ಶಿವಾಜಿ ಜೀವನ ಮೌಲ್ಯ ಅಳವಡಿಸಿಕೊಳ್ಳಲು ಕರೆ
ಮಡಿಕೇರಿ: ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸರ್ವಜ್ಞರ ಕೊಡುಗೆ ಅಪಾರ ವಾದದ್ದು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ನಗರದ ಕೋಟೆ ಹಳೇ ವಿಧಾನ ಸಭಾಂ ಗಣದಲ್ಲಿ ಬುಧವಾರ ನಡೆದ ಸರ್ವಜ್ಞ ಜಯಂತಿ ಹಾಗೂ ಛತ್ರಪತಿ ಶಿವಾಜಿ ಮಹಾ ರಾಜರ ಜಯಂತಿ ಆಚರಣಾ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವುದಕ್ಕೆ ಸರ್ವಜ್ಞರ ಕೊಡುಗೆ ಮಹ ತ್ತರವಾದದ್ದು. ಅವರು ರಚಿಸಿರುವ ವಚನ ಗಳಿಗೆ ಸಾರ್ವಕಾಲಿಕ ಮನ್ನಣೆ ದೊರಕಿ ರುವುದು ಅವರ ಜ್ಞಾನ ಭಂಡಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಪ್ಪಚ್ಚು ರಂಜನ್ ನುಡಿದರು.
ಛತ್ರಪತಿ ಶಿವಾಜಿ ಮಹಾರಾಜರು ಅಪ್ರ ತಿಮ ದೇಶ ಭಕ್ತರಾಗಿದ್ದು, ಯುದ್ಧ ಕಲೆ, ಹೋರಾಟ ಮನೋಭಾವ, ಚಿಕ್ಕಂದಿ ನಿಂದಲೇ ಮೈಗೂಡಿಸಿಕೊಂಡಿದ್ದರು ಎಂದು ತಿಳಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿವಾಜಿ ಅವರ ಜೀವನ ಮೌಲ್ಯವನ್ನು ತಿಳಿಸು ವುದರ ಮೂಲಕ ಯುವ ಪೀಳಿಗೆಯಲ್ಲಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವಂತಾಗ ಬೇಕು ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಶಿವಾಜಿಯವರ ತಾಯಿ ಜೀಜಾಬಾಯಿ ಅವರು ಶಿವಾಜಿ ಅವರನ್ನು ಬೆಳೆಸಿದಂತೆ, ಪ್ರತಿಯೊಬ್ಬ ತಾಯಂ ದಿರು ತಮ್ಮ ಮಕ್ಕಳಿಗೆ ಶಿವಾಜಿಯ ಆದ ರ್ಶಗಳನ್ನು ತಿಳಿಸಿಕೊಡಬೇಕು ಎಂದರು.
ಕವಿ ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿಯೂ ಕೂಡ ಸರ್ವಜ್ಞ ಅವರ ತ್ರಿಪದಿಗಳು ಸಮಾ ಜದ ಅಂಕುಡೊಂಕುಗಳನ್ನು ನಿವಾರಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ವಾಗಿದೆ ಎಂದು ನುಡಿದರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಸಾಮಾನ್ಯ ಜನ ರಲ್ಲಿ ಇದ್ದಂತಹ ಕಂದಾಚಾರ, ಮೂಢ ನಂಬಿಕೆ ಇವುಗಳನ್ನು ದೂರಗೊಳಿಸಿದ ಮಹಾನ್ ವ್ಯಕ್ತಿ ಸರ್ವಜ್ಞ ಅವರ ಜ್ಞಾನ ಭಂಡಾರವನ್ನು ಸ್ಮರಿಸಿದರು.
