ಅನುದಾನದ ಕೊರತೆ: ಗ್ರಂಥಾಲಯ ಬೃಹತ್ ಕಟ್ಟಡದ ಕಾಮಗಾರಿ ಸ್ಥಗಿತ
ಮೈಸೂರು

ಅನುದಾನದ ಕೊರತೆ: ಗ್ರಂಥಾಲಯ ಬೃಹತ್ ಕಟ್ಟಡದ ಕಾಮಗಾರಿ ಸ್ಥಗಿತ

August 9, 2019

ಮೈಸೂರು, ಆ.8(ಆರ್‍ಕೆಬಿ)- ಮೈಸೂ ರಿನ ಪೀಪಲ್ಸ್ ಪಾರ್ಕ್ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಗ್ರಂಥಾಲಯದ ಬೃಹತ್ ಕಟ್ಟಡದ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ. 5 ಕೋಟಿ ರೂ. ಅಂದಾಜು ವೆಚ್ಚದ ಎರಡು ಅಂತ ಸ್ತಿನ ಕಟ್ಟಡಕ್ಕೆ ಸರ್ಕಾರ 4 ಕೋಟಿ ರೂ ಹಾಗೂ ಗ್ರಂಥಾಲಯ ಇಲಾಖೆ 25 ಲಕ್ಷ ರೂ. ನೀಡಿತ್ತು. ಆದರೆ ಉಳಿದ ಕಾಮಗಾರಿ ಗಳಿಗೆ ಅನುದಾನದ ಕೊರತೆ ಉಂಟಾಗಿದೆ.

ಪೀಪಲ್ಸ್ ಪಾರ್ಕ್‍ನ 340 ಘಿ 400 ಅಡಿ ಅಳತೆ ನಿವೇಶನದಲ್ಲಿ ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿ ಶೇ.75 ರಷ್ಟು ಪೂರ್ಣಗೊಂಡಿದೆ. ಅಂತಿಮ ಹಂತದ ಕಾಮಗಾರಿಯಲ್ಲಿ ಕಟ್ಟಡದ ಒಳಾವರಣ, ಪೀಠೋಪಕರಣ, ಲಾನ್, ಕಾಂಪೌಂಡ್ ನಿರ್ಮಾಣಗೊಳ್ಳಬೇಕಿತ್ತು ಅನುದಾನದ ಕೊರತೆ ಎದುರಾಗಿದೆ. ಹೀಗಾಗಿ ಕಟ್ಟಡದ ಅಂತಿಮ ಹಂತದ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಮೈಸೂರು ಮಹಾನಗರ ಪಾಲಿಕೆಯು 18 ಕೋಟಿ ರೂ. ಗ್ರಂಥಾಲಯ ಕರ ಬಾಕಿ ಉಳಿಸಿಕೊಂಡಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದ್ದರೂ ಪಾಲಿಕೆ ಬಾಕಿ ಗ್ರಂಥಾಲಯ ಕರವನ್ನು ಗ್ರಂಥಾ ಲಯ ಇಲಾಖೆಗೆ ಪಾವತಿಸುತ್ತಿಲ್ಲ. ಇಲಾ ಖೆಗೆ ನೀಡಬೇಕಾದ ಗ್ರಂಥಾಲಯ ಕರ ವನ್ನು ಪಾಲಿಕೆ ನೀಡಿದರೆ ಆ ಹಣದಲ್ಲಿ ಗ್ರಂಥಾಲಯದ ಬೃಹತ್ ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತವಾಗಿ ಕೈಗೊಳ್ಳಲು ಸಾಧ್ಯ ವಾಗುತ್ತದೆ. ಮಹಾ ನಗರಪಾಲಿಕೆ ನೀಡ ಬೇಕಾದ ಗ್ರಂಥಾಲಯ ಕರದ ಬಾಕಿ ಹಣ ನೀಡಿದರೆ ಕಾಮಗಾರಿಯನ್ನು ಪೂರ್ಣ ಗೊಳಿಸುವ ಇರಾದೆ ಹೊಂದಿರುವ ಗ್ರಂಥಾ ಲಯ ಇಲಾಖೆ ಅಧಿಕಾರಿಗಳು, ಅದರ ನಿರೀಕ್ಷೆಯಲ್ಲಿಯೇ ಕಟ್ಟಡದ ಅಂತಿಮ ಹಂತದ ಕಾಮಗಾರಿ ವಿಳಂಬವಾಗಿದೆ ಎನ್ನು ತ್ತಾರೆ ಮೈಸೂರು ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕ ಬಿ.ಮಂಜುನಾಥ್.

ಪಾಲಿಕೆಯು ಬಾಕಿ ಹಣ ನೀಡಿದರೆ ಆ ಹಣದಲ್ಲಿ ಗ್ರಂಥಾಲಯದ ಒಳಾವರಣ ಕಾಮಗಾರಿ, ಪೀಠೋಪಕರಣ, ಲಾನ್, ಕಾಂಪೌಡ್ ಇನ್ನಿತರ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಕಟ್ಟಡವನ್ನು ಸಮರ್ಪಿಸಲು ಸಹಾ ಯಕವಾಗುತ್ತದೆ ಎಂದು ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »