ಐಎಂಎ ಸಂಸ್ಥೆಯಿಂದ ಮೈಸೂರಿನ ನೂರಾರು ಮಂದಿಗೆ ವಂಚನೆ
ಮೈಸೂರು

ಐಎಂಎ ಸಂಸ್ಥೆಯಿಂದ ಮೈಸೂರಿನ ನೂರಾರು ಮಂದಿಗೆ ವಂಚನೆ

June 13, 2019

ಮೈಸೂರು: ಐಎಂಎ ಸಂಸ್ಥೆಯ ವಂಚನೆಗೆ ಮೈಸೂರಿ ನವರೂ ಬಲಿಯಾಗಿದ್ದು, ವಂಚನೆಗೊಳ ಗಾದವರು ಅಗತ್ಯ ದಾಖಲೆಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಬಹುದಾಗಿದೆ.

ಐಎಂಎ ಸಂಸ್ಥೆಗೆ ಹಣ ಹೂಡಿಕೆ ಮಾಡಿ, ಕಳೆದುಕೊಂಡಿರುವ ಮೈಸೂರಿನ ನೂರಾರು ಮಂದಿ ಬೆಂಗಳೂರಿಗೆ ತೆರಳಿ ದೂರು ನೀಡುತ್ತಿರುವ ವಿಚಾರ ತಿಳಿದ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ, ವಂಚನೆಗೊಳಗಾದವರು ಅಗತ್ಯ ದಾಖಲೆಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಸ್ವೀಕೃತಿ ಪಡೆಯ ಬಹುದು. ನಗರದ ಎಲ್ಲಾ ಠಾಣೆಗಳಲ್ಲಿ ದಾಖಲಾದ ದೂರುಗಳನ್ನು ಕ್ರೂಢೀ ಕರಿಸಿ, ಪ್ರಕರಣ ದಾಖಲಿಸಿ, ಎಸ್‍ಐಟಿ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗು ವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ವಂಚನೆ ಗೊಳಗಾದವರು ನಿರ್ಬೀತಿಯಿಂದ ದೂರು ನೀಡುವಂತೆ ತಿಳಿಸಿದ ಬೆನ್ನಲ್ಲೇ 30ಕ್ಕೂ ಹೆಚ್ಚು ದೂರು ದಾಖಲಾಗಿವೆ.

ಕೋಟ್ಯಾಂತರ ರೂ. ಹೂಡಿಕೆ: ಮುಸ್ಲಿಂ ಧರ್ಮದಲ್ಲಿ ಬಡ್ಡಿ ಪಡೆಯುವುದು ಪಾಪ ಕೃತ್ಯವೆಂಬ ನಂಬಿಕೆಯಿದೆ. ಹಾಗಾಗಿ ಹಣ ಹೂಡಿಕೆ ಮಾಡುವವರಿಗೆ ಒಟ್ಟು ಆದಾಯವನ್ನು ಹಂಚಿಕೆ ಮಾಡುವುದಾಗಿ ನಂಬಿಸಿ, ಲಕ್ಷಾಂತರ ಜನರನ್ನು ಐಎಂಎ ತನ್ನ ಮೋಸದ ಜಾಲಕ್ಕೆ ಸಿಲುಕಿಸಿದೆ. ಹೂಡಿಕೆ ಹಣಕ್ಕೆ ಉತ್ತಮವಾದ ಫ್ರಾಫಿಟ್ ಶೇರ್ ಸಿಗುತ್ತದೆ ಎಂಬ ಆಸೆಯಿಂದ ತಮ್ಮಲ್ಲಿದ್ದ ಉಳಿತಾಯ ಹಣದ ಜೊತೆಗೆ, ಆಸ್ತಿ, ಚಿನ್ನಾಭರಣ ಅಡವಿಟ್ಟು ಅದರಿಂದ ಬಂದ ಹಣವನ್ನೂ ಹೂಡಿಕೆ ಮಾಡಿ ದ್ದಾರೆ. ಆಸ್ತಿ ಮಾರಾಟ ಮಾಡಿ, ಹಣ ಹೂಡಿಕೆ ಮಾಡಿರುವವರ ಸಂಖ್ಯೆಯೂ ಕಡಿಮೆಯಿಲ್ಲ. ಹೀಗೆಯೇ ಐಎಂಎ ಸಂಸ್ಥೆಗೆ ಹಣ ಹೂಡಿದರೆ ಹೆಚ್ಚು ಲಾಭಗಳಿಸಬಹು ದೆಂದು ಮೈಸೂರಿನ ನೂರಾರು ಮಂದಿಯೂ ಹಣ ಕಟ್ಟಿ, ಕಳೆದುಕೊಂಡಿದ್ದಾರೆ.

