ಮೈಸೂರು, ಜೂ.30(ಪಿಎಂ)- ಅಪಾಯಕಾರಿ ತಾಪಮಾನದಿಂದ ಮೈಸೂರು ನಗರವನ್ನು ದೂರವಿಡುವ ಹಾಗೂ ಪರಿ ಸರ ಸಂರಕ್ಷಿಸುವ ಸದುದ್ದೇಶದೊಂದಿಗೆ ಲಲಿತ ಮಹಲ್ ಅರಮನೆ ಹೋಟೆಲ್ ಬಳಿಯ ಹೆಲಿಪ್ಯಾಡ್ ಸುತ್ತಮುತ್ತ ಗಿಡ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಭಾನು ವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.
ಅರಣ್ಯ ಇಲಾಖೆ ಸಹಯೋಗದಲ್ಲಿ ರಘುಲಾಲ್ ಅಂಡ್ ಕಂಪನಿ ಮಾಲೀಕ ರಾದ ರಾಘವನ್ ಹಾಗೂ ಮೈಸೂರು ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಎಂ. ತಿರುಮಲ ಬಾಬು ಅವರ ವತಿಯಿಂದ ಈ ಬೃಹತ್ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಾರದ ಕಾಲ 300ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡ ಗಳನ್ನು ನೆಡಲಾಗುತ್ತಿದೆ.
ನೆಡುವ ಎಲ್ಲಾ ಗಿಡಗಳಿಗೂ ರಘು ಲಾಲ್ ಅಂಡ್ ಕಂಪನಿ ವತಿಯಿಂದ ಟ್ರೀ ಗಾರ್ಡ್ (ಬೇಲಿ) ಹಾಕಲಾಗುತ್ತಿದೆ. ಜೊತೆಗೆ ಇಂದು ಒಂದು ಟ್ಯಾಂಕ್ ನೀರನ್ನೂ ಸಹ ರಘುಲಾಲ್ ಅಂಡ್ ಕಂಪನಿಯಿಂದ ಪೂರೈಸಲಾಯಿತು. ಬೇವು, ಹತ್ತಿ, ಹೊಂಗೆ, ಮಹಾಘನಿ, ನೆರಳೆ, ಬಸವನ ಪಾದ, ಅರಳಿ, ಹಿಪ್ಪೆ, ನಂದಿ ಹಾಗೂ ಬಿಲ್ವಾರ ಜಾತಿಯ ಸಸಿಗಳು ಸೇರಿದಂತೆ ನಾನಾ ಬಗೆಯ ಗಿಡಗಳನ್ನು ನೆಡಲಾಗುತ್ತಿದೆ.
ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ರಘುಲಾಲ್ ಅಂಡ್ ಕಂಪನಿ ಮಾಲೀಕರಾದ ರಾಘ ವನ್, ಎಲ್ಲವನ್ನೂ ಸರ್ಕಾರ ಅಥವಾ ಸ್ಥಳೀಯ ಆಡಳಿತವೇ ಮಾಡಬೇಕು ಎನ್ನುವ ಧೋರಣೆ ಸರಿಯಲ್ಲ. ಪರಿಸರ ಸಂರಕ್ಷಣೆ ವಿಚಾರದಲ್ಲಂತೂ ಪ್ರತಿ ಯೊಬ್ಬರೂ ತಮ್ಮ ಜವಾಬ್ದಾರಿ ಅರಿಯ ಬೇಕು. ಕಳೆದ 88 ವರ್ಷಗಳಲ್ಲಿ ಇದೇ ಮಾರ್ಚ್‍ನಲ್ಲಿ ಮೈಸೂರಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಹೀಗಾಗಿ ಪರಸ್ಪರ ದೂರುವುದನ್ನೇ ಮಾಡುತ್ತಾ ಕುಳಿತುಕೊಳ್ಳದೇ ನಗರದ ಹಸಿರೀಕರಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆ ವಿಚಾರದಲ್ಲಿ ನಡೆ ಯುತ್ತಿರುವ ಚಟುವಟಿಕೆಗಳು ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಚಟುವಟಿಕೆ ನಡೆಯಲು ಪ್ರತಿಯೊ ಬ್ಬರೂ ತಮ್ಮ ಕೊಡುಗೆ ನೀಡಬೇಕಿದೆ. ಅಲ್ಲದೆ ನಮ್ಮ ಸರ್ಕಾರಗಳು ಪರಿಸರ ಪೂರಕ ಚಟುವಟಿಕೆಗಳನ್ನು ನಡೆಸುವವರಿಗೆ ಉತ್ತೇ ಜನ ನೀಡಬೇಕು. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ ಗಿಡ ನೆಡು ವಂತಹ ಸೇವಾ ಕಾರ್ಯದಲ್ಲಿ ತೊಡ ಗಿಸಿಕೊಂಡವರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಬಹುದು. ಇಂತಹ ಕಾರ್ಯಕ್ರಮಗಳನ್ನು ಸರ್ಕಾರಗಳು ರೂಪಿಸಿದರೆ ಉತ್ತಮ ಫಲಿತಾಂಶ ಕಾಣ ಬಹುದು ಎಂದು ಹೇಳಿದರು.
