ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಚುನಾವಣೆಯಲ್ಲಿ ಜಿಟಿಡಿ ತಂಡ ಗೆಲುವು
ಮೈಸೂರು

ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಚುನಾವಣೆಯಲ್ಲಿ ಜಿಟಿಡಿ ತಂಡ ಗೆಲುವು

July 1, 2019

ಮೈಸೂರು,ಜೂ.30(ವೈಡಿಎಸ್)-ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳದ ಆಡ ಳಿತ ಮಂಡಳಿಗೆ ನಡೆದ ಚುನಾವಣೆ ಯಲ್ಲಿ ಮೈಸೂರು ವಿಭಾಗದ 3 ಸ್ಥಾನ ಗಳು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ತಂಡದ ಪಾಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಚುನಾ ವಣೆಯಲ್ಲಿ ಸಚಿವ ಜಿ.ಟಿ.ದೇವೇಗೌಡರ ಪತ್ನಿ ಲಲಿತಾ ಜಿ.ಟಿ.ದೇವೇಗೌಡ (71) ಮತಗಳನ್ನು ಪಡೆದು ಮಹಾಮಂಡಳದ ಆಡಳಿತ ಮಂಡಳಿಗೆ ಆಯ್ಕೆಯಾದರೆ, ಉಳಿದಂತೆ ಚಿತ್ತರಂಜನ್ ಬೋಳಾರ (63), ರಾಮಕೃಷ್ಣೇಗೌಡ(57) ಮತ ಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಎದುರಾಳಿ ಸ್ಪರ್ಧಿಗಳಾದ ಸುತ್ತೂರಿನ ಭಾಸ್ಕರ್(17), ಹೊರನಾಡು ಕಟೀಲಿನ ಸಂಜೀವ ಮಡಿವಾಳ(11), ಮೈಸೂರಿನ ಚೂಡ ಚಂದ್ರರಾಜೇ ಅರಸ್(6) ಮತ ಗಳನ್ನು ಪಡೆದು ಪರಾಭವಗೊಂಡಿದ್ದಾರೆ.

Translate »