ತುಂಡಾಗಿ ಕಾರಿನ ಮೇಲೆ ಬಿದ್ದ ವಿದ್ಯುತ್ ತಂತಿ; ಅದೃಷ್ಟವಶಾತ್ ತಪ್ಪಿದ ಅನಾಹುತ
ಮೈಸೂರು

ತುಂಡಾಗಿ ಕಾರಿನ ಮೇಲೆ ಬಿದ್ದ ವಿದ್ಯುತ್ ತಂತಿ; ಅದೃಷ್ಟವಶಾತ್ ತಪ್ಪಿದ ಅನಾಹುತ

June 14, 2019

ಮೈಸೂರು: ವಿದ್ಯುತ್ ತಂತಿ ತುಂಡಾಗಿ ಕಾರಿನ ಮೇಲೆ ಬಿದ್ದ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ವಿಜಯನಗರ ರೈಲ್ವೆ ಬಡಾವಣೆಯಲ್ಲಿ ಗುರುವಾರ ಬೆಳಿಗ್ಗೆ ತೆಂಗಿನ ಗರಿ ಬಿದ್ದ ಪರಿಣಾಮ ವಿದ್ಯುತ್ ತಂತಿಯೊಂದು ತುಂಡಾಗಿ, ಕಾರಿನ ಮೇಲೆ ಬಿದ್ದಿದೆ. ಸದ್ಯ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ತಂತಿ ತುಂಡಾಗಿರುವ ವಿಷಯ ತಿಳಿದ ವಿವಿ ಮೊಹಲ್ಲಾ ವಿಭಾಗದ ಚೆಸ್ಕಾಂ ಸಿಬ್ಬಂದಿ, ತಕ್ಷಣ ಇಡೀ ಬಡಾವಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ದುರಸ್ತಿಪಡಿಸಿದರು.

ಮರದ ಕೊಂಬೆಗಳು, ತೆಂಗಿನ ಗರಿಗಳು ಬಿದ್ದು ಆಗಾಗ್ಗೆ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತವೆ. ಕೂಡಲೇ ಚೆಸ್ಕಾಂಗೆ ಮಾಹಿತಿ ನೀಡಿದರೆ ಸಂಪರ್ಕ ಕಡಿತಗೊಳಿಸಿ, ಅಪಾಯ ತಪ್ಪಿಸಬಹುದು. ಯಾವಾಗಲೋ ತುಂಡಾಗಿ ಬಿದ್ದಿರುವ ತಂತಿಯಲ್ಲಿ ವಿದ್ಯುತ್ ಪ್ರವಹಿಸುವುದಿಲ್ಲ ಎಂದುಕೊಂಡರೆ ಅಪಾಯ ಕಟ್ಟಿಟ್ಟಬುತ್ತಿ. ಈ ಬಗ್ಗೆ ಎಚ್ಚರವಹಿಸುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಹೀಗೆ ತುಂಡಾಗಿ ಬಿದ್ದ ತಂತಿಯ ಬಳಿ ಸುಳಿಯದಿದ್ದರೆ ಒಳ್ಳೆಯದು.

Translate »