ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ, ಗ್ರಂಥಾಲಯ ಕಟ್ಟಡ ಪರಿಶೀಲನೆ
ಮೈಸೂರು

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ, ಗ್ರಂಥಾಲಯ ಕಟ್ಟಡ ಪರಿಶೀಲನೆ

August 9, 2019

ಮೈಸೂರು, ಆ.8(ಆರ್‍ಕೆಬಿ)- ಮೈಸೂ ರಿನ ಪೀಪಲ್ಸ್ ಪಾರ್ಕ್‍ನಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಎರಡು ಅಂತ ಸ್ತಿನ ಬೃಹತ್ ಗ್ರಂಥಾಲಯ ಕಟ್ಟಡವನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಉಮಾಶಂಕರ್ ಅವರು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಟ್ಟಡ ಉತ್ತಮ ಗುಣಮಟ್ಟದಿಂದ ನಿರ್ಮಾಣ ಗೊಂಡಿರುವ ಬಗ್ಗೆ ಶ್ಲಾಘಿಸಿದರು. ಉಳಿದ ಕಾಮಗಾರಿ ಶೀಘ್ರ ಪೂರ್ಣಗೊಳಿಸು ವಂತೆ ಮೈಸೂರು ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕರಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿರ್ದೇಶಕ ಬಿ.ಮಂಜುನಾಥ್, ಸರ್ಕಾರ ಮತ್ತು ಇಲಾಖೆ ನೀಡಿದ ಅನುದಾನದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಅಂತಿಮ ಹಂತದ ಕಾಮಗಾರಿ ಬಾಕಿ ಉಳಿ ದಿದೆ. ಇದಕ್ಕೆ ಅನುದಾನದ ಕೊರತೆ ಇದೆ. ಪಾಲಿಕೆ 18 ಕೋಟಿ ರೂ.ಗಳಷ್ಟು ಗ್ರಂಥಾ ಲಯ ಕರ ಬಾಕಿ ಉಳಿಸಿಕೊಂಡಿದೆ. ಈ ಹಣ ಬಂದರೆ ಕಟ್ಟಡದ ಕಾಮಗಾರಿ ಪೂರ್ಣ ಗೊಳಿಸಲು ಸಹಾಯಕವಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಪ್ರಧಾನ ಕಾರ್ಯ ದರ್ಶಿ ಉಮಾಶಂಕರ್, ನಗರಪಾಲಿಕೆ ಗ್ರಂಥಾಲಯ ಕರ ಬಾಕಿ ಹಣವನ್ನು ನೀಡ ದಿದ್ದರೆ, ಈ ಸಂಬಂಧ ತಾವು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ನಗರಪಾಲಿಕೆಗೆ ನೀಡುವ ಅನುದಾನದಲ್ಲಿ 5 ಕೋಟಿ ರೂ.ಗಳನ್ನು ಕಡಿತ ಮಾಡಿ ಕೊಂಡು ಈ ಕಾಮಗಾರಿಗೆ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರೆಂದು ಮೈಸೂರು ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »