ಮೈಸೂರಲ್ಲಿ ಪ್ರಾಣಿ ಸಂಕುಲ ಉಳಿಸಲು `ಸಸ್ಯಾಹಾರಕ್ಕಾಗಿ ಓಟ’
ಮೈಸೂರು

ಮೈಸೂರಲ್ಲಿ ಪ್ರಾಣಿ ಸಂಕುಲ ಉಳಿಸಲು `ಸಸ್ಯಾಹಾರಕ್ಕಾಗಿ ಓಟ’

July 22, 2019

ಮೈಸೂರು, ಜು.21 (ಆರ್‍ಕೆಬಿ)- ಮಾನ ವರು ಪ್ರಾಣಿಗಳ ಮಾಂಸ ಸೇವನೆಯಿಂದ ನಶಿಸುತ್ತಿರುವ ಪ್ರಾಣಿಸಂಕುಲ ಉಳಿಸಬೇಕು. ಸಸ್ಯಾಹಾರವನ್ನೇ ಬಳಸುವ ಮೂಲಕ ಪ್ರಾಣಿ ಸಂಕುಲ ಸ್ವತಂತ್ರವಾಗಿ ಬದುಕಲು ಬಿಡ ಬೇಕು. ನಾವೆಲ್ಲರೂ ಸಸ್ಯಾಹಾರಿಗಳಾಗ ಬೇಕು ಎಂಬ ಸಂದೇಶ ಸಾರುವ `ಸಸ್ಯಾ ಹಾರಕ್ಕಾಗಿ ಓಟ’ ಕಾರ್ಯಕ್ರಮ ಭಾನು ವಾರ ಮೈಸೂರಿನಲ್ಲಿ ನಡೆಯಿತು.

ಪಿರಮಿಡ್ ಸ್ಪಿರಿಚುಯಲ್ ಸೊಸೈಟೀಸ್ ಮೂವ್‍ಮೆಂಟ್, ಜೈನ ಪಾಶ್ರ್ವ ಮತ್ತು ವೈಶ್ಯ ಸಂಸ್ಥೆ, ವಾಸವಿ ಕ್ಲಬ್ ಆಫ್ ಇಂಟರ್ ನ್ಯಾಷನಲ್, ತೇರಾ ಪಂತ್, ಸುಮತಿನಾಥ ನವ ಯುವಕ ಮಂಡಲ್, ಸ್ಥಾನಿಕವಾಸಿ ಯುವಕ್ ಸಂಘಟನ್, ಆರ್ಯ ವೈಶ್ಯ ಅಭಿವೃದ್ಧಿ ಸಂಸ್ಥೆಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಜಂಟಿಯಾಗಿ ಆಯೋ ಜಿಸಿದ್ದ `ಸಸ್ಯಾಹಾರಕ್ಕಾಗಿ ಓಟ’ ಕಾರ್ಯ ಕ್ರಮಕ್ಕೆ ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಹಾ ಶತಾವದಾನಿ ಮುನಿಶ್ರೀ ಅಜಿತ್ ಚಂದ್ರ ಸಾಗರ್ ಚಾಲನೆ ನೀಡಿದರು.

ನೂರಾರು ಮಂದಿ ಪುರುಷರು, ಮಹಿಳೆ ಯರು, ಮಕ್ಕಳು ಭಾಗವಹಿಸಿದ್ದ ಎರಡು ಕಿ.ಮೀ ಉದ್ದದ `ಸಸ್ಯಾಹಾರಕ್ಕಾಗಿ ಓಟ’ ಹಾರ್ಡಿಂಜ್ ವೃತ್ತ, ಕೆಎಸ್‍ಆರ್‍ಟಿಸಿ ಗ್ರಾಮಾಂ ತರ ಬಸ್ ನಿಲ್ದಾಣ, ಅಶೋಕ ರಸ್ತೆ ಮೂಲಕ ಮತ್ತೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ ತಲುಪಿತು.

ಪಿರಮಿಡ್ ಸ್ಪಿರಿಚುಯಲ್ ಸೊಸೈಟೀಸ್ ಮೂವ್‍ಮೆಂಟ್ ದೇಶಾದ್ಯಂತ ಸಸ್ಯಾ ಹಾರವನ್ನು ಬಳಸುವ ಮೂಲಕ ಪ್ರಾಣಿ ಸಂಕುಲವನ್ನು ರಕ್ಷಿಸುವಂತೆ ಸಂದೇಶ ನೀಡುವ ಕಾರ್ಯಕ್ರಮ ನಡೆಸುತ್ತಿದ್ದು, ಮೈಸೂರಿನಲ್ಲಿ ಇದು 391ನೇ ಕಾರ್ಯ ಕ್ರಮವಾಗಿದೆ. ಓಟದಲ್ಲಿ ವಿಜೇತರಾದ ಚೆಲುವೇಗೌಡ, ಅರುಣ್ ಅವರು ಕ್ರಮ ವಾಗಿ ಪ್ರಥಮ ಮತ್ತು ದ್ವಿತೀಯ ಬಹು ಮಾನ ಪಡೆದರು.

ಮೀರಾ ಮತ್ತು ರಿಂಚನ್ ಸಮಾ ಧಾನಕರ ಬಹುಮಾನ ಪಡೆದರು. ಪಿರ ಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‍ಮೆಂಟ್‍ನ ಸಂಸ್ಥಾಪಕರಾದ ದಿವ್ಯಾ ಶ್ರೀನಿವಾಸ್, ಮೈಸೂರು ಶಾಖೆಯ ಮುಖ್ಯಸ್ಥ ಬಿ.ಚೆನ್ನಬಸವ, ಬೆಂಗಳೂರಿನ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್ ಅಧ್ಯಕ್ಷ ಕೆ.ವರಾಹಮೂರ್ತಿ, ಆಧ್ಯಾತ್ಮ ಚಿಂತಕ ಕೆ.ಆರ್.ವಸಂತಕುಮಾರ್, ಟೀಂ ಪರಿ ವರ್ತನಾ ಸಂಸ್ಥೆ ಮುಖ್ಯಸ್ಥ ಚೇತನ್ ರಾಮ್, ವಾಸವಿಕ್ಲಬ್ ಅಧ್ಯಕ್ಷೆ ಸನಿತಾ ಜಗದೀಶ್, ಗೀತಾ, ಗೌರವ್ ಸುಧಾ ಮುರಳಿ, ಸ್ಥಾನಿಕವಾಸಿ ಯುವಕ್ ಸಂಘ ಟನ್ ಅಧ್ಯಕ್ಷ ರಾಜನ್ ಬಾಗ್ಮಾರ್, ಸದಸ್ಯ ರಾದ ಧರಂಚಂದ್ ಮುತಾ, ಸುನಿಲ್ ಪಟ್ವಾ, ಪ್ರಕಾಶ್ ಗಾಂಧಿ, ಗೌತಮ್ ಗಾಂಧಿ ಇನ್ನಿತರರು ಉಪಸ್ಥಿತರಿದ್ದರು.

Translate »