ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪೊಲೀಸ್ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶ ಕರ ಆಯ್ಕೆ ಯಾಗಿದೆ. ಸಾಮಾನ್ಯ ಕ್ಷೇತ್ರದಿಂದ ಕಾಳಪ್ಪ ನಾಯಕ, ಜಿ.ಎನ್.ಪ್ರದೀಪ್, ಎಂ.ಜಿ.ರಘು, ಮರಪ್ಪ, ಧನಂಜಯ, ಪ್ರಭುರಾಜೇ ಅರಸ್, ಬಿ.ಆರ್.ರಘು, ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ಛಾಯಾಗ್ರಾಹಕ ಎಂ.ಮಹೇಶ್, ಹಿಂದುಳಿದ ವರ್ಗ(ಎ) ಕ್ಷೇತ್ರದಿಂದ ಎನ್.ಪ್ರಶಾಂತ್, ಕೆ.ಮಹೇಶ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ರಾಜಕುಮಾರ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ರಾಜ, ಮಹಿಳಾ ಮೀಸಲು ಕ್ಷೇತ್ರದಿಂದ ವನಜಾಕ್ಷಿ ಹಾಗೂ ವಿದ್ಯಾರಾಣಿ ಕಾವೇರಪ್ಪ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಜಿ.ಅನುಸೂಯ ತಿಳಿಸಿದ್ದಾರೆ.
