ಮೈಸೂರು, ಜು.8(ಪಿಎಂ)- ಮೈಸೂರು ಮಹಾನಗರಪಾಲಿಕೆಯಲ್ಲಿ ನಿವೇಶನವೊಂದರ ಖಾತೆ ಸಂಬಂಧ ದಾಖಲೆಗಳೇ ಇಲ್ಲ, ಯಾರದೋ ಮನೆ ಜಾಗಕ್ಕೆ ಮತ್ಯಾರಿಗೋ ಖಾತೆ ಮಾಡಿಕೊಟ್ಟಿರುವುದೂ ಸೇರಿದಂತೆ ಹಲವು ಆರೋಪಗಳು ಪಾಲಿಕೆ ಅಧಿಕಾರಿ ವರ್ಗದ ವಿರುದ್ಧ ಸೋಮವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕೇಳಿ ಬಂದಿತು.
ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆ ಯರ್ ಸಭಾಂಗಣದಲ್ಲಿ ಮೇಯರ್ ಪುಷ್ಪ ಲತಾ ಜಗನ್ನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜು ನಾಥ್ ಈ ಆರೋಪಗಳನ್ನು ಮಾಡಿದರ ಲ್ಲದೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.
ಮೈಸೂರು ತಾಲೂಕಿನ ನಾಚನಹಳ್ಳಿ ಪಾಳ್ಯ ಜೆಪಿ ನಗರದ ಸರ್ವೇ ನಂ.159/1ರಲ್ಲಿ 1985ರ ಆ.12ರಂದು 12 ಮಂದಿಗೆ ಮನೆ ಕಟ್ಟಲು ಜಿಲ್ಲಾಧಿಕಾರಿಗಳಿಂದ 3.34 ಗುಂಟೆ ಜಮೀನಿಗೆ ಅನ್ಯಕ್ರಾಂತ ಮಾಡ ಲಾಗಿದೆ. ಈ ಪೈಕಿ ಹೆಚ್‍ಡಿ ಕೋಟೆ ತಾಲೂ ಕಿನ ಜಕ್ಕಳ್ಳಿ ನಿವಾಸಿ ಜೆ.ಪಿ.ಸೋಮಶೇಖರ್ ಕಾನೂನಿನ್ವಯ ನಿವೇಶನ ರಚಿಸಿ 2008ರ ಏ.9ರಂದು ಪಾಲಿಕೆ ವಲಯ ಕಚೇರಿ-2ರಲ್ಲಿ ಖಾತೆ ಮಾಡಿಸಿಕೊಂಡಿದ್ದರು. ಬಳಿಕ ಪುತ್ರ ಜೆ.ಎಸ್.ಮಹಾದೇವ ಪ್ರಸಾದ್ ಅವರಿಗೆ ವಿಭಾಗ ಪತ್ರ ಮಾಡಿದ್ದಾರೆ ಎಂದು ಬಿ.ವಿ.ಮಂಜುನಾಥ್ ತಿಳಿಸಿದರು.
ವಿಭಾಗ ಪತ್ರದ ಆಧಾರದಲ್ಲಿ 2016ರ ಜು.26ರಂದು ಪಾಲಿಕೆ ವಲಯ ಕಚೇರಿ-2ರಲ್ಲಿ ಜೆ.ಎಸ್.ಮಹಾದೇವ ಪ್ರಸಾದ್‍ಗೆ ಖಾತೆ ಮಾಡಿಕೊಟ್ಟಿದ್ದು, ಈಗ ವಲಯ ಕಚೇರಿ-2ರಲ್ಲಿ ಇದರ ಬಗ್ಗೆ ವಿಚಾರಿಸಿದರೆ ನಕಲಿ ಖಾತೆ ಎಂದು ಅಧಿಕಾರಿಗಳು ಹೇಳು ತ್ತಿದ್ದು, ಈ ಖಾತೆಯ ಯಾವುದೇ ದಾಖಲೆ ಗಳಿಲ್ಲ ಎನ್ನುತ್ತಿದ್ದಾರೆ. ಮತ್ತೊಂದು ಪ್ರಕ ರಣದಲ್ಲಿ ವಲಯ ಕಚೇರಿ-1ರಲ್ಲಿ ವಾರ್ಡ್ 50ರ ವ್ಯಾಪ್ತಿಯಲ್ಲಿ ಜಯಲಕ್ಷ್ಮೀ ಎಂಬು ವವರಿಗೆ ಅವರ ಪಕ್ಕದ ಮನೆ ನಿವಾಸಿ ಶಿವಕುಮಾರ್ ಎಂಬವರ ಮನೆಯ 10 ಅಡಿ ಜಾಗವನ್ನು ಸೇರಿಸಿ ಖಾತೆ ಮಾಡಿಕೊಟ್ಟಿ ದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ತನಿಖೆ ನಡೆಸಿ, ಸಂಬಂ ಧಿಸಿದ ಅಧಿಕಾರಿಗಳ ವಿರುದ್ಧ ಕಾನೂನಿ ನಂತೆ ಕ್ರಮ ಕೈಗೊಂಡು ನೊಂದ ನಾಗರಿಕ ರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಕರಣಗಳ ಕುರಿತ ದಾಖಲೆಗಳನ್ನು ಮೇಯರ್ ಅವರಿಗೆ ಒಪ್ಪಿಸಿದರು.
