ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಆನೆ ಹೊಟ್ಟೆಗೆ ಅರೆಕಾಸಿನ `ವೆಚ್ಚ’
ಚಾಮರಾಜನಗರ

ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಆನೆ ಹೊಟ್ಟೆಗೆ ಅರೆಕಾಸಿನ `ವೆಚ್ಚ’

March 14, 2019

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯ ರ್ಥಿಗಳಿಗೆ ಚುನಾವಣಾ ಆಯೋಗ ವೆಚ್ಚದ ಮಿತಿ ಯನ್ನು ಕೇವಲ 70 ಲಕ್ಷ ರೂ.ಗೆ ಸೀಮಿತಗೊಳಿಸಿದ್ದು, ವಾಸ್ತವವಾಗಿ ಈ ಮೊತ್ತ ಅಭ್ಯರ್ಥಿಗಳ ಪಾಲಿಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತಿದಿನ ತಮ್ಮ ಚುನಾವಣಾ ಖರ್ಚು ವೆಚ್ಚವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾ ಗಿದ್ದು, ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾವಣಾ ಫಲಿತಾಂಶ ಘೋಷಣೆಯಾದ 30 ದಿನದೊಳಗೆ ತನ್ನ ಚುನಾವಣಾ ವೆಚ್ಚಗಳ ಲೆಕ್ಕದ ಸಂಪೂರ್ಣ ಪ್ರತಿಯೊಂದನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿ ಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿ 70 ಲಕ್ಷ ರೂ.ಗಿಂತ ಕಡಿಮೆ ವೆಚ್ಚ ತೋರಿಸುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಅಭ್ಯರ್ಥಿಗಳು ಇದಕ್ಕಾಗಿ ಹೆಚ್ಚು ಖರ್ಚು ಮಾಡುವುದಂತೂ ಅಷ್ಟೇ ಸತ್ಯ.

ನಿಯಮ ಉಲ್ಲಂಘಿಸಿದರೆÉ ಕ್ರಮ: ಪ್ರಸ್ತುತದಲ್ಲಿ ಹಣ ಇದ್ದವರಿಗೆ ಮಾತ್ರ ಚುನಾವಣೆ ಎನ್ನುವಂತಾ ಗಿದ್ದು, ಕೋಟಿಗಟ್ಟಲೇ ಹಣ ವ್ಯಯಿಸುವುದಂತೂ ಅನಿವಾರ್ಯವಾಗಿದೆ. ಈ ಸಮಯದಲ್ಲಿ ಹಣ ವನ್ನು ನೀರಿನಂತೆ ಚೆಲ್ಲುವುದಂತು ಸತ್ಯವೂ ಹೌದು. ಆದರೆ ಆಯೋಗ ನಿಗದಿಪಡಿಸಿರುವ ಮೊತ್ತ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿದ್ದು, ಒಂದು ವೇಳೆ ಮಿತಿಗಿಂದ ವೆಚ್ಚ ಹೆಚ್ಚಾದರೆ ಅಭ್ಯರ್ಥಿಗಳು ಆಯೋಗದ ನಿಯಮ ಉಲ್ಲಂಘಿಸಿದಂತಾಗುವುದ ಲ್ಲದೆ, ಕ್ರಮ ಎದುರಿಸುವ ಸಾಧ್ಯತೆಯೂ ಇದೆ.