ಮೈಸೂರಿನ ಕಲ್ಯಾಣಗಿರಿ, ರಾಜೀವ್ ನಗರ, ಅಜೀಜ್‍ಸೇಠ್ ನಗರ, ಸಾತಗಳ್ಳಿ, ಬನ್ನಿಮಂಟಪ, ಉದಯಗಿರಿ, ಮಂಡಿ ಮೊಹಲ್ಲಾ, ನಜರ್‍ಬಾದ್ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಐಎಂಎ ವಂಚನೆ ಬಲೆಗೆ ಬಿದ್ದವರಿದ್ದಾರೆ. ಮುಂದೇನು ಮಾಡುವು ದೆಂದು ತೋಚದೆ ಸ್ಥಳೀಯ ಕಾರ್ಪೊ ರೇಟರ್‍ಗಳು, ಮುಖಂಡರ ಬಳಿ ಹೋಗಿ ಸಹಕಾರ ಕೇಳುತ್ತಿದ್ದಾರೆ. ಹಾಗೆಯೇ ಮಾಜಿ ಕಾರ್ಪೊರೇಟರ್ ಶೌಖತ್ ಪಾಷಾ ಹಾಗೂ ಫೈರೋಜ್ ಖಾನ್ ಅವರನ್ನು ಭೇಟಿ ಮಾಡಿ, ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಶೌಖತ್ ಪಾಷಾ, ನಮ್ಮ ಷರಿಯತ್ ಇಸ್ಲಾಮಿಕ್ ರೂಲ್ಸ್‍ನಲ್ಲಿ ಬಡ್ಡಿ ತೆಗೆದುಕೊಳ್ಳುವಂತಿಲ್ಲ. ಹಾಗಾಗಿ ಫ್ರಾಫಿಟ್ ಶೇರ್ ನೀಡುವುದಾಗಿ ಹೇಳಿದ್ದರಿಂದ ಲಕ್ಷಾಂ ತರ ಜನರು ಕೋಟ್ಯಾಂತರ ರೂ. ಹಣ ಹೂಡಿಕೆ ಮಾಡಿದ್ದಾರೆ. ಆರಂಭದ ಆರೇಳು ವರ್ಷ ಉತ್ತಮ ಪ್ರಾಫಿಟ್ ನೀಡಿದ್ದರಿಂದ ಆಸ್ತಿ, ಆಭರಣ ಮಾರಿ ಹಣ ಹೂಡಿಕೆ ಮಾಡಿ ದ್ದಾರೆ. ತಿ.ನರಸೀಪುರದ ಗರ್ಗೇಶ್ವರಿಯಲ್ಲಿ ಹೆಚ್ಚು ಜನ ಹಣ ಹೂಡಿದ್ದಾರೆ.

ಇದೆಲ್ಲವನ್ನೂ ಇಂದು ಬೆಳಿಗ್ಗೆ ನಗರ ಪೊಲೀಸ್ ಆಯುಕ್ತರಾದ ಕೆ.ಟಿ.ಬಾಲಕೃಷ್ಣ ಅವರ ಬಳಿ ತಿಳಿಸಿ, ಸ್ಥಳೀಯ ಪೊಲೀಸ ರಿಗೆ ದೂರು ನೀಡಲು ಅವಕಾಶ ಮಾಡಿ ಕೊಡುವಂತೆ ಮನವಿ ಮಾಡಲಾಯಿತು. ಅದಕ್ಕೆ ಸ್ಪಂದಿಸಿದ ಅವರು ಕೂಡಲೇ ಪತ್ರಿಕಾ ಪ್ರಕಟಣೆ ಹೊರಡಿಸಿ, ವಂಚನೆ ಗೊಳಗಾದವರು ನೀಡುವ ದೂರು ಸ್ವೀಕ ರಿಸಿ, ಸ್ವೀಕೃತಿ ಪ್ರತಿ ನೀಡುವಂತೆ ಸೂಚಿಸಿದರು. ಹೀಗೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ದೂರು ಪಡೆಯುವಂತೆ ಸೂಚನೆ ನೀಡಿದರೆ ಅನುಕೂಲವಾಗುತ್ತದೆ. ಇಲ್ಲವೇ ಮೈಸೂರು ನಗರದಲ್ಲೇ ಗ್ರಾಮಾಂತರ ಭಾಗದ ಜನರಿಗೆ ಪ್ರತ್ಯೇಕ ದೂರು ಸ್ವೀಕೃತಿ ಕೇಂದ್ರ ತೆರೆಯಬೇಕೆಂದು ಶೌಖತ್ ಪಾಷಾ ಮನವಿ ಮಾಡಿದ್ದಾರೆ.

ಮಾಜಿ ಮೇಯರ್ ಅಯೂಬ್‍ಖಾನ್, ಈ ರೀತಿ ಹೆಚ್ಚು ಲಾಭದ ಆಸೆ ತೋರಿ ಸುವ ಮೋಸದ ಕಂಪನಿಗಳಿಗೆ ಜನ ಮಾರು ಹೋಗಬಾರದೆಂದು ಮನವಿ ಮಾಡಿದ್ದಾರೆ. ಇತ್ತೀಚಿಗೆ ಮೈಸೂರಲ್ಲೇ ನಾಲ್ಕೈದು ಸಂಸ್ಥೆಗಳು ಹೀಗೆ ಜನರ ಹಣ ಲಪಟಾಯಿಸಿಕೊಂಡು ಹೋಗಿವೆ. ಇಲ್ಲಿ ಜನರಿಂದ ಸಂಗ್ರಹಿಸುವ ಹಣವನ್ನು ದುಬೈ ನಲ್ಲಿ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಕೆಲ ತಿಂಗಳು ಉತ್ತಮ ಲಾಭ ನೀಡಿ, ಇದ್ದಕ್ಕಿ ದ್ದಂತೆ ನಾಪತ್ತೆಯಾಗಿ ದುಬೈನಲ್ಲಿ ನೆಲೆಸುತ್ತಾರೆ. ಅಲ್ಲಿಗೆ ನಮ್ಮ ಎಸ್‍ಐಟಿ ಹೋಗಿ ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

Translate »