ಮೈಸೂರು, ಜು.8(ಎಂಟಿವೈ)- ಆಷಾಢ ಮಾಸದ ಮೊದಲ ಶುಕ್ರವಾರದಂದು ಜರುಗಿದ ವಿಶೇಷ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂ ಡಿದ್ದ ಅಪಾರ ಸಂಖ್ಯೆಯ ಭಕ್ತರು ಎಸೆದು ಹೋಗಿದ್ದ ಪ್ಲಾಸ್ಟಿಕ್ ಸೇರಿದಂತೆ ಅನು ಪಯುಕ್ತ ವಸ್ತುಗಳನ್ನು ಸಂಗ್ರ ಹಿಸಲು ಭಾನುವಾರ ನಮ್ಮ ಮೈಸೂರು ಫೌಂಡೇಷನ್ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘ -ಸಂಸ್ಥೆಗಳ ಕಾರ್ಯಕರ್ತರು, ವಿವಿಧ ಕಂಪನಿಗಳ ನೂರಾರು ಉದ್ಯೋಗಿಗಳು ಪಾಲ್ಗೊಂಡು ಗಮನ ಸೆಳೆದರು.
ಏಕಕಾಲಕ್ಕೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಸುತ್ತಮುತ್ತ, ಮಹಿಷಾಸುರ ಪ್ರತಿಮೆ ಬಳಿ, ಬಸ್ ನಿಲ್ದಾಣ, ಭಕ್ತರು ಪ್ರಸಾದ ವಿತರಿಸಿ ಸ್ಥಳ, ಪಾದ ದಿಂದ ಮೆಟ್ಟಿಲು ಮಾರ್ಗ, ನಂದಿ ಸುತ್ತಮುತ್ತ, ದೇವಿಕೆರೆ ಸುತ್ತಮುತ್ತ ನಡೆದ ಸ್ವಚ್ಛತಾ ಅಭಿಯಾನವನ್ನು ಇಂದು ಬೆಳಿಗ್ಗೆ ಜಿಪಂ ಸಹಾಯಕ ಕಾರ್ಯದರ್ಶಿ ಕೆ.ಎಸ್.ಮನೋಜ್ ಕುಮಾರ್ ಹಾಗೂ ಚಾಮುಂಡಿಬೆಟ್ಟ ಗ್ರಾ.ಪಂ ಪಿಡಿಓ ಪೂರ್ಣಿಮಾ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ವಿವಿಧ ತಂಡಗಳಾಗಿ ವಿಂಗಡಣೆಗೊಂಡ ಸ್ವಯಂ ಸೇವಕರು ಹಾಗೂ ವಿವಿಧ ಸಂಸ್ಥೆಗಳ ನೌಕರರು, ವಿದ್ಯಾರ್ಥಿಗಳು ವಿಂಗಡಣೆಗೊಂದು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು. ಇಂದು ನಡೆದ ಅಭಿಯಾನದಲ್ಲಿ ಪ್ಲಾಸ್ಟಿಕ್ ಸೇರಿ ದಂತೆ ಮೂರು ಟಿಪ್ಪರ್‍ಗೂ ಅಧಿಕ ತ್ಯಾಜ್ಯ ಸಂಗ್ರಹಿಸಲಾಯಿತು. ಸುಮಾರು ಎರಡೂವರೆ ತಾಸು ಶ್ರಮಧಾನ ನಡೆಸಿದರಲ್ಲದೆ, ಬೆಟ್ಟದಲ್ಲಿರುವ ಮಳಿಗೆದಾರರಿಗೆ ಹಾಗೂ ಪ್ರವಾಸಿಗರಿಗೆ ಪ್ಲಾಸ್ಟಿಕ್ ಬಳಸದಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಿದರು. ಇದೇ ವೇಳೆ ಜಿಪಂ ಸಹಾಯಕ ಕಾರ್ಯದರ್ಶಿ ಕೆ.ಎಸ್.ಮನೋಜ್ ಕುಮಾರ್, ನಮ್ಮ ಮೈಸೂರು ಫೌಂಡೇಶನ್ ಟ್ರಸ್ಟಿ ಎನ್.ಮಲ್ಲೇಶ್ ಮಾತನಾಡಿದರು.
ಅಭಿಯಾನದಲ್ಲಿ ನಮ್ಮ ಮೈಸೂರು ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಕೆ.ದಶರಥ, ಸ್ಥಾಪಕ ಟ್ರಸ್ಟಿ ಸಿ.ಆರ್.ಪವಿತ್ರ, ಟ್ರಸ್ಟಿಗಳಾದ ಎನ್.ಮಲ್ಲೇಶ್, ಎಂ.ಜೆ.ವೀರಾಶ್, ಬಿ.ಎನ್.ಶ್ರೀರಾಜ್, ಎಂ.ವಿ.ಕಲ್ಯಾಣ, ಕೆ.ಎನ್.ರಮೇಶ್, ಕೆ.ಆರ್.ನಿಹಾರಿಕ, ಕೆ.ಅನುರಾಧ ಸ್ವಯಂ ಸೇವಕರು, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ಸೇರಿದಂತೆ 150 ಮಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು