ದೇಶದಲ್ಲಿನ ಜನಸಂಖ್ಯಾ ಸ್ಫೋಟ ಬಾಂಬ್ ಪರಿಣಾಮಕ್ಕಿಂತಲೂ ಭೀಕರ
ಮೈಸೂರು

ದೇಶದಲ್ಲಿನ ಜನಸಂಖ್ಯಾ ಸ್ಫೋಟ ಬಾಂಬ್ ಪರಿಣಾಮಕ್ಕಿಂತಲೂ ಭೀಕರ

July 12, 2019

ಮೈಸೂರು, ಜು.11(ಎಂಟಿವೈ)-ಬಾಂಬ್ ಗಿಂತಲೂ ಭೀಕರವಾಗಿರುವ ಜನಸಂಖ್ಯಾ ಸ್ಫೋಟ ನಿಯಂತ್ರಿಸದಿದ್ದರೆ ಆಹಾರ ಕೊರತೆ, ನಿರುದ್ಯೋಗ ಸಮಸ್ಯೆ ಉಲ್ಬಣಿಸಿ ದೇಶದ ಅಭಿವೃದ್ಧಿ ಮರೀಚಿಕೆಯಾಗಿ ಮನುಷ್ಯ ರನ್ನು ಕಿತ್ತು ತಿನ್ನಲಿದೆ ಎಂದು ಡಿ.ಬನು ಮಯ್ಯ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾ ಸಕ ಡಾ.ಬಿ.ಹಿರಣ್ಣಯ್ಯ ವಿಷಾದಿಸಿದ್ದಾರೆ.

ಮೈಸೂರಿನ ಪುರಭವನದ ಸಭಾಂಗಣ ದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಹಾಗೂ ಎಫ್‍ಪಿಎ ಇಂಡಿಯಾ ಮೈಸೂರು ಶಾಖೆ ಸಂಯುಕ್ತಾ ಶ್ರಯದಲ್ಲಿ ನಡೆದ `ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಬಾಂಬ್ ಸ್ಫೋಟಕ್ಕೆ ಸರಿಸಮವಾಗಿ ಜನ ಸಂಖ್ಯೆ ಸ್ಫೋಟವಾಗಿ ಭೀಕರ ಪರಿಣಾಮ ಬೀರುತ್ತಿದೆ. ಇದರಿಂದ ಕಿತ್ತು ತಿನ್ನುವ ಸನ್ನಿ ವೇಶ ನಿರ್ಮಾಣವಾಗಲಿದೆ. ಜನಸಂಖ್ಯೆ ಕಡಿಮೆ ಮಾಡಲು ಸಾಧ್ಯವಾಗದೇ ಇರ ಬಹುದು, ಆದರೆ ಹತೋಟಿಗೆ ತರಬಹುದಾ ಗಿದೆ. ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದಿಸುತ್ತಿರುವುರಿಂದ ಭೂಮಿ ಬರ ಡಾಗುತ್ತಿದೆ. ನಂತರದಲ್ಲಿ ಆಹಾರ ಮುಗ್ಗಟ್ಟು ಎದುರಾಗಲಿದೆ. ಇದರಿಂದ ಸುಸ್ಥಿರ ಅಭಿವೃದ್ಧಿ ಅಸಾಧ್ಯ ಎಂದರು.

ವಿಶ್ವಕ್ಕೆ ಹೆಚ್ಚು ಮಾನವ ಸಂಪನ್ಮೂಲ ಕೊಡುಗೆಯಾಗಿ ನೀಡುತ್ತಿರುವ ದೇಶ ಭಾರತ. ಜನಸಂಖ್ಯೆಯನ್ನು ಮಾನವ ಸಂಪ ನ್ಮೂಲವಾಗಿ ಪರಿವರ್ತಿಸಲು ಸರ್ಕಾರ ಯೋಜನೆ ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಇಂಗ್ಲೆಡ್‍ನ ಥಾಮಸ್ ರಾಬರ್ಟ್ ಮಾಲ್ತಸ್‍ನ `ಎಸ್ಸೆ ಆನ್ ದ ಪ್ರಿನ್ಸಿಪಾಲ್ ಆಫ್ ಪಾಪ್ಯುಲೇಶನ್’ ಪುಸ್ತಕವು ಜನ ಸಂಖ್ಯೆ ಸಮಸ್ಯೆ ಹೇಳುತ್ತದೆ. ಪ್ರತಿ 25 ವರ್ಷಗಳಿಗೊಮ್ಮೆ ಜನಸಂಖ್ಯೆ ದ್ವಿಗುಣ ಆಗುತ್ತದೆ. ಜನಸಂಖ್ಯೆ ಹೆಚ್ಚಳ ಸಮಸ್ಯೆ ಎಂದು 50ರ ದಶಕದಲ್ಲಿ ತಿಳಿಯಿತು. 1950 ರಲ್ಲಿ ಸಾವಿರಕ್ಕೆ 55 ಮಂದಿ ಸಾಯುತ್ತಿ ದ್ದರು. ಈಗ ಸಾವಿರಕ್ಕೆ ಎಂಟು ಮಂದಿ ಸಾಯುತ್ತಿದ್ದಾರೆ. ವೈದ್ಯಕೀಯ ಸುಧಾರಣೆ ಯಿಂದ ಸಾವಿನ ಸಂಖ್ಯೆ ಇಳಿಮುಖ ವಾಗಿದೆ. ಜನನ ಪ್ರಮಾಣವು ಹೆಚ್ಚುತ್ತಿದೆ ಎಂದು ವಿವರಿಸಿದರು.