ಬಜೆಟ್ ಪುಸ್ತಕ ಕೊಡಿಸಿ: ಬಜೆಟ್ ಪುಸ್ತಕ ವನ್ನೇ ಕೊಟ್ಟಿಲ್ಲ. ಹಾಗೆಯೇ ಚರ್ಚೆ ಮಾಡಿ ದರೆ ಅದಕ್ಕೆ ಅರ್ಥವಿದೆಯೇ ಎಂದು ಬಿ.ವಿ. ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಯಲ್ಲಿ ಕೆಲ ಹೊತ್ತಿನಲ್ಲೇ ಬಜೆಟ್ ಪುಸ್ತಕ ಗಳನ್ನು ಎಲ್ಲಾ ಸದಸ್ಯರಿಗೆ ನೀಡಲಾಯಿತು.
2,059 ಬಲ್ಪ್‍ಗಳು ಸಾಲದು: ಮೈಸೂರು ನಗರದ ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಸುವ ಯೋಜನೆಯಿಂದ ಯಾವುದೇ ದುರಸ್ತಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಕಳೆದ ಕೌನ್ಸಿಲ್ ಸಭೆಯಲ್ಲಿ ಆಕ್ರೋಶ ವ್ಯಕ್ತ ವಾಗಿತ್ತು. ಇದೀಗ ಎಲ್ಲಾ ವಾರ್ಡ್‍ಗಳೂ ಒಳಗೊಂಡಂತೆ 2,059 ಕಂಬಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಸಿಕೊಳ್ಳಲು ಪಾಲಿಕೆಗೆ ಅವ ಕಾಶ ನೀಡಲಾಗಿದೆ. ಆದರೆ ಎಲ್ಲಾ ವಾರ್ಡ್ ಸೇರಿದಂತೆ ಕೇವಲ 2,059 ಬಲ್ಬ್‍ಗಳು ಸಾಲದು ಎಂದು ನಗರಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
35 ಲಕ್ಷ ರೂ. ವೆಚ್ಚ ಬೇಕಿತ್ತೇ?: ಎಲ್‍ಇಡಿ ಬಲ್ಬ್ ಯೋಜನೆ ಸಂಬಂಧ ಸಮೀಕ್ಷೆ ನಡೆ ಸಲು ನಮ್ಮದೇ ಎಲೆಕ್ಟ್ರಿಕಲ್ ವಿಭಾಗವಿದ್ದರೂ ಪಾಲಿಕೆಯಿಂದ 35 ಲಕ್ಷ ರೂ. ಕೊಟ್ಟು ಖಾಸಗಿ ಏಜೆನ್ಸಿ ಮೂಲಕ ಸಮೀಕ್ಷೆ ಮಾಡಿ ಸುವ ಅಗತ್ಯವೇನಿತ್ತು ಎಂದು ಬಿಜೆಪಿ ಸದಸ್ಯ ರಾದ ಬಿ.ವಿ.ಮಂಜುನಾಥ್ ಮತ್ತು ಶಿವ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರ ಲ್ಲದೆ, ಈ ಸಮೀಕ್ಷೆ ನಡೆಯುತ್ತಿರುವ ಬಗ್ಗೆ ಆಯಾಯ ವಾರ್ಡಿನ ಪಾಲಿಕೆ ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲ. ಜೊತೆಗೆ ಕೆಳ ಹಂತದ ಅಧಿಕಾರಿಗಳು ಈ ಬಗ್ಗೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಖಾಸಗಿ ಏಜೆನ್ಸಿ ಸಮೀಕ್ಷೆ ನಡೆಸಲು ಕೌನ್ಸಿಲ್ ಸಭೆಯ ಒಪ್ಪಿಗೆಯನ್ನೂ ಪಡೆದಿಲ್ಲ ಎಂದು ಆರೋಪಿಸಿದರು.
ಶಿವಕುಮಾರ್ ಮಾತನಾಡಿ, ಎಲ್ಲಾ 9 ವಲಯ ಕಚೇರಿಯಲ್ಲಿ 9 ಮಂದಿ ಎಲೆಕ್ಟ್ರಿಕಲ್ ಇಂಜಿಯರ್‍ಗಳಿದ್ದಾರೆ. ಅವರೇ ಈ ಸಮೀಕ್ಷೆ ಮಾಡಬಹುದಿತ್ತು. ಅದಕ್ಕಾಗಿ ಹೀಗೆ ಹಣ ಪೋಲು ಮಾಡಬೇಕಿತ್ತೇ? ಎಂದು ಪ್ರಶ್ನಿಸಿದರು. ಈ ಸಂಬಂಧ ಮಾಹಿತಿ ನೀಡಿದ ಸಂಬಂಧಿಸಿದ ಅಧಿ ಕಾರಿ, ಪಿಪಿಪಿ ಮಾದರಿಯಲ್ಲಿ ಎಲ್‍ಇಡಿ ಬಲ್ಬ್ ಯೋಜನೆ ಅನುಷ್ಠಾನಗೊಳಿಸ ಬೇಕಿದೆ. ಸಮೀಕ್ಷೆ ಸಂಬಂಧ ಜಿಲ್ಲಾಧಿಕಾರಿ ಗಳ ಸೂಚನೆಯಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಶಿವಕುಮಾರ್, ಪಾಲಿಕೆಯೇ ಮಾಡಬಹುದೆಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉಪ ಮೇಯರ್ ಷಫಿ ಅಹಮ್ಮದ್ ಸೇರಿದಂತೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಸಭೆಯಲ್ಲಿ ಹಾಜರಿದ್ದರು.
ಜೆಡಿಎಸ್ ಕಚೇರಿಗೆ ಜಾಗ ಮಂಜೂರು ವಿಚಾರ: ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರ ವಾಕ್ಸಮರ
ಮೈಸೂರು, ಜು.8(ಪಿಎಂ)- ಜೆಡಿಎಸ್ ಕಚೇರಿ ಉಪ ಯೋಗಕ್ಕೆ ಪಾಲಿಕೆಯ ಸ್ವಾಮ್ಯದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪಕ್ಕದ ಮೂಲೆ ನಿವೇಶನ ನೀಡುವ ಮನವಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ನಡುವೆ ವಾಕ್ಸಮರವೇ ನಡೆಯಿತು.
ಸಭೆಯ ಕಾರ್ಯಸೂಚಿಯಂತೆ ಜೆಡಿಎಸ್ ನಗರಾ ಧ್ಯಕ್ಷ ಕೆ.ಟಿ.ಚೆಲುವೇಗೌಡ ಸದರಿ ನಿವೇಶನ ಕೋರಿರುವ ವಿಚಾರ ಚರ್ಚೆಗೆ ಬಂದಿತು. ಬಿಜೆಪಿ ಸದಸ್ಯರು ಈ ರೀತಿ ನಿವೇಶನ ನೀಡಲು ಅವಕಾಶವಿಲ್ಲ ಎಂದು ವಾದಿಸಿದರೆ, ಈ ಹಿಂದೆ ಕೊಟ್ಟಿರುವ ಉದಾಹರಣೆ ಗಳಿವೆ ಎಂದು ಜೆಡಿಎಸ್ ಸದಸ್ಯರು ಪ್ರತಿಪಾದಿಸಿದರು.
ಜೆಡಿಎಸ್ ಸದಸ್ಯ ಎಸ್‍ಬಿಎಂ ಮಂಜು ಮಾತ ನಾಡಿ, ಸಭೆಯಲ್ಲಿ ಈ ಸಂಬಂಧ ತೀರ್ಮಾನ ಮಾಡಿ ಸರ್ಕಾರಕ್ಕೆ ಕಳುಹಿಸಿ ಅದರಂತೆ ಕ್ರಮ ವಹಿಸಬಹುದು. ನಾವೇನು ಪುಕ್ಕಟೆ ಕೇಳುತ್ತಿಲ್ಲ ಎಂದು ಕಿಡಿಕಾರಿದರು.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಮಾತನಾಡಿ, ಕೆಲ ಪ್ರಕರಣಗಳನ್ನು ಹೊರತುಪಡಿಸಿ ಈ ವಿಷಯ ದಲ್ಲಿ ಬಹಿರಂಗ ಹರಾಜು ಮೂಲಕವೇ ತೆಗೆದುಕೊಳ್ಳ ಬೇಕಿರುತ್ತದೆ ಎಂದು ಮೇಯರ್ ಸೂಚನೆ ಮೇರೆಗೆ ಮಾಹಿತಿ ನೀಡಿದರು. ಇದೇ ವೇಳೆ ಬಿ.ವಿ.ಮಂಜು ನಾಥ್, ಎಂ.ಸಿ.ರಮೇಶ್, ಶಿವಕುಮಾರ್, ಸುನಂದ ಪಾಲನೇತ್ರ ಸೇರಿದಂತೆ ಎಲ್ಲಾ ಬಿಜೆಪಿ ಸದಸ್ಯರು, ಹಾಗಾ ದರೆ ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆಯುವ ಅಗತ್ಯವೇ ಉದ್ಭವಿಸಲ್ಲ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಎರಡೂ ಪಕ್ಷಗಳ ಸದಸ್ಯರ ನಡುವಿನ ವಾದ-ಪ್ರತಿವಾದದ ಗದ್ದಲದಲ್ಲಿ ಸಭೆಯು ಮುಳು ಗಿತು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಅದರಂತೆ ಕ್ರಮ ವಹಿಸುವುದಾಗಿ ಅಂತಿಮವಾಗಿ ಮೇಯರ್ ಪ್ರಕಟಿಸಿ ಸಭೆಯನ್ನು ನಿಯಂತ್ರಣಕ್ಕೆ ತಂದರು.
ಖಾಲಿ ನಿವೇಶನ ಶುಚಿಗೊಳಿಸಿ: ಖಾಲಿ ನಿವೇಶನ ಸ್ವಚ್ಛತೆಗಾಗಿ 2011ರಿಂದ ಇಲ್ಲಿಯವರೆಗೆ ಏಳೂವರೆ ಕೋಟಿ ರೂ. ನಿವೇಶನದಾರರಿಂದ ವಸೂಲಿ ಮಾಡಿದೆ. ಆದರೆ ಶುಚಿಗೊಳಿಸಲು ಮುಂದಾಗಲೇ ಇಲ್ಲ. ಈ ಹಣವನ್ನೂ ಮತ್ತೆ ಯಾವುದಕ್ಕೆ ಇಟ್ಟುಕೊಂಡಿದೀರಾ? ಎಂದು ಬಿ.ವಿ.ಮಂಜುನಾಥ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ವಲಯ ಕಚೇರಿ -3ರ ಸಹಾಯಕ ಆಯುಕ್ತ ಬಿ.ಸಿ.ಶಿವಾನಂದ ಮೂರ್ತಿ (ಇವರು ಕೆಲ ದಿನಗಳಿಂದ ಪ್ರಭಾರ ಹೆಚ್ಚು ವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಹೆಚ್ಚುವರಿ ಆಯುಕ್ತರಾಗಿ ಶಶಿಕುಮಾರ್ ಅವರು ಅಧಿ ಕಾರಿ ವಹಿಸಿಕೊಂಡಿದ್ದಾರೆ. ಆದರೆ ತಾಂತ್ರಿಕ ಕಾರಣ ಹಾಗೂ ಆಯುಕ್ತರ ಗೈರು ಹಾಜರಿ ಹಿನ್ನೆಲೆಯಲ್ಲಿ ಶಿವಾ ನಂದಮೂರ್ತಿ ಅವರೇ ಮೇಯರ್ ಅವರೊಂದಿಗೆ ಸಭೆ ನಡೆಸಿದರು. ಇದನ್ನು ಸಭೆಯಲ್ಲಿ ಮೇಯರ್ ಅವರು ಸ್ಪಷ್ಟಪಡಿಸಿದರು), ವಲಯವಾರು ಅಂದಾಜು ಪಟ್ಟಿ ಸಿದ್ಧಪಡಿಸಿ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ವಾರದೊಳಗೆ ಟೆಂಡರ್ ಕರೆಯಲಾಗುವುದು ಎಂದರು.
