ಮನೆಗಳನ್ನು ನೀಡಲು ಸ್ಲಂ ನಿವಾಸಿಗಳ ಆಗ್ರಹ
ಮೈಸೂರು

ಮನೆಗಳನ್ನು ನೀಡಲು ಸ್ಲಂ ನಿವಾಸಿಗಳ ಆಗ್ರಹ

March 1, 2019

ಮೈಸೂರು: ಗುಡಿಸಲು ವಾಸಿಗಳ ಹೆಸರಲ್ಲಿ ಮನೆ ನಿರ್ಮಿಸಿ, ಗುಡಿಸಲು/ ಕೊಳಚೆ ಪ್ರದೇಶದ ನಿವಾಸಿಗಳಿಗೆ ಅವುಗಳನ್ನು ವಿತರಿಸಿಲ್ಲ ಎಂದು ಆರೋ ಪಿಸಿ ಮೇದರ ಬ್ಲಾಕ್ ಮೈಸೂರು ಸಾ ಮಿಲ್ ಮುಂಭಾ ಗದ ಕೊಳಚೆ ಪ್ರದೇಶದ ನಿವಾಸಿಗಳು ಗುರುವಾರ ಮೈಸೂ ರಿನ ಹೈವೇ ವೃತ್ತದ ಬಳಿಯಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಇ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಮೊದಲ ಬಾರಿ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇನ್ನೂ ಮನೆ ಕೊಟ್ಟಿಲ್ಲ. ನಂತರ ಬಿಜೆಪಿ ಸರ್ಕಾರ 2010-11ನೇ ಸಾಲಿನಲ್ಲಿ ಜಿಲ್ಲಾ ಉಸುವಾರಿ ಯಾಗಿದ್ದ ಶೋಭಾ ಕರಂದ್ಲಾಜೆ, ಇಲ್ಲೇ ಶಂಕುಸ್ಥಾಪನೆ ಮಾಡಿ ದ್ದರು.

6328 ಮನೆಗಳನ್ನು ನಿರ್ಮಾಣ ಮಾಡಿದ್ದರೂ ಇಲ್ಲಿಯವರೆಗೆ ಯಾರಿಗೂ ಮನೆ ಕೊಟ್ಟಿಲ್ಲ. ಕೊಳಚೆ ಪ್ರದೇ ಶದ ನಿವಾಸಿಗಳ ಹೆಸರಿನಲ್ಲಿ ಮನೆ ಕಟ್ಟಿಸಿ ರಾಜಕೀಯ ಹಿತಾಸಕ್ತಿಗಳು, ದಲ್ಲಾಳಿಗಳೊಂದಿಗೆ ಶಾಮೀಲಾದ ಅಧಿಕಾರಿ ಗಳು ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋ ಪಿಸಿದರು. ಯಾದವಗಿರಿ 4ನೇ ಮುಖ್ಯ ರಸ್ತೆಯ 20 ಮನೆ ಗಳನ್ನು ತಾತ್ಕಾಲಿಕವಾಗಿ ಮಂಜೂರು ಮಾಡಲಾಗಿದೆ. ಮೇದರ ಬ್ಲಾಕ್2ರಲ್ಲಿ 32 ಮನೆ ಮಂಜೂರು ಮಾಡಿ ದ್ದಾರೆ. ಎಲ್ಲಾ ಮನೆಯನ್ನು ಸ್ಲಂ ನಿವಾಸಿಗಳಲ್ಲದವರಿಗೆ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು. ಮನೆಗಳಿಲ್ಲದೆ ಸಂಕಷ್ಟದಲ್ಲಿರುವ ಸ್ಲಂ ನಿವಾಸಿ ಗಳಿಗೆ ಮನೆ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮೇದರ ಬ್ಲಾಕ್ ಸ್ಲಂ ನಿವಾಸಿಗಳ ಮುಖಂಡರಾದ ತಮ್ಮಡಿ, ಸೋಮಶೇಖರ್, ರಾಚಪ್ಪ, ರಾಜಣ್ಣ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »