ಮೈಸೂರಾಚೆ ಪೂರ್ಣಚೇತನ ಚಿಣ್ಣರ ಮೇಳ
ಮೈಸೂರು

ಮೈಸೂರಾಚೆ ಪೂರ್ಣಚೇತನ ಚಿಣ್ಣರ ಮೇಳ

April 22, 2019

ಮೈಸೂರು:`ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ’ ಸಂಸ್ಕøತ ನುಡಿಯಂತೆ ಗಟ್ಟಿಯಾದ ಶರೀರವಿದ್ದರೆ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ. ಉತ್ತಮ ಪರಿಸರವಿದ್ದರೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಈ ಮಾತಿಗೆ ಅನುಗುಣವಾಗಿ ಮೈಸೂರು ಹೊರವಲಯದಲ್ಲಿ ಪೂರ್ಣ ಚೇತನ ಚಿಣ್ಣರ ಮೇಳ-2019 ವಿಶಿಷ್ಟ ಪರಿಕಲ್ಪನೆಯಲ್ಲಿ ಪ್ರಪಥಮವಾಗಿ ಆರಂಭವಾಗಿದೆ.

ನಗರದ ಮಕ್ಕಳಿಗೆ ಅವಿಭಕ್ತ ಕುಟುಂಬ ಅಥವಾ ಗ್ರಾಮೀಣ ಪ್ರದೇಶದ ವಾತಾವರಣ ಪರಿಕಲ್ಪನೆಗೆ ಒತ್ತು ನೀಡಿ ಮೈಸೂರು-ಮಾನಂದವಾಡಿ ರಸ್ತೆಯ ಪೂರ್ಣಚೇತನ ಪಬ್ಲಿಕ್ ಶಾಲೆಯ 17 ಎಕರೆ ವಿಸ್ತಾರದ ತೋಟದಲ್ಲಿ ಚಿಣ್ಣರ ಮೇಳ ನಡೆದಿದೆ.

ಪ್ರಸ್ತುತ ನಗರೀಕರಣ ಹೆಚ್ಚಾದಂತೆ ಮಕ್ಕಳನ್ನು ಒಬ್ಬಂಟಿ ಮಾಡಿ ತಂದೆ-ತಾಯಿ ಹೊರಗಡೆ ದುಡಿಮೆ ಮಾಡುವುದು ಅನಿವಾರ್ಯ. ಬೇಸಿಗೆ ರಜೆ ಆರಂಭವಾದರೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಪೋಷಕರ ಚಿಂತೆ ನಿವಾರಿಸಲೆಂದೇ ಹಿರಿಯ ಕಲಾವಿದ ಮೈಮ್ ರಮೇಶ್ ಸಾರಥ್ಯದಲ್ಲಿ ಏ.14 ರಿಂದ ಮೇ 5ರವರೆಗೆ ವಿಶಿಷ್ಟ ಕಲ್ಪನೆಯ ಚಿಣ್ಣರ ಮೇಳ ಆರಂಭವಾಗಿದೆ.

ರಂಗಾಯಣ ಚಿಣ್ಣರ ಮೇಳ ಮಾದರಿಯಲ್ಲಿದ್ದರೂ `ಪೂರ್ಣ ಚೇತನ ಚಿಣ್ಣರ ಮೇಳ’ ತುಸು ಭಿನ್ನ. ಸಾಹಸ ಕ್ರೀಡೆ, ಗ್ರಾಮೀಣ ಕ್ರೀಡೆ, ಅಜ್ಜಿ ಕಥೆಗಳಿಗೂ ಆದ್ಯತೆ ನೀಡಲಾಗಿದೆ. ಮೇಳದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಪರಿಸರ, ರೈತ, ರಂಗಭೂಮಿ ಹಾಗೂ ಯೋಧ ಎಂಬ ನಾಲ್ಕು ಗುಂಪುಗಳಾಗಿ ವಿಂಗಡಿಸಿ ತಂಡಗಳನ್ನು ರಚಿಸಲಾಗಿದೆ ಎನ್ನುತ್ತಾರೆ ಚಿಣ್ಣರ ಮೇಳದ ನಿರ್ದೇಶಕ ಮೈಮ್‍ರಮೇಶ್. ಅಲ್ಲದೆ, ಅಂತರಂಗದಲ್ಲಿ ಕಾಡುವ `ಭಯ’ ಹೋಗಲಾಡಿಸಲು ಚಿಣ್ಣರ ಮೇಳದಲ್ಲಿ ಫಿಯರ್ ಫ್ಯಾಕ್ಟರ್- ಸಾಹಸ ಕ್ರೀಡೆಗಳ ಮೈದಾನ ಸೃಷ್ಟಿಸಲಾಗಿದೆ.

Translate »