ಮೈಸೂರು, ಆ.5(ಎಸ್‍ಬಿಡಿ)-ಜಮ್ಮು-ಕಾಶ್ಮೀರ ವಿಚಾರ ದಲ್ಲಿ ಪ್ರಧಾನಿ ಮೋದಿ ಅವರದ್ದು ಎಲ್ಲರೂ ಮೆಚ್ಚುವಂತಹ ನಿರ್ಧಾರ ವೆಂದು ಮಾಜಿ ಸ್ಪೀಕರ್ ಕೃಷ್ಣ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ಹಾಗೂ 35-ಎ ಕಲಂ ರದ್ದುಗೊಳಿಸಿ ದ್ದರ ಬಗ್ಗೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿ ಸಿದ ಅವರು, ಮೋದಿ ಅವರ ನಿರ್ಧಾರ ಸ್ವಾಗತಾರ್ಹ. ಆ ಕಾಲದಲ್ಲಾದ ಕೆಲವೊಂದು ಪ್ರಮಾದದಿಂದ ಕಲ್ಲು ತೂರಾಟ, ಹಿಂಸಾಚಾರ, ಭಯೋತ್ಪಾದನೆ ಹೆಚ್ಚಾಗಿ ಕಾಶ್ಮೀರ ಸಮಸ್ಯೆ ದೊಡ್ಡದಾಗಿ ದೇಶವನ್ನು ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಠಿಣ ನಿರ್ಧಾರ ಅಗತ್ಯವಿತ್ತು. ಆದರೆ ಈವರೆಗೆ ರಾಜಕೀಯ ಇನ್ನಿತರ ಕಾರಣಗಳಿಂದ ಯಾರೂ ದಿಟ್ಟ ನಿರ್ಧಾರ ಕೈಗೊಂಡಿರಲಿಲ್ಲ. ಈಗ ಮೋದಿ ಮಾಡಿ ತೋರಿಸಿ ದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಾಕಿಸ್ತಾನದ ಪ್ರಚೋದನೆಯಿಂದ ಗುಡ್ಡಗಾಡು ಜನ ಕಾಶ್ಮೀರ ಸೇರಿ ಕೊಂಡರು. ಅದನ್ನು ಪಾಕ್ ಆಕ್ರಮಿತ ಕಾಶ್ಮೀರ ಎನ್ನಲಾ ಯಿತು. ಆಗಿನ ಜನರಲ್ ತಿಮ್ಮಯ್ಯ ಅವರು 48 ಗಂಟೆ ಸಮಯಾವಕಾಶ ಕೊಡಿ. ಪಿಓಕೆಯನ್ನು ಮತ್ತೆ ಭಾರತದ ವಶಕ್ಕೆ ಪಡೆಯುತ್ತೇವೆಂದು ಕೇಳಿಕೊಂಡಿದ್ದರು. ಆದರೆ ಇದಕ್ಕೆ ಅನುಮತಿ ನೀಡದ ನೆಹರೂ, ಜಗತ್ತಿಗೆ ದೊಡ್ಡ ಶಾಂತಿಧೂತ ಎಂಬಂತೆ ಸಂಯುಕ್ತ ರಾಷ್ಟ್ರಗಳ ಸಂಘದ ಬಳಿ ಹೋದರು. ಸಮಸ್ಯೆ ಹಾಗೆಯೇ ಉಳಿದು, ದಿನೇ ದಿನೆ ಹೆಚ್ಚಾಯಿತು. ಹಾಗಾಗಿ ದೇಶದ ದೃಷ್ಟಿಯಿಂದ ಮೋದಿ ನಿರ್ಧಾರವನ್ನು ಅಭಿನಂದಿಸಲೇಬೇಕು ಎಂದರು.
ಆಂತರಿಕ ಸರ್ಜಿಕಲ್ ಸ್ರೈಕ್: ಇದೇ ರೀತಿ ರಾಷ್ಟದ ಅಭಿವೃದ್ಧಿ ದೃಷ್ಟಿಯಿಂದ ಅನೇಕ ವಿಚಾರಗಳಿಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯವಾಗಿ ರಾಷ್ಟ್ರದಲ್ಲಿ ಹೆಮ್ಮರ ವಾಗಿ ಬೆಳೆದು ಅಭಿವೃದ್ಧಿಯನ್ನು ಕುಂಠಿತಗೊಳಿಸಿರುವ ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಬೇ ಕೆಂದು ಮೋದಿ ಅವರಲ್ಲಿ ಮನವಿ ಮಾಡುತ್ತೇನೆ. ಕಠಿಣ ಕಾನೂನು ಜಾರಿಯಾದರೆ ದರೋಡೆಕೋರರು ಹೆದರುತ್ತಾರೆ. ದೇಶವೂ ಸುಭಿಕ್ಷವಾಗಿರುತ್ತದೆ ಎಂದು ಕೃಷ್ಣ ಅವರು ಆಶಯ ವ್ಯಕ್ತಪಡಿಸಿದ್ದಾರೆ.