ಕುಟುಂಬ ಕಲ್ಯಾಣಾಧಿಕಾರಿ ಡಾ. ಮೊಹಮ್ಮದ್ ಸಿರಾಜ್ ಅಹಮದ್ ಪ್ರಾಸ್ತಾ ವಿಕವಾಗಿ ಮಾತನಾಡಿ, ಪುರುಷರು ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿ ಕೊಂಡರೆ ನಿಶ್ಯಕ್ತಿ ಆಗುತ್ತದೆ ಎಂಬ ತಪ್ಪು ಭಾವನೆಯಿಂದ ದೂರು ಉಳಿಯುತ್ತಿ ದ್ದಾರೆ. ಇಂಥ ವದಂತಿಗೆ ಕಿವಿಗೊಡ ಬಾರದು ಎಂದು ಅರಿವು ಮೂಡಿಸಿದರು.

ಇದೇ ಸಂದರ್ಭದಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸನ್ಮಾನ ಮಾಡ ಲಾಯಿತು. ಪಾಲಿಕೆ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಕಾರ್ಯ ಕ್ರಮ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ವೆಂಕಟೇಶ್, ಪಾಲಿಕೆ ಆರೋಗ್ಯಾ ಧಿಕಾರಿ ಡಾ.ಜಯಂತ್, ಆರ್‍ಸಿಎಚ್ ಅಧಿಕಾರಿ ಡಾ.ಎಲ್.ರವಿ, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಸ್.ಚಿದಂಬರ, ಕಾರ್ಯಕ್ರಮಾಧಿಕಾರಿ ಡಾ.ಮಂಜುಪ್ರಸಾದ್, ಮೈಸೂರು ತಾಲೂಕು ವೈದ್ಯಾಧಿಕಾರಿ ಡಾ.ಮಹಾ ದೇವ ಪ್ರಸಾದ್, ಪ್ರಸೂತಿ ತಜ್ಞ ಡಾ. ಸೋಮೇಗೌಡ, ಎಫ್‍ಪಿಎ ಇಂಡಿಯಾ ಮೈಸೂರು ಶಾಖೆ ವಿಜು ಮೌಳಿ ಇದ್ದರು.

ಜಾಥಾ: ಜನಸಂಖ್ಯಾ ಸ್ಫೋಟದ ವಿರುದ್ಧ ಜಾಗೃತಿ ಮೂಡಿಸಲು ಆಯೋ ಜಿಸಿದ್ದ ಜಾಥಾಕ್ಕೆ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಮುಂಭಾಗ ಇಂದು ಬೆಳಿಗ್ಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು.

ಜಾಥಾದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನ ನರ್ಸಿಂಗ್ ಶಾಲೆ, ಗೋಪಾಲ ಗೌಡ ಶಾಂತವೇರಿ ಸ್ಮಾರಕ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು, ರೋಟರಿ ಶಾಲೆಯ ವಿದ್ಯಾರ್ಥಿಗಳು, ಆಶಾ ಕಾರ್ಯ ಕರ್ತೆಯರು ಪಾಲ್ಗೊಂಡಿದ್ದರು. ಜಾಥಾ ಇರ್ವಿನ್ ರಸ್ತೆ, ಆಶೋಕ ರಸ್ತೆ ಮೂಲಕ ಪುರಭವನ ತಲುಪಿತು.

Translate »