ಪಂಜಾಬ್ ಕೃಷಿ ದುಸ್ಥಿತಿ ತಲುಪಲು ಕೃಷಿ ವಿಜ್ಞಾನಿಗಳೇ ಕಾರಣ
ಮೈಸೂರು

ಪಂಜಾಬ್ ಕೃಷಿ ದುಸ್ಥಿತಿ ತಲುಪಲು ಕೃಷಿ ವಿಜ್ಞಾನಿಗಳೇ ಕಾರಣ

July 1, 2019

ಮೈಸೂರು,ಜೂ.30(ಪಿಎಂ)- ಜಗತ್ತಿನ ಅತಿ ಹೆಚ್ಚು ನೀರಾವರಿ ಪ್ರದೇಶವಾದ ಪಂಜಾಬ್ ಧಾನ್ಯಗಳ ಕಣಜ ಎಂದೇ ಹೆಸರಾಗಿತ್ತು. ಆದರೆ ಅಲ್ಲಿ ಇಂದಿನ ಕೃಷಿ ದುಸ್ಥಿತಿಗೆ ತಲುಪಿದ್ದು, ಇದಕ್ಕೆ ಕೃಷಿ ವಿಜ್ಞಾನಿ ಗಳೇ ಕಾರಣ ಎಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ವಿಷಾದಿಸಿದರು.

ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಅಭಿರುಚಿ ಪ್ರಕಾಶನ, ಚಿಂತನ ಚಿತ್ತಾರ ಪ್ರಕಾಶನದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿನ್ನಸ್ವಾಮಿ ವಡ್ಡಗೆರೆ ಅವರ `ಬಂಗಾರದ ಮನುಷ್ಯರು-ಬೆಳಕಿನ ಬೇಸಾಯದ ಕಥಾನಕ’ ಹಾಗೂ `ಕೃಷಿ ಸಂಸ್ಕøತಿ ಕಥನ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ `ಬೆಳಕಿನ ಬೇಸಾಯ’ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಧಾನ್ಯಗಳ ಕಣಜ ಎಂದು ಹೆಸರು ಪಡೆ ದಿದ್ದ ಪಂಚ ನದಿಗಳ ನಾಡು ಪಂಜಾಬ್ ಈಗ ಕ್ಯಾನ್ಸರ್ ಕಣಜವಾಗಿ ಪರಿವರ್ತನೆ ಯಾಗಿದೆ. ಕೃಷಿ ವಿಜ್ಞಾನಿಗಳನ್ನು ನಂಬಿ ರೈತರು ಭೂಮಿಗೆ ಉಣಿಸಿದ ವಿಷದಿಂದಾಗಿ ಅಲ್ಲಿನ ಕೃಷಿ ದುಸ್ಥಿತಿಗೆ ತಲುಪಿರುವುದು ಮಾತ್ರವಲ್ಲದೆ, ಅಲ್ಲಿನ ಒಂದು ಇಡೀ ಜಿಲ್ಲೆ ಕ್ಯಾನ್ಸರ್ ರೋಗಿಗಳ ತಾಣವಾಗಿ ಪರಿಣ ಮಿಸಿದೆ. ಅಲ್ಲಿ ಶೇ.98ರಷ್ಟು ನೀರಾವರಿ ಪ್ರದೇಶವಿದ್ದರೂ ಕೃಷಿ ದುಸ್ಥಿತಿ ನೋಡ ಲಾಗದು. ಇದು ಕೃಷಿ ವಿಜ್ಞಾನಿಗಳು ನೀಡಿದ ಕತ್ತಲೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಉತ್ಪನ್ನ ಕಂಪನಿಗಳ ಲಾಬಿ: ನಾರ್ವೆಯ ಹಿಮ ಪ್ರದೇಶದಲ್ಲಿ 30 ಲಕ್ಷ ಶ್ರೇಷ್ಠ ತಳಿಗಳನ್ನು ಸಂರಕ್ಷಣೆ ಹೆಸರಿನಲ್ಲಿ ಶೇಖರಿಸಿಡಲಾಗಿದೆ. ಅಲ್ಲಿಗೆ ಪ್ರವೇಶಿಸ ಲಾಗದಂತೆ ಕಂಪನಿಗಳು ಸಂರಕ್ಷಣೆ ಮಾಡಿಟ್ಟಿವೆ. ಮನುಕುಲದ ಹಿತಕ್ಕಾಗಿ ಎಂಬ ಸೋಗಿನಲ್ಲಿ ಕಂಪನಿಗಳು ತಳಿಗಳನ್ನು ಶೇಖರಿಸಿವೆ. ಅಣ್ವಸ್ತ್ರ ಪ್ರಯೋಗದಂತಹ ಘಟನೆಗಳಿಂದ ಒಂದು ಪ್ರದೇಶದಲ್ಲಿ ತಳಿ ನಾಶವಾದರೆ ಬಳಿಕ ಇವುಗಳನ್ನು ಮಾರು ಕಟ್ಟೆಗೆ ತರುವ ದುರುz್ದÉೀಶ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.

