ಕಲಾರಸಿಕರ ಮನಗೆದ್ದ ಗಾನಸುಧೆ
ಮೈಸೂರು

ಕಲಾರಸಿಕರ ಮನಗೆದ್ದ ಗಾನಸುಧೆ

April 22, 2019

ಮೈಸೂರು: ಮೈಸೂ ರಿನ ಜೆ.ಕೆ.ಮೈದಾನದ ಅಮೃತ ಮಹೋ ತ್ಸವ ಸಭಾಂಗಣದಲ್ಲಿ ನಿನಾದ್ ಟ್ರಸ್ಟ್ ಹಾಗೂ ಎಂಎಂಸಿ ಅಲ್ಯುಮ್ನಿ ಅಸೋಸಿ ಯೇಷನ್ ಆಯೋಜಿಸಿದ್ದ ‘ಗಾನ ಸುಧೆ ವಿನ್ಸೆಂಟ್ ಜೊತೆ’ ಕನ್ನಡ, ತಮಿಳು ಮತ್ತು ಹಿಂದಿ ಚಿತ್ರಗೀತೆಗಳ ಗಾಯನ ಕಲಾರಸಿ ಕರ ಮನಗೆದ್ದಿತು.

ಮೊದಲಿಗೆ ಖ್ಯಾತ ಯುವ ಗಾಯಕ ನೀತು ನಿನಾದ್ ದೇವರ ಸ್ತುತಿಯೊಂದಿಗೆ ‘ಗೋವಿಂದ ನಿನ್ನ ನಾಮವೆ ಚಂದ’ ಎಂಬ ಹಾಡನ್ನು ಹಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನಂತರ ಗಾಯಕ ಸಿದ್ದರಾಜು ಕೋಟೆ ‘ಬಭ್ರುವಾಹನ’ ಚಿತ್ರದ ‘ನಿನ್ನ ಕಣ್ಣ ನೋಟದಲ್ಲಿ’ ಹಾಡನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.

ಗಾಯಕರಾದ ಅಮೂಲ್ಯ, ನಾಗವಲ್ಲಿ, ಜಾಯ್ಸ್, ಭುವನೇಶ್ವರಿ, ಅಶ್ವಿನಿರಾವ್, ಕೇಶವನ್, ದೇವಿಕಾ, ಅನುರಾಧ, ಪ್ರಿಯಾ, ಭಾಗ್ಯ, ಡಾ.ಬ್ರಹ್ಮೇಂದ್ರ, ಡಾ.ಸುಭಾಷ್, ಡಾ.ಆನಂದ್, ಡಾ.ಮಂಜುನಾಥ್, ಕಾಶೀ ನಾಥ್, ಮಂಜುನಾಥ್, ಪ್ರೊ.ಸಿದ್ದರಾಜು, ಜಗದೀಶ್, ಸಿಂಚನ, ಪ್ರಕಾಶ್, ನರಸಿಂಹ, ಮುತ್ತುರಾಜ್, ನಾಗೇಂದ್ರ, ಶಿವರಾಜ್, ಪಾಪಣ್ಣ, ಲೋಕೇಶ್, ಪ್ರಸನ್ನ ಹಾಗೂ ಶ್ರೀವಾಣಿ ಅವರು ‘ಶೋರ್’ ಹಿಂದಿ ಚಿತ್ರದ ‘ಇಕ್ ಪ್ಯಾರ್ ಕಾ ನಗ್ಮ’, ‘ವೀರ ಕೇಸರಿ’ ಚಿತ್ರದ ‘ಮೆಲ್ಲುಸಿರೆ ಸವಿಗಾನ’, ‘ಕೆರಳಿದ ಸಿಂಹ’ ಚಿತ್ರದ ‘ಅಮ್ಮಾ ನೀನು ನಮಗಾಗಿ’, ‘ಹೃದಯ ಹಾಡಿತು’ ಚಿತ್ರದ ‘ಗಿರಿನವಿಲು ಎಲ್ಲೋ’, ‘ಹುಲಿಯ ಹಾಲಿನ ಮೇವು’ ಚಿತ್ರದ ‘ಚಿನ್ನದ ಮಲ್ಲಿಗೆ ಹೂವೆ’, ‘ನಾ ನಿನ್ನ ಮರೆಯಲಾರೆ’ ಚಿತ್ರದ ‘ಎಲ್ಲೆಲ್ಲಿ ನೋಡಲಿ’, ಚಂದನದ ಗೊಂಬೆ ಚಿತ್ರದ ಬಯಸದೆ ಬಳಿಬಂದೆ’, ‘ಮುಗಿ ಯದ ಕಥೆ’ ಚಿತ್ರದ ‘ಕಂಗಳು ವಂದನೆ ಹೇಳಿದೆ’, ‘ಬೋರೆಗೌಡ ಬೆಂಗಳೂರಿಗೆ ಬಂದ’ ಚಿತ್ರದ ‘ಅಲ್ಲಿ ಇಲ್ಲಿ ಹುಡುಕುತ್ತ ಕಣ್ಣು’, ‘ಮನೆಯನು ಬೆಳಗಿದೆ ಇಂದು’, ‘ಆಸೆಯೂ ಕೈ ಗೂಡಿತು’, ‘ಚೆಲುವಾ ಪ್ರತಿಮೆ ನೀನು’, ‘ಓ ಪ್ರಿಯತಮ’, ‘ಕಾಲ ವನ್ನು ತಡೆಯೋರು ಯಾರೂ ಇಲ್ಲ’, ‘ಬೆಳ್ಳಿ ರಥದಲಿ’, ‘ಮಡಿಕೇರಿ ಸಿಪಾಯಿ’, ‘ನೂರು ಕಣ್ಣು ಸಾಲದು’ ಹಾಡುಗಳನ್ನು ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮ ವನ್ನು ಉದ್ಘಾಟಿಸಿದ ಸಂಗೀತ ನಿರ್ದೇಶಕ ಗುರುರಾಜ್ ಮಾತನಾಡಿ, ಸಂಗೀತವಿದ್ದ ಕಡೆ ಸದಾ ಸಂತೋಷ ತುಂಬಿರುತ್ತದೆ. ಸಂಗೀತ ಸಂಸ್ಥೆಗಳು ಹೊಸ ಹೊಸ ಕಲಾ ವಿದರನ್ನು ಗುರುತಿಸಿ ಬೆಳೆಸಬೇಕು. ಪರಿ ಶ್ರಮದಿಂದ ನಿರಂತರ ಅಭ್ಯಾಸ ಮಾಡಿ ದರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.

ಇದೇ ವೇಳೆ ಡ್ರಮ್ಸ್ ಮಾಂತ್ರಿಕ ವಿನ್ಸೆಂಟ್ ಅವರಿಗೆ ಡ್ರಮ್ಸ್‍ನ್ನು ಉಡು ಗೊರೆಯಾಗಿ ನೀಡುವ ಮೂಲಕ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಎ.ಎಸ್.ಪ್ರಸನ್ನ ಕುಮಾರ್, ಎ.ಎಸ್.ರವಿ ಶಂಕರ, ಮಹೇಶ್‍ಕುಮಾರ್, ದಿವ್ಯಾ ಕೇಶವನ್, ಮೈಕ್ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

Translate »