ಜೂ.9ರಂದು ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿ ಗಣತಿ
ಮೈಸೂರು

ಜೂ.9ರಂದು ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿ ಗಣತಿ

June 8, 2019

ಮೈಸೂರು: ಪ್ರಸಿದ್ಧ ಪಕ್ಷಿಧಾಮವಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಧಾಮದಲ್ಲಿ ಜೂ.9ರಂದು ಪಕ್ಷಿಗಳ ಗಣತಿ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, 12 ಮಂದಿ ಪಕ್ಷಿ ತಜ್ಞರು ಹಾಗೂ 30 ನುರಿತ ಸಿಬ್ಬಂದಿಗಳನ್ನು ಗಣತಿಗೆ ಬಳಸಿಕೊಳ್ಳಲು ನಿಯೋಜಿಸಿದೆ.

ಪ್ರತಿ ವರ್ಷ ಪಕ್ಷಿಗಳ ಗಣತಿ ನಡೆಸಿ ಪಕ್ಷಿ ಧಾಮದಲ್ಲಿರುವ ಪಕ್ಷಿಗಳ ನಿಖರ ಅಂಕಿ ಅಂಶ, ಸಂತಾನೋತ್ಪತ್ತಿಗೆ ಪೂರಕ ವಾತಾ ವರಣ, ಹೊಸ ಪಕ್ಷಿಗಳ ಆಗಮನ ಸೇರಿ ದಂತೆ ಇನ್ನಿತರ ವಿಷಯಗಳ ಬಗ್ಗೆ ಅವ ಲೋಕಿಸಿ ವರದಿ ಸಿದ್ದಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜೂ.9ರಂದು ಬೆಳಿಗ್ಗೆ 6ರಿಂದ 9.30ರವರೆಗೆ ಈ ಸಾಲಿನ ಪಕ್ಷಿ ಗಣತಿ ನಡೆಸಲು ಇಲಾಖೆ ತೀರ್ಮಾನಿಸಿದೆ. ವೈಜ್ಞಾ ನಿಕವಾಗಿ ಗಣತಿ ನಡೆಸುವುದಕ್ಕಾಗಿ 12 ಮಂದಿ ಪಕ್ಷಿ ತಜ್ಞರು, ಅರಣ್ಯ ಇಲಾಖೆಯ 30 ಪರಿಣಿತ ಸಿಬ್ಬಂದಿಗಳನ್ನು ಐದು ತಂಡಗಳಾಗಿ ವಿಂಗಡಿಸಿ, ಗಣತಿ ನಡೆಸಲು ರೂಪುರೇಷೆ ಸಿದ್ದಪಡಿಸಲಾಗಿದೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ಒಟ್ಟು 28 ದ್ವೀಪಗಳಿವೆ. ಅವುಗಳಲ್ಲಿರುವ ಪಕ್ಷಿಗಳ ಸಂಖ್ಯೆ ಎಣಿಕೆ ಮಾಡಲು ತಲಾ 6 ಸದಸ್ಯ ರುಳ್ಳ 5 ತಂಡಗಳನ್ನು ರಚಿಸಿ, 5 ಬೋಟ್ ಗಳಲ್ಲಿ ಗಣತಿಗೆ ಕರೆದೊಯ್ಯಲಾಗುತ್ತದೆ. ಪ್ರತಿ ತಂಡಕ್ಕೆ ಕೆಲವು ದ್ವೀಪಗಳನ್ನು ನೀಡಿ, ಅವುಗಳಲ್ಲಿರುವ ಪಕ್ಷಿಗಳ ಎಣಿಕೆ ನಡೆಸಲು ಸೂಚಿಸಲಾಗುತ್ತದೆ. ಪ್ರತಿ ದ್ವೀಪದಲ್ಲಿ ಕಾಣ ಸಿಗುವ ಪಕ್ಷಿ, ಯಾವ ಜಾತಿಗೆ ಸೇರಿದ ಪಕ್ಷಿ, ಗಂಡು ಅಥವಾ ಹೆಣ್ಣು, ಎಷ್ಟು ಗೂಡು ಗಳಿವೆ, ಮರಿಗಳು, ಮೊಟ್ಟೆಗಳಿರುವುದು, ಹೊಸ ಪಕ್ಷಿ ಬಂದಿರುವ ಬಗ್ಗೆ ಗಣತಿ ವೇಳೆ ಸೂಕ್ಷ್ಮವಾಗಿ ಪರಿಶೀಲಿಸಿ ದಾಖ ಲೀಕರಿಸಲಾಗುತ್ತದೆ. ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಪಕ್ಷಿ ಗಣತಿ ನಡೆಸಲಾಗುತ್ತದೆ. ಗಣತಿಯ ಆರಂಭ ದಲ್ಲಿ ಪ್ರವಾಸಿಗರು ಓಡಾಡುವ ಸ್ಥಳ ಹಾಗೂ ಬೋಟಿಂಗ್ ಸ್ಥಳದಲ್ಲಿ ಗಣತಿ ನಡೆಸಲಾಗು ತ್ತದೆ. ಇದರಿಂದ ಎಂದಿನಂತೆ ಅಂದು ಬೆಳಿಗ್ಗೆ 8.30ರಿಂದಲೇ ಪ್ರವಾಸಿಗರಿಗೆ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶಿಸಬಹುದು. ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‍ಕುಮಾರ್ ನೇತೃತ್ವದಲ್ಲಿ ಆರ್‍ಎಫ್‍ಓ ಅನನ್ಯ ಕುಮಾರ್, ಡಿಆರ್‍ಎಫ್‍ಓ ಎಂ.ಪುಟ್ಟಮಾದೇಗೌಡ ಸಮ್ಮುಖದಲ್ಲಿ ಪಕ್ಷಿ ಗಣತಿ ನಡೆಯಲಿದೆ.

Translate »