ಮೈಸೂರು: ಜೀವನ ಶೈಲಿ, ಆಹಾರ ಸೇವನೆ ಮೊದಲಾದವು ಗಳಲ್ಲಿ ನೈಸರ್ಗಿಕ ಪದ್ಧತಿ ಅನುಸರಿಸುವ ಮೂಲಕ ಆರೋಗ್ಯ ಕಾಯ್ದುಕೊಳ್ಳುವುದು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ವಿಧಾನ ಕುರಿತು ಜೂ.15ರಂದು ಬೆಳಿಗ್ಗೆ 9.30 ಗಂಟೆಗೆ ಮೈಸೂರಿನ ಕಾಸ್ಮೋಪಾಲಿಟನ್ ಕ್ಲಬ್ನಲ್ಲಿ ಕಾರ್ಯಾಗಾರ ಹಮ್ಮಿ ಕೊಳ್ಳಲಾಗಿದೆ ಎಂದು ಬಾಲ್ಯ ಪ್ರತಿಷ್ಠಾನದ ಶೈಲೇಂದ್ರ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಇತ್ತೀಚೆಗೆ ಒತ್ತಡದ ಜೀವನದ ನಡುವೆ ಪ್ರಕೃತಿ ನೀಡಿರುವ ಆಹಾರವನ್ನು ಬಿಟ್ಟು, ರಾಸಾಯನಿಕಯುಕ್ತ ಆಹಾರ ಸೇವಿಸಿ, ಅನಾರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಫ್ರಿಡ್ಜ್ನಲ್ಲಿಟ್ಟ ಹಣ್ಣು, ತರಕಾರಿ ಸೇವಿಸಿ ನಾವಾಗಿಯೇ ಆನಾ ರೋಗ್ಯ ಪಡೆಯುತ್ತಿದ್ದೇವೆ. ಹೀಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಪ್ರಕೃತಿಯನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ನಮ್ಮ ಜೀವನವನ್ನು ಬದಲಿಸಿಕೊಳ್ಳ ಬೇಕಾಗಿದೆ. ಈ ಕುರಿತಂತೆ ಮೈಸೂರು ನಿವಾಸಿಗಳಿಗಾಗಿ ಜೀವನ ಶೈಲಿ ಬದಲಾವಣೆ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ಇಂದು ಪ್ರತಿಯೊಂದಕ್ಕೂ ಕೃತಕ ರಾಸಾಯನಿಕ ಬಳಸುತ್ತಿದ್ದೇವೆ. ಹೀಗಾಗಿ ಅದು ಮೈಸೂರಿನ ಕೊಳಚೆ ನೀರಿನ ಕೆರೆಗಳಿಗೆ ಸೇರಿ ಜಲಚರಗಳ ಸಾವಿಗೆ ಕಾರಣವಾಗುತ್ತಿದೆ. ಹೀಗಾಗಿ ನಾವು ತರಕಾರಿ ಸಿಪ್ಪೆ, ಅಂಟುವಾಳ ಕಾಯಿ ಇನ್ನಿತರೆ ಪದಾರ್ಥಗಳನ್ನು ಬಳಸಿ, ನೈಸರ್ಗಿಕ ಸೋಪು ಇನ್ನಿತರ ಪದಾರ್ಥ ತಯಾರಿಸಿಕೊಳ್ಳಬಹುದು ಎಂಬಿತ್ಯಾದಿ ಮಾಹಿತಿಗಳನ್ನು ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುವುದು ಎಂದರು. ಸುದ್ದಿ ಗೋಷ್ಠಿಯಲ್ಲಿ ಅನಿಲ್ ಸದಾನಂದ ಉಪಸ್ಥಿತರಿದ್ದರು.
ಜೂ.20ಕ್ಕೆ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ
ಮೈಸೂರು, ಜೂ.13(ಆರ್ಕೆಬಿ)- ಮೈಸೂರು ತಾಲೂಕಿನ ಶ್ಯಾದನಹಳ್ಳಿ ಕೆಆರ್ಎಸ್ ರಸ್ತೆಯ ಕುಸುಮಾ ಚಂದ್ರಶೇಖರ್ ಕಲ್ಯಾಣ ಮಂಟಪದ ಎದುರು ಸಪ್ತಶ್ರೀ ವೈದಿಕ ಗುರು ಕುಲ ಸೇವಾಶ್ರಮ ಟ್ರಸ್ಟ್ನಲ್ಲಿ ಜೂ.20ರಂದು ಮಧ್ಯಾಹ್ನ 12 ಗಂಟೆಗೆ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ ಹಾಗೂ ಯೋಗ ಕಾರ್ಯಕ್ರಮ ಆಯೋಜಿಸ ಲಾಗಿದೆ ಎಂದು ಪ್ರಾಧ್ಯಾಪಕ, ಉಪನಯನ ಸಮಿತಿ ಸದಸ್ಯ ಎಸ್.ಕೃಷ್ಣಮೂರ್ತಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಅಭಿನವ ಉಪನಯನ ಹಾಗೂ ಸಮಾಶ್ರಯಣ, ಸಾಮೂ ಹಿಕ ಗಾಯತ್ರಿಮಂತ್ರ ಉಪದೇಶ ಹಾಗೂ ಯೋಗ ಮತ್ತು ಯೋಗದಿಂದಾಗುವ ಲಾಭ ಕುರಿತು ತಿಳುವಳಿಕೆ ಮೂಡಿಸಲಾಗುವುದು ಎಂದು ಹೇಳಿದರು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ- 9481319111 ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷೆ ವೀಣಾ, ಗೋಪಾಲಕೃಷ್ಣ, ಪದ್ಮನಾಭ, ನಾಗೇಂದ್ರ, ಗಾಯತ್ರಿ ಉಪಸ್ಥಿತರಿದ್ದರು.