ಸುಂದರ ತಾಣವಾಗಿದೆ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್
ಮೈಸೂರು

ಸುಂದರ ತಾಣವಾಗಿದೆ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್

June 13, 2019

ಮೈಸೂರು: ಬೈನಾಕ್ಯುಲರ್ ಅಳ ವಡಿಕೆಯಿಂದಾಗಿ ಸುಂದರ ರೂಪ ಪಡೆದಿದ್ದ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಇದೀಗ ವಿವಿಧ ಗಿಡಗಳುಳ್ಳ ಆಕರ್ಷಕ ಪಾಟ್‍ಗಳೊಂದಿಗೆ ಜನಾಕರ್ಷಣೀಯ ತಾಣವಾಗಿ ಕಂಗೊಳಿಸುತ್ತಿದೆ.

ಮೈಸೂರು ಭಾಗದ ಪ್ರಮುಖ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವೂ ಆಗಿರುವ ಚಾಮುಂಡಿಬೆಟ್ಟ ನಗರಕ್ಕೆ ಮುಕುಟಪ್ರಾಯ ವಾಗಿದೆ. ದಿನದಿಂದ ದಿನಕ್ಕೆ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ವ್ಯೂ ಪಾಯಿಂಟ್ ವಿದೇಶಿಗರಿಗೂ ಮುದ ನೀಡುತ್ತಿದೆ. ಈ ನಡುವೆ ಪ್ರವಾಸಿಗರು ಎಸೆದು ಹೋಗುವ ಪ್ಲಾಸ್ಟಿಕ್ ಸೇರಿದಂತೆ ವಿವಿಧ ಅನುಪಯುಕ್ತ ವಸ್ತುಗಳು ಬೆಟ್ಟದ ಸೌಂದÀರ್ಯಕ್ಕೆ ಧಕ್ಕೆ ಯುಂಟು ಮಾಡುತ್ತಿದ್ದವು. ಈ ನಡುವೆ ವಿವಿ ಧೆಡೆಯಿಂದ ಭಕ್ತರು ಹಾಗೂ ಪ್ರವಾಸಿಗರು ಬೆಟ್ಟದ ವ್ಯೂ ಪಾಯಿಂಟ್‍ನಿಂದ ಮೈಸೂರು ನಗರದ ಸೌಂದರ್ಯ, ಅರಮನೆ, ದಸರಾ ವಸ್ತುಪ್ರದ ರ್ಶನ, ರೇಸ್‍ಕೋರ್ಸ್, ಸಂತ ಫಿಲೋಮಿನಾ ಚರ್ಚ್, ಮೈಸೂರು ವಿಶ್ವವಿದ್ಯಾನಿಲಯ, ಕುಕ್ಕರಹಳ್ಳಿ ಕೆರೆ, ಕೆಆರ್‍ಎಸ್ ಸೇರಿದಂತೆ ವಿವಿಧ ಪ್ರವಾಸಿ ತಾಣವನ್ನು ವೀಕ್ಷಿಸಲು ಜಿಲ್ಲಾಡಳಿದ ಎರಡು ಬೈನಾಕ್ಯುಲರ್ ಅಳವಡಿಸಿದ್ದು, ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿ ನಗರದ ಸೌಂದÀರ್ಯವನ್ನು ವೀಕ್ಷಿಸಿ, ಆನಂದಿಸುತ್ತಿದ್ದಾರೆ.

ಸುಂದರವಾಯಿತು ತಾಣ: ಕಳೆದ ತಿಂಗಳ ವರೆಗೂ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಸುತ್ತಲಿನ ಸ್ಥಳ ಸಾಮಾನ್ಯ ರಸ್ತೆಯಂತಿತ್ತು. ಮೈಸೂರಿ ನಿಂದ ಬರುವ ವಾಹನ ಸವಾರರು ವ್ಯೂ ಪಾಯಿಂಟ್ ಬಳಿ ಏಕಾಏಕಿ ಬಲಕ್ಕೆ ತಿರುಗಿ ಬೈನಾಕ್ಯುಲರ್ ಇರುವ ಸ್ಥಳದತ್ತ ಧಾವಿಸುತ್ತಿದ್ದರು. ಇದರಿಂದ ಬೆಟ್ಟದಿಂದ ಕೆಳಗಿಳಿಯುತ್ತಿದ್ದ ವಾಹನ ಸವಾರರಿಗೆ ಕಿರಿಕಿರಿಯೊಂದಿಗೆ, ಸಣ್ಣ-ಪುಟ್ಟ ಅಪಘಾತಗಳಾ ಗುತ್ತಿತ್ತು. ಇದನ್ನು ಮನಗಂಡು ನಮ್ಮ ಮೈಸೂರು ಫೌಂಡೇಷನ್ ವ್ಯೂ ಪಾಯಿಂಟ್‍ಗೆ 10 ಲಕ್ಷ ರೂ. ವೆಚ್ಚ ಮಾಡಿ ಸುಂದರ ರೂಪ ನೀಡಿದೆ. ಇದರಿಂದ ರಸ್ತೆ ವಿಭಜಕ ರೂಪದಲ್ಲಿ ಪಾಟ್ ಹೊಂದಿರುವ 26 ಕಾಂಕ್ರಿಟ್ ಬ್ಲಾಕ್‍ಗಳನ್ನಿಡಲಾಗಿದೆ. ಗಿಡ ನೆಟ್ಟಿ ರುವ ಭಾಗದಲ್ಲಿ ಬಿಳಿ, ಹಸಿರು ಬಣ್ಣ ಬಳಿದಿದ್ದರೆ, ರಸ್ತೆ ವಿಭಜಕಕ್ಕೆ ಕಪ್ಪು, ಹಳದಿ ಬಣ್ಣ ಬಳಿದಿರು ವುದರಿಂದ ಆಕರ್ಷಕವಾಗಿ ಕಾಣುತ್ತದೆ. ಇದರೊಂದಿಗೆ ಪಾರಂಪರಿಕ ಶೈಲಿಗೆ ಅನುಗುಣವಾದ 15 ಪಾಟ್ ಗಳನ್ನು ಇಟ್ಟು, ವಿವಿಧ ಹೂವಿನ ಗಿಡ ಬೆಳೆಸ ಲಾಗಿದೆ. ಬೆಟ್ಟಕ್ಕೆ ಬರುವ ಪ್ರವಾಸಿಗರು ತಿನಿಸು ತಿಂದು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ಎಸೆಯದಂತೆ ಮಾಡಲು ಡಸ್ಟ್‍ಬಿನ್ ಇಡಲಾಗಿದೆ.

