ಕೈ ಕೊಟ್ಟ ಫಸಲು; ಮಾವಿನ ಬೆಲೆ ಗಗನಕ್ಕೆ
ಮೈಸೂರು

ಕೈ ಕೊಟ್ಟ ಫಸಲು; ಮಾವಿನ ಬೆಲೆ ಗಗನಕ್ಕೆ

April 22, 2019

ಮೈಸೂರು: ಇದು ಮಾವಿನ ಸುಗ್ಗಿ ಕಾಲ. ಹೆಚ್ಚು ಪ್ರಮಾಣದ ಹಣ್ಣು ಮಾರುಕಟ್ಟೆಗೆ ಬರು ವುದರಿಂದ ಬೆಲೆ ಕಡಿಮೆಯಾಗ ಬಹುದು ಎಂಬ ನಿರೀಕ್ಷೆ ಸುಳ್ಳಾದಂತಿದೆ. ದಿನೇ ದಿನೆ ಬೆಲೆ ಹೆಚ್ಚಾಗುತ್ತಿರುವುದು ಮಾವು ಪ್ರಿಯರಲ್ಲಿ ನಿರಾಸೆ ಮೂಡಿಸಿದೆ.

ಏಪ್ರಿಲ್‍ನಿಂದ ಜೂನ್‍ವರೆಗೆ `ಹಣ್ಣುಗಳ ರಾಜ’ ಮಾವಿನ ಸುಗ್ಗಿಕಾಲ ಎನ್ನಲಾಗು ತ್ತದೆ. ಸಾಮಾನ್ಯವಾಗಿ ಯುಗಾದಿ ವೇಳೆಗೆ ಮಾವು ಮಾರುಕಟ್ಟೆ ಪ್ರವೇಶಿಸು ತ್ತದೆ. ಈ ವೇಳೆಗಾಗಲೇ ಎಲ್ಲಿ ನೋಡಿದ ರಲ್ಲಿ ಮಾವಿನ ರಾಶಿ ಕಾಣ ಸಿಗುತ್ತಿತ್ತು. ಆದರೆ ಈ ಬಾರಿ ಸ್ವಲ್ಪ ತಡವಾಗಿ ಮಾವಿನ ದರ್ಶನವಾಗಿದ್ದು, ಹಣ್ಣಿನ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಲೆಯೂ ಹೆಚ್ಚಾಗಿದೆ. ಹೋಲ್‍ಸೇಲ್ ಮಾರುಕಟ್ಟೆ, ಮಾಲ್‍ಗಳು, ಹಣ್ಣಿನ ಅಂಗಡಿ, ತಳ್ಳುಗಾಡಿಗಳಲ್ಲಿ ಮಾವಿನ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ವಿದ್ದರೂ, ಎಲ್ಲಿಯೂ ಗ್ರಾಹಕರಿಗೆ ಕಡಿಮೆ ದರದಲ್ಲಿ ದೊರಕುವುದಿಲ್ಲ.

ನೀರಾವರಿ ಪ್ರದೇಶದಲ್ಲಿ ಮಾವು ಬೆಳೆ ಕಷ್ಟಸಾಧ್ಯ. ಹಾಗಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಮಾವಿನ ತೋಟಗಳಿವೆ. ಈ ಬಾರಿ ಮಳೆಯ ಕೊರತೆ, ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯ ದಿಂದಾಗಿ ಈ ಬಾರಿ ಫಸಲು ಕಡಿಮೆ ಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ಬೆಳೆಗಾರನ ದ್ದಾಗಿದೆ. ರಾಮನಗರ, ತುಮಕೂರು ಇನ್ನಿತರ ಜಿಲ್ಲೆಗಳಲ್ಲೂ ಫಸಲು ಕಡಿಮೆ ಯಾಗಿರುವುದರಿಂದ ಮೈಸೂರಿನ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ವಾರ ಕಳೆದರೆ ರಸಪುರಿ, ಬಾದಾಮಿ ಹಾಗೂ ಬಂಗೇನಪಲ್ಲಿ ಮಾವಿನ ಹಣ್ಣುಗಳು ಹೆಚ್ಚು ಪೂರೈಕೆಯಾಗಬಹುದು ಎನ್ನಲಾಗುತ್ತಿದೆ.

