‘ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ಶಾಸಕರು, ಸಿಎಂಗೆ ಸರ್ವೇ ನಂ.4ರ ನಿವಾಸಿಗಳ ಆಗ್ರಹ
ಮೈಸೂರು

‘ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ಶಾಸಕರು, ಸಿಎಂಗೆ ಸರ್ವೇ ನಂ.4ರ ನಿವಾಸಿಗಳ ಆಗ್ರಹ

August 9, 2019

ಮೈಸೂರು,ಆ.8(ಪಿಎಂ)-ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸರ್ವೇ ನಂ.4ರ ಸಿದ್ಧಾರ್ಥನಗರ, ಕೆ.ಸಿ.ನಗರ, ಜೆ.ಸಿ.ನಗರ ಬಡಾವಣೆಗಳಿಗೆ ವಿಧಿಸಿರುವ `ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ಶೀಘ್ರ ಕ್ರಮ ವಹಿಸುವಂತೆ ಶಾಸಕ ಎಸ್.ಎ.ರಾಮದಾಸ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಸಿದ್ಧಾರ್ಥನಗರ ಶೋಷಿತರ ಸಂಘ ಮನವಿ ಮಾಡಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಹೆಚ್.ಆರ್.ಮಂಜುನಾಥ್, ಸರ್ಕಾರಿ ಅಧೀನದ ಹಿಂದಿನ ಸಿಐಟಿಬಿ ಹಾಗೂ ಈಗಿನ ಮುಡಾ ನಿರ್ಮಿಸಿರುವ ಈ ಬಡಾವಣೆಗಳಿಗೆ `ಬಿ’ ಖರಾಬು ಎಂದು ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಪರಿತಪಿಸುವಂತಾಗಿದೆ ಎಂದರು.

5 ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿಗಳು ಸರ್ವೇ ನಂ.4ಕ್ಕೆ ಸೇರಿದ ಸುಮಾರು 1,500 ಎಕರೆ ಪ್ರದೇಶವನ್ನು `ಬಿ’ ಖರಾಬು ಎಂದು ಆದೇಶ ಹೊರಡಿ ಸಿದರು. ಸದರಿ ಪ್ರದೇಶದಲ್ಲಿ ಸರ್ಕಾರಿ ಸಂಸ್ಥೆಗಳಿಂ ದಲೇ ನಿರ್ಮಿಸಲಾದ ಸಿದ್ಧಾರ್ಥನಗರ, ಕೆ.ಸಿ.ನಗರ ಹಾಗೂ ಜೆ.ಸಿ.ನಗರ ಬಡಾವಣೆಗಳೂ ಇವೆ. ಇದರಿಂದ ಇಲ್ಲಿ ಖಾತೆಗಳ ವರ್ಗಾವಣೆ, ಟೈಟಲ್ ಡೀಡ್, ನಕ್ಷೆ ಅನು ಮೋದನೆ ಸೇರಿದಂತೆ ಇನ್ನಿತರ ಯಾವುದೇ ಕೆಲಸ ಮಾಡಲಾಗದ ಪರಿಸ್ಥಿತಿ ಉದ್ಭವಿಸಿದೆ. ಆಸ್ತಿ ಆಧಾರದಲ್ಲಿ ಸಾಲಸೌಲಭ್ಯಕ್ಕೂ ಅವಕಾಶವಿಲ್ಲ. ಅದೆಷ್ಟೋ ಕಟ್ಟಡಗಳು ನಿರ್ಮಾಣ ಹಂತದಲ್ಲೇ ಅರ್ಧಕ್ಕೆ ನಿಲ್ಲು ವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿವಾಸಿಗಳ ಹೋರಾಟದ ಫಲವಾಗಿ ಈ ಹಿಂದೆ ಶಾಸಕರಾಗಿದ್ದ ಎಂ.ಕೆ.ಸೋಮಶೇಖರ್ ಅವರು ಈ ವಿಷಯವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಗಮನಕ್ಕೆ ತಂದಿದ್ದರು. ಬಳಿಕ ಸಚಿವ ಸಂಪುಟ ಸಭೆ ಯಲ್ಲಿ ಸದರಿ ಬಡಾವಣೆಗಳನ್ನು `ಬಿ’ ಖರಾಬು ನಿರ್ಬಂಧ ದಿಂದ ತೆರವುಗೊಳಿಸಲು ತೀರ್ಮಾನಿಸಿ ಆದೇಶ ಹೊರ ಡಿಸಲಾಗಿತ್ತು. ಇದಾಗಿ 2 ವರ್ಷಗಳೇ ಕಳೆ ದರೂ ಆದೇಶ ಮಾತ್ರ ಅನುಷ್ಠಾನಗೊಂಡಿಲ್ಲ. ಹೀಗಾಗಿ ಈ 3 ಬಡಾ ವಣೆಗಳನ್ನು `ಬಿ’ ಖರಾಬು ನಿರ್ಬಂಧದಿಂದ ಮುಕ್ತ ಗೊಳಿಸಿಲ್ಲ. ಮೈತ್ರಿ ಸರ್ಕಾರವೂ ಈ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಿಲ್ಲ ಎಂದು ವಿಷಾದಿಸಿದರು.

2019ರ ಫೆಬ್ರವರಿಯಲ್ಲಿ ಹಾಲಿ ಶಾಸಕ ಎಸ್.ಎ. ರಾಮದಾಸ್ ಪತ್ರಿಕಾಗೋಷ್ಠಿ ನಡೆಸಿ, ಇನ್ನು 15 ದಿನ ಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದ್ದರು. ಆದರೆ 6 ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಈ ನಿರ್ಲಕ್ಷ್ಯಧೋರಣೆ ಯಿಂದ ಮೂರು ಬಡಾವಣೆಗಳ ಸುಮಾರು 20 ಸಾವಿರ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಸಕ ಎಸ್.ಎ. ರಾಮದಾಸ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ಈ ಬಡಾವಣೆಗಳಿಗೆ ವಿಧಿಸಿರುವ `ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಕೆ.ಎಂ.ವಿಜಯ ಪ್ರಸಾದ್, ಸದಸ್ಯರಾದ ದಯಾ ನಂದ್, ಚಂಗಪ್ಪ, ನಟೇಶ್‍ಕುಮಾರ್ ಗೋಷ್ಠಿಯಲ್ಲಿದ್ದರು.

Translate »