ದಮ್ಮನಕಟ್ಟೆ ಸಫಾರಿ ಇನ್ನೂ ಸುಲಭ
ಮೈಸೂರು

ದಮ್ಮನಕಟ್ಟೆ ಸಫಾರಿ ಇನ್ನೂ ಸುಲಭ

June 24, 2019

ಮೈಸೂರು: ನಾಗರಹೊಳೆ ಅಭಯಾರಣ್ಯದ ಅಂತರ ಸಂತೆ ವಲಯದ ದಮ್ಮನಕಟ್ಟೆ ಸಫಾರಿ ವಾಹನಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದ್ದು, ಸರ್ಕಾರಿ ರಜೆ ಮತ್ತು ವಾರಾಂತ್ಯ ರಜೆ ದಿನಗಳಂದು ಸಫಾರಿ ಅವಧಿ ಒಂದೂವರೆ ಗಂಟೆಗೆ ಸೀಮಿತಗೊಳಿಸಿ ಹೆಚ್ಚುವರಿಯಾಗಿ ಒಂದು ಟ್ರಿಪ್ ಸಫಾರಿ ವ್ಯವಸ್ಥೆ ಮಾಡಲಾಗಿದೆ.

ಕಬಿನಿ ಹಿನ್ನೀರು ಹಾಗೂ ಅಂತರಸಂತೆ ವಲಯದಲ್ಲಿ ಸಫಾರಿ ಮಾಡಲು ಪ್ರವಾಸಿಗರು ಮುಗಿ ಬೀಳುತ್ತಿ ದ್ದಾರೆ. ಆದರೆ ಈ ವಲಯದಲ್ಲಿ 3 ಮಿನಿ ಬಸ್‍ಗಳನ್ನಷ್ಟೇ ಸಫಾರಿಗೆ ನಿಯೋಜಿಸಲಾ ಗಿದೆ. ಅದರಲ್ಲಿ 2 ಬಸ್ಸು 27 ಆಸನದ್ದಾಗಿ ದ್ದರೆ, 1 ಬಸ್ಸು 20 ಆಸನದ್ದಾಗಿದೆ. ಕಪ್ಪು ಚಿರತೆ ಹಾಗೂ ಹುಲಿಕೆರೆ, ಹೊಸ ಕೆರೆ, ನಾಯಂಜಿಕಟ್ಟೆ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಹುಲಿ ಕಾಣಿಸಿಕೊಳ್ಳುವುದ ರಿಂದ ಹಾಗೂ ಕಬಿನಿ ಹಿನ್ನೀರಿನಲ್ಲಿ ಯಥೇಚ್ಛವಾಗಿ ಆನೆಗಳ ಹಿಂಡು ಸಿಗುವುದರಿಂದ ದಮನಕಟ್ಟೆ ಸಫಾರಿ ಮಾಡಲು ದೇಶ-ವಿದೇಶಗಳ ಪ್ರವಾಸಿಗರು ಆಗಮಿಸುವುದು ವಾಡಿಕೆಯಾಗಿದೆ.

`ಬ್ಲಾಕ್ ಬ್ಯೂಟಿ’ ಎಂದು ಕರೆಯಲ್ಪಡುವ ಕಪ್ಪು ಚಿರತೆ ಈ ಭಾಗದ ಸಫಾರಿ ಕೈಗೊಳ್ಳುವ ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಅತೀ ಹೆಚ್ಚು ಫೋಟೋ ತೆಗೆಸಿಕೊಂಡಿರುವ ಕೀರ್ತಿ ಈ ಕಪ್ಪು ಚಿರತೆಗೆ ಸೇರುತ್ತದೆ. ಇದರಿಂದಾ ಗಿಯೇ ಪ್ರವಾಸಿ ಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ ಹಲವರಿಗೆ ಸಫಾರಿ ಕೈಗೊಳ್ಳಲು ಟಿಕೆಟ್ ದೊರೆಯದೆ ನಿರಾಸೆ ಅನುಭವಿಸುತ್ತಿದ್ದರು. ಇದೀಗ ಸರ್ಕಾರ ರಜೆ ಮತ್ತು ಶನಿವಾರ ಮತ್ತು ಭಾನುವಾರ ಸಫಾರಿ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.

