ಅಕ್ಕಿ ಆಯಿತು ಈಗ ತರಕಾರಿ,ಸೊಪ್ಪಿನ ಬೆಲೆ ಏರಿಕೆ ಸರದಿ
ಮೈಸೂರು

ಅಕ್ಕಿ ಆಯಿತು ಈಗ ತರಕಾರಿ,ಸೊಪ್ಪಿನ ಬೆಲೆ ಏರಿಕೆ ಸರದಿ

June 15, 2019

ಮೈಸೂರು: ಅಕ್ಕಿ ಬೆಲೆ ಗಗನಕ್ಕೇರಿರುವಾಗಲೇ ತರಕಾರಿ ಮತ್ತು ಸೊಪ್ಪಿನ ದರದಲ್ಲೂ ಹೆಚ್ಚಳವಾಗಿದ್ದು, ತರಾವರಿ ತರಕಾರಿ, ಸೊಪ್ಪು ಹಾಕಿ ರುಚಿರುಚಿಯಾದ ಅಡುಗೆ ಮಾಡಬೇಕೆನ್ನುವವರೀಗ ದುಬಾರಿ ಬೆಲೆ ತೆರಬೇಕಾಗಿದೆ.

ವೆಜಿಟೆಬಲ್ ಬಿರಿಯಾನಿ ಅಥವಾ ಪಲಾವ್ ಮಾಡಬೇಕಾದರೆ ಈ ಮೂರು ಪದಾರ್ಥಗಳು ಇರಲೇಬೇಕು. ಆದರೆ ಇವುಗಳ ಬೆಲೆಯೀಗ ಗಗನಮುಖಿ ಯಾಗಿದ್ದು, ಈ ತಿಂಡಿ ಮಾಡಬೇಕಿ ದ್ದಲ್ಲಿ ಜೇಬು ಖಾಲಿ ಮಾಡಿಕೊಳ್ಳದೇ ವಿಧಿಯಿಲ್ಲ ಎನ್ನುವಂತಾಗಿದೆ.
ಕಳೆದ 15 ದಿನಗಳಿಂದೀಚೆಗೆ ತರ ಕಾರಿ ಹಾಗೂ ಸೊಪ್ಪಿನ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದು, ಮಳೆ ಕೊರತೆಯಿಂದ ಇಳುವರಿ ಕುಸಿತವಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ ಎನ್ನುವ ಅಭಿ ಪ್ರಾಯ ಮೈಸೂರಿನ ದೇವರಾಜ ಮಾರು ಕಟ್ಟೆ ಹಾಗೂ ಅಗ್ರಹಾರದ ವಾಣಿ ವಿಲಾಸ ಮಾರುಕಟ್ಟೆಯ ವ್ಯಾಪಾರಿ ಗಳಿಂದ ವ್ಯಕ್ತವಾಗಿದೆ.

ಅದೇ ರೀತಿ ಬಿಸಿಲ ಬೇಗೆಗೆ ಬೆಳೆ ಹಾನಿ ಯಾದ ಪರಿಣಾಮ ಪೂರೈಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಜೊತೆಗೆ ಇದು ಮದುವೆ ಸುಗ್ಗಿಯ ಕರಾಮತ್ತು ಎಂದು ಹೇಳುವ ವ್ಯಾಪಾರಿಗಳು, ಮೈಸೂರಲ್ಲಿ ಇದೇ ಮೊದಲ ಬಾರಿ ಇಷ್ಟು ದುಬಾರಿ ಪ್ರಮಾಣದಲ್ಲಿ ಬೆಲೆ ಹೆಚ್ಚಳಗೊಂಡಿದೆ ಎನ್ನುತ್ತಾರೆ.

ವಿವಿಧ ಸೊಪ್ಪಿನ ಬೆಲೆಗಳ ಬಗ್ಗೆ ಮಾಹಿತಿ ನೀಡಿದ ದೇವರಾಜ ಮಾರುಕಟ್ಟೆ ವ್ಯಾಪಾರಿ ರವಿ, ಕಳೆದ 15 ದಿನಗಳಿಂದ ಸೊಪ್ಪಿನ ಬೆಲೆ ಹೆಚ್ಚಾಗಿದೆ. 20 ರೂ. ಇದ್ದ ಒಂದು ಕಂತೆ ಕೊತ್ತಂಬರಿ ಸೊಪ್ಪು ಇದೀಗ 40 ರೂ.ಗೆ ಜಿಗಿದಿದೆ. ಮೆಂತ್ಯ ಸೊಪ್ಪು 10 ರೂ.ಗೆ ಎರಡು ಕಂತೆ ಸಿಗು ತ್ತಿತ್ತು. ಈಗ ಇದು ಒಂದು ಕಂತೆಗೆ 10 ರೂ. ಆಗಿದೆ. ಪುದಿನ ಸೊಪ್ಪು ಕಂತೆಗೆ 10 ರೂ.ನಿಂದ 20 ರೂ.ಗೆ ಏರಿಕೆ ಕಂಡಿದೆ ಎಂದು ದರದ ಬಗ್ಗೆ ಮಾಹಿತಿ ನೀಡಿದರು.

