- ಕೂದಲೆಳೆ ಅಂತರದಲ್ಲಿ ಪಾರಾದ ಇಬ್ಬರು ಸವಾರರು
- ಹುಲಿ ಬೆನ್ನತ್ತಿದ್ದ ವೀಡಿಯೊ ವೈರಲ್
ಮೈಸೂರು, ಜೂ.30(ಎಂಟಿವೈ)-ಕೇರಳದ ವೈನಾಡು ಅರಣ್ಯ ಪದೇಶದ ರಸ್ತೆಯಲ್ಲಿ ಸುಲ್ತಾನ್ ಬತೇರಿಯಿಂದ ಪುಲ್ಪಳ್ಳಿಗೆ ಬೈಕೊಂದರಲ್ಲಿ ಇಬ್ಬರು ಸವಾರರು ತೆರಳುತ್ತಿದ್ದಾಗ ಹುಲಿ ಯೊಂದು ಬೈಕ್ ಅನ್ನು ಬೆನ್ನತ್ತಿದ ಘಟನೆ ಶನಿವಾರ ಸಂಜೆ ನಡೆದಿದೆ.
ವೈನಾಡು ನಿವಾಸಿ ವಿಮಲ್ ಎಂಬಾತ ತನ್ನ ಸ್ನೇಹಿತನೊಂದಿಗೆ ಶನಿವಾರ ಸಂಜೆ 4.30ರಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದಾಗ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿದ್ದ ಹುಲಿ ಹಠಾತ್ತನೆ ಬೈಕ್ ಅನ್ನು ಬೆನ್ನತ್ತಿದೆ. ಹುಲಿ ಬರುತ್ತಿರುವುದನ್ನು ಗಮನಿಸಿದ ಸವಾರ, ಬೈಕ್ ಅನ್ನು ರಸ್ತೆಯ ಬಲ ಬದಿಯಲ್ಲಿ ವೇಗವಾಗಿ ಚಾಲನೆ ಮಾಡಿದ್ದಾನೆ. ಬೈಕಿ ನಿಂದ ಕೇವಲ 4 ಅಡಿ ದೂರದಲ್ಲಿದ್ದ ಹುಲಿ, ಸುಮಾರು 20 ಮೀಟರ್ ಹಿಂಬಾಲಿಸಿ ರಸ್ತೆ ಬದಿಗೆ ಓಡಿದೆ. ಆ ಸಮಯದಲ್ಲೂ ಬೈಕ್ ಸವಾರರು ವಿಚಲಿತರಾಗದೇ ಬೈಕ್ ಅನ್ನು ವೇಗವಾಗಿ ಚಾಲನೆ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಎದುರಿ ನಿಂದ ಯಾವುದಾದರೂ ವಾಹನ ಬಂದಿ ದ್ದರೂ ಬೈಕ್ ಸವಾರರು ಅದಕ್ಕೆ ಅಪ್ಪಳಿ ಸುತ್ತಿದ್ದರು. ಅದೃಷ್ಟವಶಾತ್ ಆ ವೇಳೆ ಯಾವುದೇ ವಾಹನ ಬಾರದಿರುವುದ ರಿಂದ ಇಬ್ಬರು ಸವಾರರು ಸುರಕ್ಷಿತವಾಗಿ ತಮ್ಮ ತಮ್ಮ ಮನೆ ಸೇರಿಕೊಂಡಿದ್ದಾರೆ.