ಮೈಸೂರು ಉತ್ಪನ್ನಕ್ಕೆ ಜಿಐ ಟ್ಯಾಗ್: ಉತ್ಪನ್ನಗಳಿಗೆ `ಜಿಐ ಟ್ಯಾಗ್ (ಜಿಯಾಗ್ರಫಿ ಕಲ್ ಇಂಡಿಕೇಷನ್/ಭೌಗೋಳಿಕ ಸೂಚಿಕೆ ಮಾನ್ಯತೆ)’ ಎಂಬ ಮಾನ್ಯತೆ ನೀಡಲಾಗು ತ್ತದೆ. ಭಾರತದ 380 ನೈಸರ್ಗಿಕ ಉತ್ಪನ್ನ ಗಳಿಗೆ ಈ ಮಾನ್ಯತೆ ದೊರೆತಿದೆ. ವಿಶೇಷ ವೆಂದರೆ ಮೈಸೂರಿನ ನೈಸರ್ಗಿಕ ಉತ್ಪನ್ನ ಗಳು ಹೆಚ್ಚು `ಜಿಐ ಟ್ಯಾಗ್’ ಮಾನ್ಯತೆಗೆ ಭಾಜನವಾಗಿವೆ. ಮೈಸೂರು ಶ್ರೀಗಂಧ, ಮೈಸೂರು ರೇಷ್ಮೆ, ನಂಜನಗೂಡು ರಸಬಾಳೆ ಹಲವು ಉತ್ಪನ್ನಗಳು ಈ ಮಾನ್ಯತೆ ಬಾಚಿ ಕೊಂಡಿವೆ. ಆ ಮೂಲಕ ಮೈಸೂರು ಕೃಷಿಗೆ ಸಂಬಂಧಿಸಿದ ಅದ್ಭುತ ಸಾಧನೆಗಳನ್ನು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಮಾಲುಗಳ ಸಂತೆಯಾಗು ತ್ತಿದೆ. ಸ್ಥಳೀಯ ಉತ್ಪನ್ನಗಳ ಸಂಸ್ಕøತಿ ನಾಶವಾಗುತ್ತಿದೆ. ಸ್ಥಳೀಯ ಉತ್ಪನ್ನ ವೆಂದರೆ ಕೆಳದರ್ಜೆ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಸ್ಥಳೀಯ ತರಕಾರಿ -ಹಣ್ಣು ಉತ್ಪನ್ನಗಳು ತಾಜಾತನ ಹೊಂದಿ ರುತ್ತವೆ. ಆದರೆ ಹೊರ ದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಂದ ಅದನ್ನು ನಿರೀಕ್ಷೆ ಮಾಡಲಾಗದು. ಹೀಗಿದ್ದರೂ ಸ್ವಂತ ಊರಿನ ವಸ್ತುಗಳು ಎಂದರೆ ನಮ್ಮ ಜನಕ್ಕೆ ಅಸಡ್ಡೆಯೇ ಹೆಚ್ಚು ಎಂದು ವಿಷಾದಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ರೈತ ಸಮು ದಾಯ ಕೃಷಿ ತಳಿಗಳನ್ನು ತಾನೇ ಸಂರಕ್ಷಣೆ ಮಾಡಿಕೊಳ್ಳುತ್ತಿತ್ತು. ಆದರೆ ಈಗ ಪ್ರತಿ ಯೊಂದಕ್ಕೂ ಸರ್ಕಾರವನ್ನೇ ಅವಲಂಬಿ ಸಿದ್ದು, ಇದರಿಂದ ಬೆಳಕಿನ ಆಸೆಗೆ ಬದಲಿಗೆ ಕತ್ತಲೆಯೇ ಹೆಚ್ಚು ಸಿಕ್ಕಿದೆ. ತಳಿ ಸಂರಕ್ಷಣೆಯ ಸ್ಥಳೀಯ ವಿಧಾನಗಳನ್ನು ಮರೆಯಲಾಗುತ್ತಿದೆ ಎಂದು ನಾಗೇಶ್ ಹೆಗಡೆ ತಿಳಿಸಿದರು.

ಇದಕ್ಕೂ ಮುನ್ನ ಐವರು ಸಾವಯವ ಕೃಷಿಕರು ಕೃತಿಗಳನ್ನು ಬಿಡುಗಡೆಗೊಳಿಸಿ ದರು. ಜಲ ತಜ್ಞ ಮಲ್ಲಿಕಾರ್ಜುನ ಹೊಸ ಪಾಳ್ಯ, ಕಬ್ಬು ಬೆಳೆಗಾರರ ಸಂಘದ ರಾಜ್ಯಾ ಧ್ಯಕ್ಷ ಕುರುಬೂರು ಶಾಂತಕುಮಾರ್, ಪತ್ರಕರ್ತೆ ರಶ್ಮಿ ಕೌಜಲಗಿ, ರೈತ ಸಂಘದ ಚಾಮ ರಾಜನಗರ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್, ಚಿಂತನ ಚಿತ್ತಾರ ಪ್ರಕಾಶನದ ನಿಂಗರಾಜು ಚಿತ್ತಣ್ಣನವರ್, ಕೃತಿಗಳ ಕರ್ತೃ ಚಿನ್ನಸ್ವಾಮಿ ವಡ್ಡಗೆರೆ ಮತ್ತಿತರರು ಹಾಜರಿದ್ದರು.

Translate »