ಪಾಲಿಕೆ ಆಸ್ತಿ ಹಾಗೂ ಆರ್ಥಿಕ ಸಂಪನ್ಮೂಲ ಉಳಿಸಿ: ಪಾಲಿಕೆ ವ್ಯಾಪ್ತಿಯ ನಿವೇಶನದಲ್ಲಿ 4 ಪೆಟ್ರೋಲ್ ಬಂಕ್ ಗಳು ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡ ಲಾಗಿದೆ. ಈ ಪೈಕಿ ಪಾಲಿಕೆ ಹಿಂಭಾಗ ಹಾಗೂ ರಾಮ ಸ್ವಾಮಿ ವೃತ್ತದ ಬಳಿಯಿರುವ ಬಂಕ್‍ಗಳು ನಡೆಯದೇ ಜಾಗ ಪಾಳು ಬಿದ್ದಿದೆ. ಇಂತಹ ಜಾಗದಲ್ಲಿ ಪಾಲಿಕೆ ವಲಯ ಕಚೇರಿಗಳಿಗೆ ಕಟ್ಟಡ ನಿರ್ಮಿಸಿಕೊಳ್ಳಲು ಅವ ಕಾಶವಿದೆ. ಆದರೆ ಆ ಸಾಧ್ಯತೆಗಳನ್ನು ಬಿಟ್ಟು ಮತ್ತೊಂದು ಕಡೆ ಬಾಡಿಗೆಯಲ್ಲಿ ಕಚೇರಿ ನಡೆಸುವ ಉದಾಹರಣೆ ಗಳು ನಮ್ಮಲ್ಲಿವೆ. ಪಾಲಿಕೆ ಆಸ್ತಿ ಹಾಗೂ ಆರ್ಥಿಕ ಸಂಪ ನ್ಮೂಲ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಲ್ಲವೇ? ಎಂದು ಬಿಜೆಪಿ ಸದಸ್ಯೆ ಸುನಂದ ಪಾಲನೇತ್ರ ಪ್ರಶ್ನಿಸಿ ದರಲ್ಲದೆ, ಈ ಸಂಬಂಧ ಅಧಿಕಾರಿ ವರ್ಗ ಗಂಭೀರ ವಾದ ಕ್ರಮ ಕೈಗೊಂಡು ಪಾಲಿಕೆ ಆಸ್ತಿಯನ್ನು ಸಮರ್ಥ ವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೇಯರ್ ಅವರು ಪ್ರಭಾರವಾಗಿ ಅಧೀಕ್ಷಕ ಅಭಿ ಯಂತರರಾಗಿ ಜೆ.ಮಹೇಶ್ ಅವರನ್ನು ನಿಯೋಜಿಸಿ ದ್ದಾರೆ. ಸಾಧ್ಯವಾದರೆ ಸರ್ಕಾರಕ್ಕೆ ಪತ್ರ ಬರೆದು ಅವರನ್ನೇ ಖಾಯಂ ಆಗಿ ಆ ಹುದ್ದೆಯಲ್ಲಿ ಉಳಿಸಿಕೊಳ್ಳಲು ಕ್ರಮ ವಹಿಸಿ ಎಂದು ಮೇಯರ್ ಅವರಿಗೆ ಸಲಹೆ ನೀಡಿ ದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಶಿವಾನಂದಮೂರ್ತಿ, ಇದಕ್ಕೆ ಅವಕಾಶವಿಲ್ಲ. ಸರ್ಕಾರ ಆ ಹುದ್ದೆಗೆ ನೇಮಕ ಮಾಡಲಿದೆ. ಅಲ್ಲಿಯವರೆಗೆ ಅವರು ಕಾರ್ಯ ನಿರ್ವ ಹಿಸಲು ಮಾತ್ರ ಅವಕಾಶವಿದೆ ಎಂದು ತಿಳಿಸಿದರು.