ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇಸ್ಕಾನ್ ಮಾದರಿ ಬಿಸಿಯೂಟ
ಮೈಸೂರು

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇಸ್ಕಾನ್ ಮಾದರಿ ಬಿಸಿಯೂಟ

May 31, 2019

ಮೈಸೂರು: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಕಾಮನ್ ಕಿಚನ್ ಮೂಲಕ ಬಿಸಿಯೂಟ ಪೂರೈಸಲು ಮೈಸೂರು ವಿಶ್ವ ವಿದ್ಯಾ ನಿಲಯವು ಮುಂದಾಗಿದೆ.

ಮೈಸೂರು ವಿಶ್ವವಿದ್ಯಾ ನಿಲ ಯದ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕ್ರಾಫರ್ಡ್ ಭವನದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ವಿಶ್ವವಿದ್ಯಾನಿಲಯದ ಹಾಸ್ಟೆಲ್ ಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಸುವ ನಿಟ್ಟಿ ನಲ್ಲಿ ಇಸ್ಕಾನ್ ಮಾದರಿಯಲ್ಲಿ ಕಾಮನ್ ಕಿಚನ್ ನಿರ್ಮಿಸಿ ವಿದ್ಯಾರ್ಥಿಗಳ ಸಂಖ್ಯೆಗನು ಗುಣವಾಗಿ ಆಹಾರ ತಯಾರಿಸಿ ಅಲ್ಲಿಂದಲೇ ಹಾಸ್ಟೆಲ್‍ಗಳಿಗೆ ಪೂರೈಸುವ ಹೊಸ ಯೋಜನೆ ಜಾರಿಗೆ ತರಲು ಸಭೆಯು ಮುಂದಾಗಿದೆ. ಅದರನ್ವಯ 15 ಹಾಸ್ಟೆಲ್‍ಗಳಿಗೆ ಹೊಸ ಮಾದರಿಯಲ್ಲಿ ತಯಾರಾದ ಆಹಾರ ಪೂರೈಕೆ ಆಗಲಿದ್ದು, 6 ತಿಂಗಳೊಳಗೆ ಯೋಜನೆ ಜಾರಿಗೆ ತರಲು ಪ್ರಯತ್ನಿಸಬೇಕೆಂದು ಸಿಂಡಿಕೇಟ್ ಸದಸ್ಯರು ಸಲಹೆ ನೀಡಿದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಸೃಷ್ಟಿಸುವ ಬಿಎಸ್ಸಿ, ಬಿಎಡ್ ಕೋರ್ಸ್ ಆರಂಭಿಸಲು ಉದ್ದೇಶಿಸಿದ್ದು, ಅನುಮತಿ ಪಡೆಯಲು ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ಸ್ ಎಜುಕೇಷನ್ (ಓಅಖಿಇ)ಗೆ ಪತ್ರ ಬರೆಯಲು ಸಭೆ ಸಮ್ಮತಿಸಿತು. ಮೈಸೂರು ನಗರ ವ್ಯಾಪ್ತಿಯಿಂದ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ಉಪ ಕೇಂದ್ರಗಳನ್ನು ವಿಸ್ತರಿಸುವ ಸಲುವಾಗಿ ಕೆ.ಆರ್.ನಗರದಲ್ಲಿ ಆರಂಭಿಸುವ ಸಂಬಂಧ ಸ್ಟ್ಯಾಚೂಟ್‍ಗೆ ಸಿಂಡಿಕೇಟ್ ಸಭೆ ಅಂಗೀಕಾರ ನೀಡಿತು.

Translate »