ಹೋಲ್‍ಸೇಲ್ ಮಾರುಕಟ್ಟೆಯಲ್ಲಿ ಕೆಜಿ ಬಾದಾಮಿ ಮಾವಿಗೆ 80-140ರೂ., ರಸಪುರಿಗೆ 50-70ರೂ. ಬೆಲೆಯಿದೆ.ಮಾಲ್‍ಗಳು, ಹಣ್ಣಿನ ಅಂಗಡಿಗಳು, ತಳ್ಳು ಗಾಡಿಗಳಲ್ಲಿ 10-20ರೂ. ವ್ಯತ್ಯಾಸ ವಿರಬಹುದು. ಫಸಲು ಕೈಕೊಟ್ಟಿದ್ದರಿಂದ ರೈತನಿಗೆ ಮಾತ್ರವಲ್ಲದೆ, ವ್ಯಾಪಾರಿಗಳ ಆದಾಯಕ್ಕೂ ಹೊಡೆತ ಬಿದ್ದಿದೆ. ಈಗಿ ರುವ ಬೆಲೆ ನೀಡಿ ಕೊಳ್ಳುವವರ ಸಂಖ್ಯೆಯೂ ಕಡಿಮೆ. ಮತ್ತಷ್ಟು ಹೆಚ್ಚಾದರೆ ಕೊಳ್ಳುವ ವರೇ ಇರುವುದಿಲ್ಲ. ಆಗ ವ್ಯಾಪಾರಿಗಳು ನಷ್ಟ ಅನುಭವಿಸ ಬೇಕಾಗುತ್ತದೆ. ಕಳೆದ ವರ್ಷಕ್ಕಿಂತ ಶೇ.20ರಷ್ಟು ಮಾತ್ರ ಫಸಲಿದೆ. ಹಾಗಾಗಿ ಹಣ್ಣಿನ ಬೆಲೆ ಕಡಿಮೆಯಾಗು ವುದಿಲ್ಲ. ಬೆಲೆ ಹೆಚ್ಚಿಸಿದರೆ ಗ್ರಾಹಕರು ಕೊಳ್ಳು ವುದಿಲ್ಲ ಅಥವಾ 2 ಕೆಜಿ ಬದಲು ಒಂದು ಕೆಜಿ ಕೊಳ್ಳುತ್ತಾರೆ. ಹಾಗಾಗಿ ಬೆಲೆ ಹೆಚ್ಚಾಗುವ ಸಾಧ್ಯತೆಯೂ ಕಡಿಮೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

ವರ್ಷದಲ್ಲಿ ಬೇಸಿಗೆಯ 2 ತಿಂಗಳ ಕಾಲ ಎಲ್ಲೆಲ್ಲೂ ಸುವಾಸನೆ ಬೀರಿ, ಗ್ರಾಹ ಕರನ್ನು ತನ್ನತ್ತ ಸೆಳೆಯುತ್ತಿದ್ದ ಮಾವಿಗೆ ಈ ಬಾರಿ ಬರ. ಬೆಳೆಯನ್ನೇ ನಂಬಿದ್ದ ರೈತನಿಗೆ ನಿರಾಸೆ. ಸಿಕ್ಕಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ಆದಾಯಕ್ಕೂ ಬರೆ. ಜೊತೆಗೆ ವಿಧವಿಧವಾದ ಮಾವಿನ ಹಣ್ಣುಗಳನ್ನು ಚಪ್ಪರಿಸುತ್ತಿದ್ದ ಗ್ರಾಹಕರಿಗೂ ಕಹಿಯ ಅನುಭವವಾದಂತಿದೆ. ಏನೇ ಇರಲಿ ಮಾವಿನ ಸುಗ್ಗಿ ಕಾಲದಲ್ಲಿ ಒಂದೆರಡು ಹಣ್ಣನ್ನು ಚಪ್ಪರಿಸದೆ ಇರಲಾಗದು ಅಲ್ಲವೇ.

Translate »