ನಾಳೆ `ರಬ್ಡಿ’ ಕನ್ನಡ ನಾಟಕ ಪ್ರದರ್ಶನ
ಮೈಸೂರು

ನಾಳೆ `ರಬ್ಡಿ’ ಕನ್ನಡ ನಾಟಕ ಪ್ರದರ್ಶನ

June 14, 2019

ಮೈಸೂರು: ಮೈಸೂರಿನ ರಂಗಾಯಣದ ಕಿರು ರಂಗ ಮಂದಿರ ದಲ್ಲಿ ಜೂ.15ರಂದು ಶನಿವಾರ ಸಂಜೆ 7 ಗಂಟೆಗೆ ರಂಗ ವರ್ತುಲ ತಂಡದಿಂದ `ರಬ್ಡಿ’ ಕನ್ನಡ ನಾಟಕ ಪ್ರದರ್ಶನವಾಗಲಿದೆ. ಹಲವಾರು ಯಶಸ್ವಿ ಪ್ರಯೋಗಗಳನ್ನು ನೀಡಿರುವ ರಂಗ ವರ್ತುಲ ತಂಡ ರಾಷ್ಟ್ರ ಪ್ರಶಸ್ತಿ ವಿಜೇತ `ರಬ್ಡಿ’ ಹಾಸ್ಯ ನಾಟಕದ 53ನೇ ಪ್ರಯೋಗ ಮೈಸೂರಿನಲ್ಲಿ ನಡೆಯಲಿದೆ.

ನೌಶೀಲ್ ಮೆಹ್ತಾ, ನಿತೀಶ್ ಶ್ರೀಧರ್, ಹೇಮ ಲತಾ ಲೋಕೇಶ್ ರಚಿಸಿ, ನಿತೀಶ್ ಶ್ರೀಧರ್ ನಿರ್ದೇಶಿರುವ ನಾಟಕ ಈಗಾಗಲೇ ಅಮೇರಿಕಾದಲ್ಲಿ ಅತೀ ಹೆಚ್ಚು ಅಂದರೆ 17 ಹೌಸ್‍ಫುಲ್ ಪ್ರದರ್ಶನಗಳನ್ನು ಕಂಡ ಕನ್ನಡದ ಮೊದಲ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನಿರ್ದೇಶಕ ನಿತೀಶ್ ಶ್ರೀಧರ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಣ್ಣು, ಜಲ್ಲಿ ಹೊತ್ತು ಜೀವನ ಸಾಗಿಸುವ ಸಾವಂತ್ರಿ ಮತ್ತು ಅವಳ ಬುದ್ದಿಮಾಂದ್ಯ ಅಂಗವಿಕಲ ಮಗಳು ಪುಟ್ಟಕ್ಕನ ಸುತ್ತ ರಬ್ಡಿ ನಾಟಕ ಸಾಗುತ್ತದೆ. ರಘುನಂದನ್ ರಾಮಕೃಷ್ಣ ಸಂಗೀತ ನಿರ್ದೇಶಿಸಿದ್ದಾರೆ. ಟಿಕೆಟ್‍ಗಳಿಗಾಗಿ ಮೊ- 7349574448 ಸಂಪರ್ಕಿಸಬಹುದು.

Translate »