ಯಥಾಸ್ಥಿತಿಯಲ್ಲಿ ಪಾಲಾಕು, ದಂಟು: ಪಾಲಾಕು ಮತ್ತು ದಂಟು ಸೊಪ್ಪು ಸೇರಿ ದಂತೆ ಇನ್ನಿತರ ಸೊಪ್ಪಿನ ಬೆಲೆ ಯಥಾ ಸ್ಥಿತಿಯಲ್ಲಿದ್ದು, ಏರಿಕೆಯಾಗಿಲ್ಲ ಎನ್ನುವ ವ್ಯಾಪಾರಿ ರವಿ, ಬೇಸಿಗೆ ಬಿಸಿಲಿಗೆ ಬೆಳೆ ಒಣಗಿ ಹಾನಿಯಾಗಿರುವ ಕಾರಣಕ್ಕೂ ಪೂರೈಕೆ ಕಡಿಮೆಯಾಗಿ ಬೆಲೆ ಹೆಚ್ಚಾಗಿರ ಬಹುದು. ಮುಂಗಾರು ಮಳೆ ಆರಂಭ ವಾಗಿರುವ ಹಿನ್ನೆಲೆಯಲ್ಲಿ ಈ ತಿಂಗಳ ಬಳಿಕ ಬೆಲೆ ಕಡಿಮೆ ಆಗಬಹುದು ಎಂದು ತಿಳಿಸಿದರು.

ತರಕಾರಿ ಬೆಲೆಗಳ ಬಗ್ಗೆ ಮಾಹಿತಿ ನೀಡಿದ ಇದೇ ಮಾರುಕಟ್ಟೆ ಮತ್ತೊಬ್ಬ ವ್ಯಾಪಾರಿ ಸತೀಶ್, 80 ರೂ. ಇದ್ದ ಕೆಜಿ ಬೀನ್ಸ್ ಈಗ 100 ರೂ. ಗಡಿ ದಾಟಿದೆ. ಬದನೆಕಾಯಿ 20 ರೂ.ನಿಂದ 30 ರೂ.ಗೆ, ಗೆಡ್ಡೆಕೋಸು 30 ರೂ.ನಿಂದ 60 ರೂ.ಗೆ, ಮೂಲಂಗಿ 20 ರೂ.ನಿಂದ 30 ರೂ.ಗೆ ಹೆಚ್ಚಳವಾಗಿದೆ. ಹಸಿ ಮೆಣ ಸಿನಕಾಯಿ ಕಳೆದ 15 ದಿನಗಳಿಂದಲೂ 60 ರೂ. ಇದ್ದು, ಇದು ಹೆಚ್ಚಳ ಗೊಂಡಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಅದೇ ರೀತಿ ಟೊಮ್ಯಾಟೊ 30 ರೂ. ನಿಂದ 40 ರೂ.ಗೆ, ಬೀಟ್ ರೂಟ್ 25 ರೂ.ನಿಂದ 30 ರೂ.ಗೆ ಜಿಗಿತ ಕಂಡಿದೆ. ಅಗ್ರಹಾರದ ವಾಣಿ ವಿಲಾಸ ಮಾರು ಕಟ್ಟೆಯಲ್ಲೂ ಸಣ್ಣಪುಟ್ಟ ವ್ಯತ್ಯಾಸ ಹೊರತುಪಡಿಸಿ ದೇವರಾಜ ಮಾರು ಕಟ್ಟೆಯ ಧಾರಣೆಯೇ ಇದೆ.

ದೇವರಾಜ ಮಾರುಕಟ್ಟೆಯ ವ್ಯಾಪಾರಿ ಕುಮಾರ್ ಮಾತನಾಡಿ, ಮಳೆ ಬಂದು ಹೊಸ ಬೆಳೆ ಕೈಗೆ ಸಿಗುವವರೆಗೆ ತರಕಾರಿ ಬೆಲೆ ದುಬಾರಿಯೇ ಇರಬಹುದು. ಈ ಸೀಸನ್‍ನಲ್ಲಿ ಇದೇ ಮೊದಲ ಬಾರಿ ತರಕಾರಿ ಬೆಲೆ ಇಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿರುವುದು. ಮೈಸೂರು ನಗ ರದ ಸುತ್ತಮುತ್ತ ಇದ್ದ ತೋಟಗಳು ಇತ್ತೀಚಿನ ವರ್ಷಗಳಲ್ಲಿ ನಿವೇಶನಗಳಾಗಿ ಮಾರ್ಪಡುತ್ತಿದ್ದು, ಹೀಗಾಗಿ ದಿನದಿಂದ ದಿನಕ್ಕೆ ಬೆಳೆಯಲ್ಲಿಯೂ ಇಳಿಕೆಯಾಗು ತ್ತಿದೆ ಎಂದು ತಿಳಿಸಿದರು.

Translate »