ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪಗೆ ಅಭಿನಂದನೆ
ಮೈಸೂರು

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪಗೆ ಅಭಿನಂದನೆ

July 1, 2019

ಮೈಸೂರು,ಜೂ.30(ಎಸ್‍ಪಿಎನ್)-ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೈಸೂರು ಘಟಕದ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಮತ್ತು ಪತ್ನಿ ಆರ್.ಮಂಗಳ ಅವರನ್ನು ಲಕ್ಷ ರೂ.ಮೊತ್ತದ ಚೆಕ್, ಅಭಿನಂದನಾ ಫಲಕ ನೀಡಿ ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಅಭಿನಂದಿಸಿದರು.

ಮೈಸೂರು ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಕಸಾಪ ಮತ್ತು ಕರ್ನಾಟಕ ರಾಜ್ಯ ಕನ್ನಡಿ ಗರ ಆಸರೆ ಮಂಟಪ, ಶ್ರೀ ಜಗಜ್ಯೋತಿ ಬಸವೇಶ್ವರ ಅಕ್ಕ ಮಹಾದೇವಿ ಸೇವಾ ಪ್ರತಿಷ್ಠಾನ ಹಾಗೂ ಭಾರತೀಯ ಸಾಂಸ್ಕø ತಿಕ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದಿಸಿದರು.

ನಂತರ ಮಾತನಾಡಿದ ಅವರು, ಬಸವಣ್ಣರ ಚಿಂತನೆಗಳು ವಿಶ್ವಮಾನವ ಕಲ್ಪನೆಗಳು, ಇವರ ತತ್ವಾದರ್ಶಗಳನ್ನು ಅನುಸರಿಸಿದರೆ, ಅಧ್ಯಯನ ನಡೆಸಿದರೆ, ಅಂಥವರ ವ್ಯಕ್ತಿತ್ವ ಎತ್ತರಮಟ್ಟದ್ದಾಗಿರುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುವಿನ ವಚನಗಳು ಜೀವನಕ್ಕೆ ಹತ್ತಿರವಾಗಿದೆ ಹಾಗೂ ನಮ್ಮನ್ನು ವಿಶ್ವಮಾನವ ಪರಿಕಲ್ಪನೆಗೆ ಪರಿವರ್ತಿಸುವ ಶಕ್ತಿ ವಚನಗಳಿಗಿದೆ ಅಲ್ಲದೆ ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಯವರ ಸಾಧನೆ ಎತ್ತರಮಟ್ಟದ್ದು. ಅವರ 9ನೇ ಸ್ಮರಣಾರ್ಥ ಅವರ ಸಾಧನೆ ಬಗ್ಗೆ ಜನರಿಗೆ ಕೆಲಸ ಮಾಡುತ್ತಿರುವ ಸಂಘಟಕರು ಹಾಗೂ ಕಸಾಪ ಅಧ್ಯಕ್ಷರ ಚಿಂತನೆ ಶ್ಲಾಘನೀಯ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಅಂಗವಿಕಲರ ಬಾಳಿಗೆ ಬೆಳಕಾಗಿದ್ದ ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿ ಯವರ ಸಾಧನೆ ನಿಜಕ್ಕೂ ಎಲ್ಲರೂ ಮೆಚ್ಚುವಂಥದ್ದು, ಅವರು ಲೋಕದ ಕಣ್ಣಿಗೆ ಅಂಗವಿಕಲರಾಗಿ ದ್ದರೂ, ಅಂತರಂಗದ ಕಣ್ಣಿಗೆ ದೇವರಾಗಿ ದ್ದರು ಎಂದು ಅಭಿಪ್ರಾಯಪಟ್ಟರು.

ಇಂದಿನ ಸಮಾರಂಭದಲ್ಲಿ ವಚನಗಾಯ ನಕ್ಕೆ ಹಿರಿಯ ಕಲಾವಿದರಾದ ಮಾಜಿ ಶಾಸಕ ಬಾಲರಾಜು, ಸಿ.ಎಂ.ನರಸಿಂಹಮೂರ್ತಿ, ರಮೇಶ್ ಕುಮಾರ್, ನೀತು ನಿನಾದ, ರಾಧಾ, ರವಿರಾಜ್ ಹಾಸು, ಸಿದ್ದರಾಜು, ರಾಜಲಕ್ಷ್ಮಿ, ಶಾಂತಾ ಹಾಗೂ ಇತರೆ ಗಾಯಕರು ಹಾಡಿದರು. ವೇದಿಕೆಯಲ್ಲಿ ಸಂಗೀತ ವಿದ್ವಾನ್ ಡಾ.ಸಿ.ಎ.ಶ್ರೀಧರ್, ಸಮಾಜ ಸೇವಕಿ ಹೆಚ್.ಎಂ.ಅಕ್ಕಮಹಾದೇವಿ ಉಪಸ್ಥಿತರಿದ್ದರು. ರಾಜಲಕ್ಷ್ಮಿ ಪ್ರಾರ್ಥಿಸಿದರೆ, ಸೂರ್ಯಕಾವಾ ಸ್ವಾಗತಿಸಿದರು.

Translate »