ಕಳೆದ 2018ರ ಡಿಸೆಂಬರ್‍ವರೆಗೆ ನಮ್ಮ ಸಂಸ್ಥೆ ವತಿಯಿಂದ ಸುಮಾರು 15 ಸಾವಿರ ಗಾರ್ಡ್‍ಗಳನ್ನು ಗಿಡಗಳ ರಕ್ಷಣೆಗೆ ಹಾಕ ಲಾಗಿದೆ. ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸಣ್ಣ ಮಟ್ಟದಲ್ಲಿ ಗಿಡಗಳಿಗೆ ಗಾರ್ಡ್‍ಗಳನ್ನು ಹಾಕಲು ಆರಂ ಭಿಸಲಾಯಿತು. ಇದೀಗ ಇದು ಸಾಕಷ್ಟು ವಿಸ್ತರಣೆಗೊಂಡಿದೆ ಎಂದರು.
ಮೈಸೂರು ಸ್ಪೋಟ್ರ್ಸ್ ಕ್ಲಬ್ ಕಾರ್ಯ ದರ್ಶಿ ಎಂ.ತಿರುಮಲ ಬಾಬು ಮಾತ ನಾಡಿ, ಮರ-ಗಿಡಗಳಿದ್ದರೆ ಪ್ರಕೃತಿ. ಅದಿ ದ್ದರೆ ಮಾತ್ರವೇ ಜೀವಸಂಕುಲ ಭೂಮಿ ಮೇಲೆ ಉಳಿಯಲು ಸಾಧ್ಯ. ಹೀಗಾಗಿ ಪರಿ ಸರ ಸಂರಕ್ಷಣೆಗೆ ಸಮಾಜ ಹೆಚ್ಚು ಆದ್ಯತೆ ನೀಡಬೇಕಿದೆ. ಗಿಡಗಳನ್ನು ನೆಟ್ಟರಷ್ಟೇ ಸಾಲದು ಒಂದು ಹಂತದವರೆಗೆ ಅವುಗಳ ನಿರ್ವಹಣೆಗೆ ಗಮನ ಹರಿಸುವುದು ಮುಖ್ಯ ಎಂದು ಹೇಳಿದರು.
`ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ರಾದ ಕೆ.ಬಿ.ಗಣಪತಿ (ಕೆಬಿಜಿ), ಅರಸು ಜಿಮ್ಖಾನಾ ಕ್ಲಬ್ ಮಾಜಿ ಅಧ್ಯಕ್ಷ ಜಯ ರಾಜ್ ಅರಸ್, ಮೈಸೂರು ಸ್ಪೋಟ್ರ್ಸ್ ಕ್ಲಬ್ ಸದಸ್ಯ ಜಿ. ಮದನಕುಮಾರ್, ಅರಣ್ಯ ಇಲಾಖೆ ಡಿಆರ್‍ಎಫ್‍ಓ ಪ್ರಕಾಶ್, ಎಂ. ತಿರುಮಲಬಾಬು ಅವರ ಪುತ್ರಿಯರಾದ ಸುಪ್ರಿಯಾ, ಭೂಮಿಕಾ ಸೇರಿದಂತೆ ಹಲವು ಮಕ್ಕಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.