ಮೈಸೂರು: ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮ ವಾರ ನಡೆದ ಸಭೆಯಲ್ಲಿ ಇತ್ತೀಚೆಗೆ ನಿಧನ ರಾದ ಮಾಜಿ ಶಾಸಕ ಎಂ.ಸತ್ಯನಾರಾಯಣ ಹಾಗೂ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದಿ. ಎಂ.ಸತ್ಯನಾರಾಯಣ ಹಾಗೂ ದಿ. ಗಿರೀಶ್ ಕಾರ್ನಾಡ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಿಸಿ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ. ಹೆಚ್.ವಿಜಯಶಂಕರ್ ಮಾತನಾಡಿ, ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರದ ಅಪ ರೂಪದ ಕೊಡುಗೆಯಂತಿದ್ದ ಮಾಜಿ ಶಾಸಕ ಎಂ.ಸತ್ಯನಾರಾಯಣ ಹಾಗೂ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ಕಳೆದು ಕೊಂಡಿದ್ದೇವೆ. ಈ ಇಬ್ಬರ ಸ್ಮರಣೆ ಮಾಡುವ ಮೂಲಕ ಗೌರವಿಸುವುದರೊಂದಿಗೆ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, 1978ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತಾಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾಗಿದ್ದ ಸತ್ಯನಾರಾಯಣ ಅವರಲ್ಲಿದ್ದ ಶಿಸ್ತು, ಬದ್ಧತೆ, ಪ್ರಾಮಾಣಿಕತೆ ಹಾಗೂ ಪಕ್ಷ ಸಂಘ ಟನೆಯ ಶಕ್ತಿ ನೋಡಿ 2008ರಲ್ಲಿ ಚಾಮುಂ ಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು ಎಂದು ಹೇಳಿದರು.
ಗಿರೀಶ್ ಕಾರ್ನಾಡ್ ಓರ್ವ ಮೇರು ವ್ಯಕ್ತಿತ್ವದ ವ್ಯಕ್ತಿ. ನಾಟಕ ರಚಿಸುವ ಮೂಲ ಕವೇ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡಿದರು. ಈ ಇಬ್ಬರು ಯುವ ಸಮುದಾಯಕ್ಕೆ ಆದರ್ಶವಾಗಿದ್ದರು. ಅವರ ಗುಣಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸುವತ್ತ ಯುವ ಜನತೆ ಮುಂದಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಧರ್ಮ ಸೇನಾ ಮಾತನಾಡಿ, ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡುವ ಸಂದರ್ಭದಲ್ಲಿ 120 ಮಂದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಎಂ.ಸತ್ಯನಾರಾಯಣ ಅವರು ಸೌಜನ್ಯದಿಂದ ನಡೆದುಕೊಳ್ಳುತ್ತಿ ದ್ದರು. ಬಿ-ಫಾರಂ ಪಡೆಯುವ ವೇಳೆ ತಲೆ ತಗ್ಗಿಸಿ ಪಡೆದುಕೊಳ್ಳುವ ಮೂಲಕ ತನ್ನಲ್ಲಿ ಯಾವುದೇ ಅಹಂ ಇಲ್ಲ ಎನ್ನುವುದನ್ನು ತೋರ್ಪಡಿಸಿದರು ಎಂದರು.
ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಮಾತನಾಡಿ, 2008ರಲ್ಲಿ ವಿಧಾನಸಭೆ ಪ್ರವೇ ಶಿಸಿದ್ದ ನಾನು, ಪುಟ್ಟರಂಗಶೆಟ್ಟಿ ಹಾಗೂ ಎಂ.ಸತ್ಯನಾರಾಯಣ ಅವರು ಸದನದಲ್ಲಿ ಒಂದೇ ಕಡೆ ಕೂರುತ್ತಿದ್ದೆವು. ಒಂದೇ ಕಡೆ ಊಟ ಮಾಡುತ್ತಿದ್ದೆವು. ಎಂದಿಗೂ ಅವರು ವಯಸ್ಸಿನಲ್ಲಿ ಚಿಕ್ಕವರಾಗಿರುವ ನಮ್ಮೊಂ ದಿಗೆ ದರ್ಪದಿಂದ ನಡೆದುಕೊಳ್ಳಲಿಲ್ಲ. ಸರಳ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಸರಳ, ಸಜ್ಜನಿಕೆ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರಲ್ಲದೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಗಿರೀಶ್ ಕಾರ್ನಾಡ್ ಹಲವು ನಾಟಕ, ಚಲನಚಿತ್ರಗಳ ಮೂಲಕ ಮೌಢ್ಯತೆ ವಿರುದ್ಧ ಬೆÀಳಕು ಚೆಲ್ಲುತ್ತಿದ್ದರು. ಇಂತಹ ಮಹಾನ್ ನಾಯಕರ ಪುಣ್ಯ ಸ್ಮರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಅವರ ಆದರ್ಶ ಪಾಲನೆಗೆ ಬದ್ಧರಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿದರು. ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಜಿ.ಪಂ. ಸದಸ್ಯ ರವಿಕುಮಾರ್, ಮುಖಂಡರಾದ ಡೈರಿ ವೆಂಕಟೇಶ್, ಬಸವಣ್ಣ, ಕೆ.ಪಿ.ಸ್ವಾಮಿ, ಈಶ್ವರ್ ಚಕ್ಕಡಿ, ಚಂದ್ರು ಇನ್ನಿತರರು ಪಾಲ್ಗೊಂಡಿದ್ದರು.