ಪರಿಷ್ಕೃತ ಪಟ್ಟಿ: ದಮ್ಮನಕಟ್ಟೆ ಸಫಾರಿಯಲ್ಲಿ ಪ್ರತೀ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಲ್ಲಿ ಬೆಳಿಗ್ಗೆ 6ರಿಂದ 7.30, 7.30ರಿಂದ 9 ಗಂಟೆವರೆಗೆ 2 ಟ್ರಿಪ್ ಸಫಾರಿ ವಾಹನ ತೆರಳಲಿದೆ. ಮಧ್ಯಾಹ್ನ 3ರಿಂದ ಸಂಜೆ 4.30, ಸಂಜೆ 4.30ರಿಂದ 6 ಗಂಟೆವರೆಗೆ 2ನೇ ಸುತ್ತಿನ ಸಫಾರಿ ವಾಹನದ ಸೌಲಭ್ಯವಿದೆ. ಭಾರತೀಯ ವಯಸ್ಕರಿಗೆ 350 ರೂ., 5ರಿಂದ 12 ವರ್ಷದ ಮಕ್ಕಳಿಗೆ 175 ರೂ., ವಿದೇಶಿ ವಯಸ್ಕರಿಗೆ 1600 ರೂ., ವಿದೇಶಿ ಮಕ್ಕಳಿಗೆ 800 ರೂ. ದರ ನಿಗದಿ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಎಂದಿನಂತೆ ಬೆಳಿಗ್ಗೆ 6ರಿಂದ 8.30, ಮಧ್ಯಾಹ್ನ 3.30ರಿಂದ 6ಗಂಟೆಯವರೆಗೆ ಒಂದೊಂದೇ ಟ್ರಿಪ್ ಸಫಾರಿ ವಾಹನ ತೆರಳಲಿದೆ. ಭಾರತೀಯ ವಯಸ್ಕರಿಗೆ 500 ರೂ., ಮಕ್ಕಳಿಗೆ 250 ರೂ., ವಿದೇಶಿ ವಯಸ್ಕರಿಗೆ 1600 ರೂ., ವಿದೇಶಿ ಮಕ್ಕಳಿಗೆ 800 ರೂ. ದರ ನಿಗದಿ ಮಾಡಲಾಗಿದೆ. ಅಲ್ಲದೇ ಕ್ಯಾಮರಾ ಶುಲ್ಕವು ಈ ಹಿಂದೆ ಇದ್ದಂತೆ ಅನ್ವಯವಾಗುತ್ತದೆ. 200 ಎಂಎಂ ಗಿಂತ ಕಡಿಮೆ ಸಾಮಥ್ರ್ಯವಿರುವ ಲೆನ್ಸ್ ಹೊಂದಿರುವವರಿಗೆ 100 ರೂ., 200 ಎಂಎಂಗಿಂತ ಹೆಚ್ಚು ಸಾಮಥ್ರ್ಯ ಹೊಂದಿರುವವರು 500 ರೂ. ಪಾವತಿಸಬೇಕಾಗಿದೆ.

ಬದಲಾವಣೆ ಅಗತ್ಯವಿತ್ತು: ಕಬಿನಿ ಹಿನ್ನೀರಿನ ವ್ಯಾಪ್ತಿಯ ಪ್ರದೇಶವೂ ಒಳಗೊಂಡಂತೆ ಸಫಾರಿ ವಲಯ ಹೊಂದಿರುವ ದಮ್ಮನಕಟ್ಟೆ ಸಫಾರಿ ಮಾಡಲು ರಜೆ ದಿನಗಳಂದು ಹಲವಾರು ಪ್ರವಾಸಿಗರು ಆಗಮಿಸುತ್ತಿದ್ದರು. ಇದರಿಂದ ಕೆಲವರಿಗೆ ಮಾತ್ರ ಸಫಾರಿಗೆ ಮಾತ್ರ ಅವಕಾಶ ದೊರಕುತ್ತಿತ್ತು. ಹಲವು ಮಂದಿಗೆ ನಿರಾಸೆಯಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ವಾರಾಂತ್ರ ರಜಾ ದಿನ ವೇಳಾಪಟ್ಟಿಯನ್ನು ಪರಿಷ್ಕರಿಸಿ ಹೆಚ್ಚುವರಿ ಒಂದು ಟ್ರಿಫ್ ಸಫಾರಿಗೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ವಾರ್ಡನ್ ಕೃತ್ತಿಕಾ ಆಲನಹಳ್ಳಿ ಮೈಸೂರು ಮಿತ್ರನಿಗೆ ತಿಳಿಸಿದರು.

 

Translate »