ಮೈಸೂರು: ಸ್ಕೂಟರ್‍ಗೆ ಡಿಕ್ಕಿ ಹೊಡೆದು, ವೃದ್ಧ ರೊಬ್ಬರ ಬಲಿ ಪಡೆದು ಪರಾರಿಯಾಗಿದ್ದ ಕಾರು ಮತ್ತು ಚಾಲಕನನ್ನು ದುರಂತ ನಡೆದ 34 ಗಂಟೆಯೊಳಗಾಗಿ ಮೈಸೂರಿನ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀ ಸರು ಬೆಂಗಳೂರಲ್ಲಿ ಪತ್ತೆ ಮಾಡಿದ್ದಾರೆ.
ಚಾಲಕ ನಾಸಿರ್ ಮತ್ತು ಆಡಿ ಕಾರನ್ನು (ಕೆಎ03-ಎಂಎಕ್ಸ್9699) ಮಂಗಳವಾರ ರಾತ್ರಿ ಬೆಂಗಳೂರಿನ ಜಯನಗರದ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆ ಮಾಡಿರುವ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿ, ವಾಹನದೊಂದಿಗೆ ಇಂದು ಬೆಳಿಗ್ಗೆ ಮೈಸೂರಿಗೆ ಕರೆತಂದಿದ್ದಾರೆ.
ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ ನಿರ್ದೇಶನದಂತೆ ಸಂಚಾರ ಎಸಿಪಿ ಜಿ.ಎನ್.ಮೋಹನ್ ಮಾರ್ಗದರ್ಶನದಲ್ಲಿ ಸಿದ್ದಾರ್ಥನಗರ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಗುರು ಕಾಮತ್, ಸಿಬ್ಬಂದಿಗಳಾದ ಹೇಮಂತ್, ಪ್ರಭಾಕರ್ ಹಾಗೂ ಕುಮಾರ ಸ್ವಾಮಿ, ಅಪಘಾತ ನಡೆದ ಸ್ಥಳದಲ್ಲಿ ಸಿಕ್ಕಿದ ಕಾರಿನ ಫೈಬರ್ ಚೂರೊಂದರ ಸುಳಿವಿನ ಬೆನ್ನತ್ತಿ ಕಾರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ 10ರಂದು ಬೆಳಿಗ್ಗೆ 10 ಗಂಟೆ ವೇಳೆಗೆ ಮೈಸೂರಿನ ನಾರಾಯಣ ಹೃದ ಯಾಲಯ ಸಮೀಪ ಹೋಂಡಾ ಆಕ್ಟೀ ವಾಗೆ ಡಿಕ್ಕಿ ಹೊಡೆದು ಈ ಆಡಿ ಕಾರು ಪರಾರಿ ಯಾಗಿತ್ತು. ಆಕ್ಟೀವಾ ಸವಾರ ಸಮೀವುಲ್ಲಾ ಖಾನ್ ಸ್ಥಳದಲ್ಲೇ ಅಸುನೀಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಸಿದ್ದಾರ್ಥ ನಗರ ಸಂಚಾರ ಠಾಣೆ ಪೊಲೀಸರು, ಮಹಜರು ವೇಳೆ ದೊರೆತ ಕಾರಿನ ಸಣ್ಣ ಫೈಬರ್ ಚೂರೊಂದನ್ನು ಕಾರು ಷೋ ರೂಂ, ಗ್ಯಾರೇಜ್‍ಗಳಲ್ಲಿ ತೋರಿಸಿದಾಗ ಅದು ಆಡಿ ಕಾರಿನದ್ದು ಎಂದು ತಿಳಿ ಯಿತು. ಘಟನಾ ಸ್ಥಳದ ತುಸು ದೂರ ದಲ್ಲಿರುವ ಗ್ರಾನೈಟ್ ಅಂಗಡಿ ಹಾಗೂ ಮಸೀದಿಯ ಸಿಸಿ ಕ್ಯಾಮರಾ ಫುಟೇಜ್ ಸಹಾಯದಿಂದ ಬೆನ್ನತ್ತಿದ ಪೊಲೀಸರಿಗೆ ಅಪಘಾತ ಮಾಡಿ ವೃದ್ಧನ ಸಾವಿಗೆ ಕಾರಣ ವಾಗಿದ್ದ ಆಡಿ ಕಾರು ಬೆಂಗಳೂರಿನ ಜಯನಗರದ ಅಪಾರ್ಟ್‍ಮೆಂಟ್‍ವೊಂದರ ಪಾರ್ಕಿಂಗ್ ಸ್ಥಳದಲ್ಲಿ ಪತ್ತೆಯಾಯಿತು.
ಆ ಕಾರು ಮಾಲೀಕ ರೆಹಮಾನ್ ಖಾನ್ ಎಂಬುವರು ಅದೇ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಅವರನ್ನು ಸಂಪರ್ಕಿಸಿದ ಪೊಲೀಸರು ವಿಷಯ ತಿಳಿಸಿ ದಾಗ ಘಟನೆ ನಡೆದಿರುವ ಬಗ್ಗೆ ಚಾಲಕ ನಾಸಿರ್ ತಿಳಿಸಿದ್ದ ಎಂಬುದು ತಿಳಿಯಿತು.
ಯಾವುದೋ ಕೆಲಸದ ಮೇಲೆ ಮೈಸೂ ರಿಗೆ ಕಳುಹಿಸಿದ್ದಾಗ ಚಾಲಕ ಅಪಘಾತ ಮಾಡಿ ನಿಲ್ಲಿಸದೇ ಬಂದಿದ್ದ ಎಂಬುದು ಖಚಿತ ವಾದ ಕಾರಣ ಪೊಲೀಸರು ನಾಸಿರ್‍ನನ್ನು ಬಂಧಿಸಿ ಆಡಿ ಕಾರನ್ನು ವಶಕ್ಕೆ ಪಡೆದರು.