ಚಾಮುಂಡಿಬೆಟ್ಟದಲ್ಲಿ ಇಂದು ಮಹಿಷ ದಸರಾ ಆಚರಣೆ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಇಂದು ಮಹಿಷ ದಸರಾ ಆಚರಣೆ

September 27, 2019

ಮೈಸೂರು, ಸೆ.26(ಆರ್‍ಕೆಬಿ)- ಮಹಿಷ ದಸರಾ ಆಚರಣಾ ಸಮಿತಿಯಿಂದ ಮೂಲ ನಿವಾಸಿಗಳ ಮಹಿಷ ಸಾಂಸ್ಕøತಿಕ ಹಬ್ಬದ ಅಂಗವಾಗಿ ಸೆ.27ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ `ಮಹಾ ಬೌದ್ಧ ಬಿಕ್ಕು ಮಹಿಷಾ’ ಮೆರವಣಿಗೆ ಹಮ್ಮಿಕೊಂಡಿದ್ದು, ಮಧ್ಯಾಹ್ನ 12 ಗಂಟೆಗೆ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆ ಬಳಿ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಚಾಮರಾಜನಗರ ನಳಂದ ವಿವಿ ಅಷ್ಠಾಂಗ ಮಾರ್ಗ ಕೇಂದ್ರದ ಬೋದಿದತ್ತ ಭಂತೇಜಿ, ಮೇದಿನಿ ಮಹಾಬೋದಿ ಮಿಷನ್‍ನ ಬುದ್ಧ ಪ್ರಕಾಶ್ ಭಂತೇಜಿ, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ, ರಮ್ಮನಹಳ್ಳಿ ಬಸವ ಭಾವೈಕ್ಯತಾ ಕೇಂದ್ರದ ಬಸವಲಿಂಗಮೂರ್ತಿ ಶರಣರು, ಚಿತ್ರದುರ್ಗ ಐಮಂಗಲ ಹರಳಯ್ಯ ಗುರುಪೀಠದ ಬಸವಹರಳಯ್ಯ ಸ್ವಾಮೀಜಿ ಸಮ್ಮುಖದಲ್ಲಿ ಪುರಭವನದಿಂದ ಚಾಮುಂಡಿ ಬೆಟ್ಟದವರೆಗೆ ಮೆರವಣಿಗೆ ನಡೆಯಲಿದೆ.

ಚಾಮುಂಡಿಬೆಟ್ಟದ ಮಹಿಷ ಪ್ರತಿಮೆ ಬಳಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಬೃಹತ್ ಸಮಾವೇಶದಲ್ಲಿ ಪ್ರಾಂಶುಪಾಲ ಸಿದ್ದಸ್ವಾಮಿ ಅಧ್ಯಕ್ಷತೆಯಲ್ಲಿ `ಮಹಿಷ ಮಂಡಲ’ ಕೃತಿ ಯನ್ನು ಹಂಪಿ ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಚಿನ್ನಸ್ವಾಮಿ ಸೋಸಲೆ ಬಿಡು ಗಡೆ ಮಾಡಲಿದ್ದಾರೆ. ಪುಸ್ತಕ ಕುರಿತು ಪ್ರಪವೇ ಅಧ್ಯಕ್ಷ ಬಿ.ಗೋಪಾಲ್, ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸು, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಚಿಂತಕ ಪ್ರೊ. ಮಹೇಶ್ ಚಂದ್ರಗುರು ವಿಚಾರ ಮಂಡಿಸು ವರು. ವಿವಿಧ ಕ್ಷೇತ್ರಗಳ ಮುಖಂಡರು ಅತಿಥಿಗಳಾಗಿ ಭಾಗವಹಿಸುವರು.

ಇದೇ ಸಂದರ್ಭದಲ್ಲಿ ಹಲವು ಸಾಧಕರಿಗೆ ಮಹಿಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮೈಸೂರಿನ ಲಕ್ಷ್ಮಿರಾಮ್ ತಂಡದಿಂದ ಮಹಿಷ ಗೀತ ಗಾಯನ ಏರ್ಪಡಿಸಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿ ತಿಳಿಸಿದೆ.

Translate »