ದೃಢೀಕರಣ ಪತ್ರ ಕಡ್ಡಾಯ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಂದ ನಾಮಪತ್ರದ ನಮೂನೆ-2 `ಎ’ರ ಜೊತೆಯಲ್ಲಿ ತಿದ್ದುಪಡಿಯಂತೆ ನಮೂನೆ-26 ರಲ್ಲಿ ಅಫಿಡೆವಿಟ್ ಪಡೆಯಲಾಗು ತ್ತದೆ ಹಾಗೂ ಅಭ್ಯರ್ಥಿಗಳು ಸರ್ಕಾರಕ್ಕೆ ಪಾವತಿ ಸಬೇಕಾದ ಬಾಕಿ ಯಾವುದು ಇರುವುದಿಲ್ಲ ಎಂಬ ಬಗ್ಗೆ ದೃಢೀಕರಣ ಪತ್ರ ನೀಡುವುದು ಕಡ್ಡಾಯ ವಾಗಿದೆ. ಅಲ್ಲದೆ ಈ ವೇಳೆ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಿಸಬೇಕಾಗಿದೆ. 5 ವರ್ಷದಲ್ಲಿ ತೆರಿಗೆ ಪಾವತಿಸಿರುವ ಬಗ್ಗೆ ತಿಳಿಸುವುದಲ್ಲದೆ, ಕುಟುಂಬ ಸದಸ್ಯರು, ಅವಲಂಬಿತರ ಆದಾಯ, ತೆರಿಗೆ ಕುರಿತು ಸಹ ಮಾಹಿತಿ ನೀಡಬೇಕಾಗಿದ್ದು, ಇವರ ಆದಾಯ, ವೆಚ್ಚದಲ್ಲಿ ಏರುಪೇರಾದರೂ ಅಭ್ಯರ್ಥಿಗಳಿಗೆ ಸಮಸ್ಯೆ ತಪ್ಪಿದ್ದಲ್ಲ.

ಖರ್ಚು 20 ಕೋಟಿ ಗೂ ಅಧಿಕ : ಗೆಲುವನ್ನೇ ಮಾನದಂಡವಾಗಿಟ್ಟುಕೊಂಡಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸುಮಾರು 20 ಕೋಟಿ ರೂ. ಅಧಿಕ ಖರ್ಚು ಮಾಡುವ ಸಾಧ್ಯತೆಗಳಿವೆ. ಮತಗಟ್ಟೆ(ಬೂತ್)ಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿಕೊಳ್ಳುವ ಅಭ್ಯರ್ಥಿ ಹಾಗೂ ಪಕ್ಷದ ನಾಯಕರು, ಹಣವನ್ನು ತಮ್ಮ ಪಕ್ಷದ ಮುಖಂ ಡರಿಗೆ ತಲುಪಿಸುವುದು. ನಂತರ ಮುಖಂಡರು ಕಾರ್ಯಕರ್ತರ ಮೂಲಕ ಮತದಾರರಿಗೆ ಹಂಚು ವುದು ಈ ಹಿಂದಿನ ಚುನಾವಣೆಗಳಲ್ಲಿ ನಡೆದಿ ರುವ ಪಕ್ರಿಯೆ. ಇದೇ ಪಕ್ರಿಯೆ ಈ ಚುನಾ ವಣೆಯಲ್ಲೂ ನಡೆಯಲಿದ್ದು, ಇದರಿಂದ ಹಣದ ಹೊಳೆ ಹರಿಯುವುದಂತೂ ಖಚಿತವಾಗಿದೆ. ತೆರೆಮರೆಯಲ್ಲಿ ಅಭ್ಯರ್ಥಿಗಳು ಕಸರತ್ತು ನಡೆಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಒಟ್ಟಾರೇ ಚುನಾವಣಾ ಆಯೋಗದ ಈ ವೆಚ್ಚದ ಮಿತಿಯೇ ಪಕ್ಷಗಳು ಹಾಗೂ ಆಭ್ಯರ್ಥಿಗಳಿಗೆ ಬಿಸಿತುಪ್ಪವಾಗಿದ್ದು, ಸದ್ಯ ಅಭ್ಯರ್ಥಿಗಳ ಚುನಾ ವಣಾ ಖರ್ಚನ್ನು 70 ಲಕ್ಷ ರೂ.ಗೆ ಸೀಮಿತಗೊಳಿ ಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಿದ್ದಲಿಂಗಸ್ವಾಮಿ

Translate »