ಮೈಸೂರು: ನೀರು, ಆಸ್ಪತ್ರೆ, ಬಡಜನರ ಉದ್ಯೋಗಕ್ಕಾಗಿ ಕೈಗಾರಿಕೆಸ್ಕೃಗಳ ಸ್ಥಾಪನೆ ಜೊತೆಗೆ ಪ್ರಜಾತಂತ್ರ ವ್ಯವಸ್ಥೆಗೆ ಅಂದೇ ನಾಂದಿ ಹಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹಿರಿಯ ಸಂಸ್ಕೃತಿ ಚಿಂತಕ ರಘುರಾಂ ವಾಜಪೇಯಿ ಅಭಿಪ್ರಾಯಪಟ್ಟರು.
ಮೈಸೂರು ಅರಮನೆ ದಕ್ಷಿಣ ದ್ವಾರ ದಲ್ಲಿ ವರಾಹಸ್ವಾಮಿ ದೇವಸ್ಥಾನದ ಬಳಿ ಕರ್ನಾಟಕ ಸೇನಾ ಪಡೆ ಆಯೋಜಿಸಿದ್ದ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಂಟು ವರ್ಷದ ಬಾಲಕನಾಗಿದ್ದಾಗಲೇ ಅಧಿಕಾರ ಸಿಕ್ಕಿದಾಗ, ಜನರಿಗಾಗಿ ಕೆರೆ- ಕಟ್ಟೆಗಳನ್ನು ಕಟ್ಟುವಂತೆ ತಾಯಿಯ ಸೂಚನೆ ಯಂತೆ ಕೆರೆ ಕಟ್ಟೆಗಳನ್ನು ನಿರ್ಮಿಸಿದರು. ಕೆಆರ್ಎಸ್ ಅಣೆಕಟ್ಟೆ ನಿರ್ಮಿಸಿದರು. ಶಿಕ್ಷಣ, ಕಲೆ, ಸಂಸ್ಕೃತಿ, ಭಾಷೆ ಹೀಗೆ ಸರ್ವ ತೋಮುಖ ಬೆಳವಣಿಗೆಗೆ ಕಾರಣ ರಾದರು. ಅಣೆಕಟ್ಟೆಯ ಜೊತೆಗೆ ರೇಷ್ಮೆ ಕಾರ್ಖಾನೆ, ಗಂಧದ ಕಾರ್ಖಾನೆ, ಕೆ.ಆರ್. ಮಿಲ್, ಕನ್ನಡ ಸಾಹಿತ್ಯ ಪರಿಷತ್ ಹೀಗೆ ಅನೇಕ ಜನಪರ ಯೋಜನೆಗಳ ಮೂಲಕ ಅವರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ಗೌಡ ಮಾತನಾಡಿ, ಕೈಗಾರಿಕೆ ಗಳ ಜನಕ, ಮೈಸೂರಿನಲ್ಲಿ ವಿಶ್ವ ವಿದ್ಯಾ ನಿಲಯ ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುವಂತೆ ಮಾಡಿದರು. ನಾಲ್ವಡಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಿ, ಅವರ ಜೀವನವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಅರಮನೆಗೆ ಆಗಮಿಸಿದ್ದ ಪ್ರವಾ ಸಿಗರಿಗೆ ಮೈಸೂರು ಪಾಕ್ ಸಿಹಿ ವಿತರಿಸ ಲಾಯಿತು. ಕಾರ್ಯಕ್ರಮದಲ್ಲಿ ಡಾ. ಶಾಂತರಾಜೇ ಅರಸು, ಎಸ್ಜೆಕೆ ದೊರೆ ಸ್ವಾಮಿ, ಪ್ರಜೇಶ್, ಪ್ರದೀಪ್, ನಾಸಿರ್, ಪ್ರಭುಶಂಕರ್, ಮಿನಿ ಬಂಗಾರಪ್ಪ, ಆದೀಶ್, ಶ್ರೀನಿವಾಸ್ ರಾಜ್ಕುಮಾರ್, ಸ್ವಾಮಿ ಇನ್ನಿತರರು ಭಾಗವಹಿಸಿದ್ದರು.