ಜನರಲ್ಲಿ ಜಾಗೃತಿ: ಬೆಟ್ಟಕ್ಕೆ ಬರುವ ಪ್ರವಾಸಿ ಗರಲ್ಲಿ ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಪರಿಸರ ಸಂರಕ್ಷಣೆ, ಗಿಡ-ಮರ ಬೆಳೆಸುವುದು, ಸ್ವಚ್ಛತೆ ಕಾಪಾಡುವುದು ಸೇರಿದಂತೆ ವಿವಿಧ ಜಾಗೃತಿ ಮೂಡಿಸುವ ಸ್ಟಿಕ್ಕರ್ ಹಾಕಲಾಗಿದೆ. ಕಸ ಡಸ್ಟ್ ಬಿನ್‍ಗಳಲ್ಲೇ ಹಾಕುವುದರೊಂದಿಗೆ ಬೆಟ್ಟದ ಪಾವಿತ್ರ್ಯತೆಯನ್ನು ಕಾಪಾಡುವಂತೆಯೂ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ.

ನಮ್ಮ ಮೈಸೂರು ಫೌಂಡೇಷನ್ ಪ್ರಾಣಿ-ಪಕ್ಷಿ ಗಳಿಗೆ ನೀರುಣಿಸಲು ಕ್ರಮ ಕೈಗೊಂಡಿದೆ. ತಾವರೆ ಕಟ್ಟೆಯಿಂದ ನಂದಿಗೆ ಹೋಗುವ ರಸ್ತೆಯಲ್ಲಿ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದೆ. 250 ಲೀ. ಸಾಮಥ್ರ್ಯದ 14 ಡ್ರಮ್ ಅಳವಡಿಸಿದೆ. ಪೈಪ್ ಮೂಲಕ ಗಿಡಗಳಿಗೆ ನೀರು ಸರಬರಾಜು ಮಾಡ ಲಾಗುತ್ತಿದೆ. ಒಮ್ಮೆ ಡ್ರಮ್‍ಗೆ ನೀರು ತುಂಬಿದರೆ ಮೂರು ಕಿ.ಮೀ ದೂರದವರೆಗೆ ನೆಟ್ಟಿರುವ ಗಿಡಗಳಿಗೆ 12 ಗಂಟೆ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ.

ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಪೂರೈಸಲು ರಸ್ತೆ ಬದಿಯಲ್ಲಿ 20ಕ್ಕೂ ಹೆಚ್ಚು ಕಾಂಕ್ರಿಟ್ ತೊಟ್ಟಿ ಇಡಲಾಗಿದೆ. ಮರಗಳಿಗೆ 1200 ಬಟ್ಟಲುಗಳನ್ನು ನೇತು ಹಾಕಲಾಗಿದೆ. ತಾವರೆಕಟ್ಟೆ ರಸ್ತೆಯಲ್ಲಿ 650 ಗಿಡ ನೆಡಲಾಗಿದೆ. ಮನುವನ ಪಾರ್ಕ್‍ನಲ್ಲಿ 250 ಔಷಧೀಯ ಗಿಡ ನೆಟ್ಟು ಪೋಷಿಸಲಾಗುತ್ತಿದೆ. 300 ಗಿಡಗಳಿಗೆ ಟ್ರೀ ಗಾರ್ಡ್ ಹಾಕಲಾಗಿದೆ. ಎಲ್ಲಾ ಕಾರ್ಯಗಳಿಗೆ ನಮ್ಮ ಮೈಸೂರು ಫೌಂಡೇಷನ್ 35 ಲಕ್ಷ ರೂ. ವೆಚ್ಚ ಮಾಡಿದೆ ಎಂದು ಟ್ರಸ್ಟಿ ಎನ್.ಮಲ್ಲೇಶ್ ತಿಳಿಸಿದ್ದಾರೆ.

ನಮ್ಮ ಮೈಸೂರು ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ದಶರಥ್, ಸಂಸ್ಥಾಪಕ ಅಧ್ಯಕ್ಷೆ ಪವಿತ್ರ, ಟ್ರಸ್ಟಿಗಳಾದ ವೀರಾಶ್, ರಮೇಶ್, ಶ್ರೀರಾಜ್, ಕಲ್ಯಾಣ, ಚಂದನ್, ರಂಗರಾಜ್, ಅನುರಾಧ, ನಿಹಾರಿಕಾ ಹಾಗೂ ಇನ್ನಿತರರು ವ್ಯೂ ಪಾಯಿಂಟ್ ಸೌಂದರ್ಯ ಹೆಚ್ಚಿಸುವುದಕ್ಕೆ ಕೈ ಜೋಡಿಸಿದ್ದಾರೆ.

ಎಂ.ಟಿ.ಯೋಗೇಶ್‍ಕುಮಾರ್

Translate »