ್ಯಕ್ಷದರ್ಶಿ ಗಳಾದ ಅಜಯ್ ಮತ್ತು ಸುಧಾಕರ್‍ಶೆಟ್ಟಿ ನೀಡಿದ ಹೇಳಿಕೆ ಮೇರೆಗೆ ಠಾಣಾಧಿಕಾರಿ ಶಿವಶಂಕರ್ ಮೊಕದ್ದಮೆ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.

ಬುಧವಾರ ಮಧ್ಯಾಹ್ನ ಆರ್‍ಎಸ್‍ಎಸ್ ತಾಲೂಕು ಕಾರ್ಯವಾಹ ಪದ್ಮನಾಭ, ಸಹ ಕಾರ್ಯವಾಹ ರಾಘವೇಂದ್ರ, ಹಿಂದೂ ಜಾಗ ರಣಾ ವೇದಿಕೆಯ ದರ್ಶನ್ ಜೋಯಪ್ಪ, ಸುಭಾಷ್ ತಿಮ್ಮಯ್ಯ, ನಗರಳ್ಳಿ ರಮೇಶ್, ಯಡವನಾಡು ರಮೇಶ್, ಬಿಜೆಪಿಯ ಮನು ಕುಮಾರ್ ರೈ, ಜಿಪಂ ಸದಸ್ಯ ಬಿ.ಜೆ. ದೀಪಕ್ ನೇತೃತ್ವದಲ್ಲಿ ಹಿಂದುಪರ ಸಂಘ ಟನೆಗಳ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿ, ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದರು. ರಾತ್ರಿ ಘಟನಾ ಸ್ಥಳ ದಲ್ಲಿ ಮಹಜರು ನಡೆಸಿದ ಪೊಲೀಸರು, ಆರೋಪಿಯ ವಿರುದ್ಧ 124(ಎ) ದೇಶದ ವಿರುದ್ಧ ವೈರತ್ವ ತೋರ್ಪಡಿಕೆ, 153(ಬಿ) ದೇಶದ ಐಕ್ಯತೆಗೆ ಧಕ್ಕೆ ತರುವ ಕೆಲಸ ರಿತ್ಯಾ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂ ಡಿದ್ದಾರೆ. ಆರೋಪಿಯ ಬಂಧನವಾಗಿಲ್ಲ.

 

Translate »