ಶಿವಾಜಿ ಅವರು ಅಪ್ರತಿಮ ಹೋರಾಟ ಗಾರರು. ದೇಶದ ರಕ್ಷಣೆಗಾಗಿ ಹೋರಾ ಡಿದ ಮಹಾನ್ ದೇಶಭಕ್ತ. ಅಷ್ಟಪ್ರಧಾನರು ಎಂಬ ಮಂತ್ರಿಮಂಡಲವನ್ನು ಜಾರಿಗೆ ತಂದು ತಮ್ಮ ಆಡಳಿತದಲ್ಲಿ ಸಾರ್ವಜನಿಕರಿಗೆ ಉತ್ತಮ ವ್ಯವಸ್ಥೆಗಳನ್ನು ನೀಡಿದಂತಹ ದಕ್ಷ ಆಡಳಿತಗಾರರು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಬಿ.ಎಸ್.ಲೋಕೋಶ್ ಸಾಗರ್ ಮಾತನಾಡಿ, ಬಸವ ಸಾರ ಮತ್ತು ಮಲ್ಲಮ್ಮ ಸರ್ವಜ್ಞರ ತಂದೆ-ತಾಯಿ. ಅಸಾಧಾರಣ ಕವಿಯಾದ ಸರ್ವಜ್ಞ ತ್ರಿಪದಿಗಳನ್ನು ರಚಿಸಿ ಕಣ್ಣಿಗೆ ಕಂಡದ್ದನ್ನು ತ್ರಿಪದಿ ರೂಪಗಳಲ್ಲಿ ಜನರಿಗೆ ಪರಿಚಯಿಸಿ ದೇಶಕ್ಕೆ ಜ್ಞಾನವನ್ನು ನೀಡಿದ ದಾರ್ಶನಿಕರು.
ಸಾವಿರಾರು ತ್ರಿಪದಿಗಳನ್ನು ರಚಿಸಿದ ಸರ್ವಜ್ಞರು ಸಾರ್ವಕಾಲಿಕ ಸತ್ಯವನ್ನು ಒಳಗೊಂಡಂತಹ ತ್ರಿಪದಿಯನ್ನು ರಚಿಸಿ ದವರು. ಇಂತಹ ಸಾಧಕರ ಬುನಾದಿ ಯಿಂದ ನಮ್ಮ ರಾಜ್ಯ, ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಮೊಘಲರು ಮತ್ತು ನಿಜಾಮರ ವಿರುದ್ಧ ಹೋರಾಡಿದ ಧೀಮಂತ ವ್ಯಕ್ತಿ ಶಿವಾಜಿ. ಬಾಲ್ಯದಲ್ಲಿ ತನ್ನ ತಾಯಿಯಾದ ಜೀಜಾಬಾ ಯಿಯಿಂದ ವೀರರ ಧೀರರ ಕತೆಗಳಿಂದ ಪ್ರೇರೇಪಣೆ ಪಡೆದು ಬೆಳೆದರು ಎಂದರು. ಮರಾಠ ಸಮಾಜದ ಜಿಲ್ಲಾಧ್ಯಕ್ಷ ರಾಜಾರಾವ್ ಮಾತನಾಡಿ, ಲಂಡನ್ ವಸ್ತು ಸಂಗ್ರಹಾಲ ಯದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಇರುವುದು ಹೆಮ್ಮೆಯ ವಿಚಾರ. ಹಿಂದೂ ಸ್ಥಾನದ ರಕ್ಷಣೆಗೆ ಸಾಮಾಜಿಕ ನ್ಯಾಯಕ್ಕೆ ಹೋರಾಡಿದ ಮಹಾನ್ ವ್ಯಕ್ತಿ ಎಂದು ಅವರು ತಿಳಿಸಿದರು.
ಕುಲಾಲ ಕುಂಬಾರ ಸಮಾಜದ ಮುಖಂಡ ನಾಣಯ್ಯ ಮಾತನಾಡಿ, ಸರ್ವಜ್ಞರ ಜ್ಞಾನವು ಪ್ರತಿಯೊಬ್ಬರಿಗೂ ಆದರ್ಶವಾದದ್ದು. ಅವರು ರಚಿಸಿದ ತ್ರಿಪದಿಗಳು ಸರ್ವರಿಗೂ ಸರ್ವ ಕಾಲಕ್ಕೂ ಪ್ರಸ್ತುತವಾದದ್ದು ಎಂದು ತಿಳಿ ಸುತ್ತಾ ತಮ್ಮ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಇತ್ತೀಚೆಗೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋ ತ್ಪಾದಕರ ದಾಳಿಯಿಂದ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಶಾಂತಿಗಾಗಿ ಮೌನಾಚರಣೆ ಮಾಡಲಾಯಿತು. ತಹ ಶೀಲ್ದಾರ್ ಕುಸುಮ ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇ ಶಕ ದರ್ಶನ ಕೆ.ಟಿ ಸ್ವಾಗತಿಸಿದರು, ಮಂಜು ನಾಥ್ ನಿರೂಪಿಸಿದರು. ನಗರಸಭೆ ಆಯುಕ್ತ ರಮೇಶ್ ವಂದಿಸಿದರು.