ಕುಚೇಷ್ಟೆ ಮಾಡಿದ್ದರೆ?: ಅರಣ್ಯ ಪ್ರದೇ ಶದ ನಡುವೆ ಹಾದು ಹೋಗಿರುವ ರಸ್ತೆ ಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ರಿಬ್ಬರು ಹುಲಿಗೆ ಕುಚೇಷ್ಟೆ ಮಾಡಿರುವ ಸಾಧ್ಯತೆ ಇದೆ. ಹುಲಿ ಹಿಂಬಾಲಿಸಿದ ಘಟ ನೆಗೂ ಮುನ್ನ ಆ ಯುವಕರಿಬ್ಬರು ಅದೇ ರಸ್ತೆಯಲ್ಲಿ ಸಂಚರಿಸಿ ಹುಲಿಯನ್ನು ಗಮ ನಿಸಿ ಛೇಡಿಸಿರುವ ಸಾಧ್ಯತೆ ಇದೆ ಎನ್ನ ಲಾಗಿದೆ. ಬಳಿಕ ಮತ್ತೊಮ್ಮೆ ಅದೇ ರಸ್ತೆ ಯಲ್ಲಿ ಹಿಂತಿರುಗಿರುವ ಯುವಕರು, ಹುಲಿ ಇರುವುದನ್ನು ವೀಡಿಯೊ ಮಾಡ ಲಾರಂಭಿಸಿದ್ದಾರೆ. ಬೈಕ್ ಹಿಂಬದಿ ಸವಾರ ಮೊಬೈಲ್‍ನಲ್ಲಿ ವೀಡಿಯೊ ಮಾಡುತ್ತಿ ದ್ದರೆ ಸವಾರ ಮಾತ್ರ ಬೈಕ್ ಅನ್ನು ವೇಗ ವಾಗಿ ಚಾಲನೆ ಮಾಡಿದ್ದಾನೆ. ಹುಲಿಯ ಸಮೀಪ ಬರುವ ಮುನ್ನವೇ ಸವಾರ ಬೈಕ್ ಅನ್ನು ಬಲ ಬದಿಯಲ್ಲಿಯೇ ಚಾಲನೆ ಮಾಡುತ್ತಿರುವುದು ವೀಡಿಯೊ ದಲ್ಲಿ ಸ್ಪಷ್ಟವಾಗಿದೆ. ಒಂದು ವೇಳೆ ನಿಯ ಮಾನುಸಾರ ಎಡ ಬದಿಯಲ್ಲಿಯೇ ಬೈಕ್ ಚಾಲನೆ ಮಾಡಿದ್ದರೆ ಹುಲಿ ಬಾಯಿಗೆ ತುತ್ತಾಗುತ್ತಿದ್ದರು. ಆದರೆ ಸಾಕಷ್ಟು ದೂರ ದಿಂದಲೇ ಬಲ ಬದಿಯಲ್ಲಿಯೇ ಬಂದಿ ರುವುದರಿಂದ ಈ ಮೊದಲೇ ಹುಲಿ ಇರು ವುದನ್ನು ಆ ಯುವಕರು ಗಮನಿಸಿರ ಬಹುದು ಅಥವಾ ಛೇಡಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಪರಿಶೀಲನೆ: ಬೈಕ್ ಅನ್ನು ಹುಲಿ ಹಿಂಬಾ ಲಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪುಲ್ಪಳ್ಳಿ ರಸ್ತೆಯಲ್ಲಿ ಡಿಆರ್‍ಎಫ್‍ಓ ನೇತೃತ್ವದ ಇಬ್ಬರು ಗಾರ್ಡ್ ಹಾಗೂ ಇಬ್ಬರು ವಾಚರ್ ಇರುವ ತಂಡವೊಂದು ಆ ರಸ್ತೆಯಲ್ಲಿ ಸಂಚರಿಸಿ ಪರಿಶೀಲಿಸಿದೆ. ಈ ವೇಳೆ ಹುಲಿ ಇಲಾಖೆ ಸಿಬ್ಬಂದಿ ಕಣ್ಣಿಗೆ ಬಿದ್ದಿಲ್ಲ. ಆದರೂ ಭಾನು ವಾರವೂ ಪರಿಶೀಲನೆ ಕಾರ್ಯ ನಡೆ ಸಿದ್ದು, ಟ್ವೀಟರ್ ಮೂಲಕ ಕೂಂಬಿಂಗ್ ನಡೆಸಿರುವ ಮಾಹಿತಿ ಬಹಿರಂಗಪಡಿಸಿದೆ.