ಜಿಲ್ಲೆಯ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ
ಮಂಡ್ಯ

ಜಿಲ್ಲೆಯ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ

January 6, 2020

ಮದ್ದೂರು, ಜ.5- ಚುನಾವಣೆ ವೇಳೆ ವಿರೋಧ ಪಕ್ಷದ ನಾಯಕರು ಟೀಕೆ ಮಾಡುವುದು ಸಹಜ. ಆದರೆ ಚುನಾವಣೆ ನಂತರ ಎಲ್ಲರೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಾತೀತ ವಾಗಿ ಶ್ರಮಿಸಬೇಕೆಂದು  ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ತಾಲೂಕಿನ ಬುಳ್ಳನದೊಡ್ಡಿಯಲ್ಲಿ 30 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ  ಮಾತನಾಡಿದ ಅವರು, 2 ದಿನಗಳ ಹಿಂದೆ ಕೆ.ಆರ್.ಪೇಟೆ ಶಾಸಕ ಕೆ.ಸಿ. ನಾರಾಯಣಗೌಡ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಕಮಲ ಅರಳಿ ಸುವ ಬಗ್ಗೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕ ರಿಸಿದ ಅವರು, ಚುನಾವಣೆ ವೇಳೆ ಶಾಸಕರು, ವಿರೋಧ ಪಕ್ಷದ ನಾಯಕರು ಟೀಕೆ ಮಾಡುವುದು ಸಹಜ. ಚುನಾವಣೆ ಮುಗಿದ ಬಳಿಕ ತಾವೆಲ್ಲರೂ ಜಿಲ್ಲೆ ಅಭಿವೃದ್ಧಿಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಈ ವ್ಯಾಪ್ತಿಯ ಹಲವು ಗ್ರಾಮಗಳ ರಸ್ತೆಗಳು ಶಿಥಿಲಗೊಂಡಿದ್ದು, ಈಗಾಗಲೇ ಸರ್ಕಾರದಿಂದ ಹಾಗೂ ವಿವಿಧ ಇಲಾಖೆ ಮೂಲಕ ಕೋಟ್ಯಾಂತರ ರೂ. ಅನುದಾನವನ್ನು ಬಿಡುಗಡೆಗೊಳಿಸಿ ನೆನೆಗುದಿಗೆ ಬಿದ್ದಿರುವ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ, ಕುಡಿಯುವ ನೀರು ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರುವುದಾಗಿ ತಿಳಿಸಿದರು.

ತಾಲೂಕಿನ ಹಳ್ಳಿಕೆರೆ, ಬುಳ್ಳನದೊಡ್ಡಿ ಗ್ರಾಮದ ಅಭಿವೃದ್ಧಿಗೆ 50 ಲಕ್ಷ ರೂ. ಹಣ ಬಿಡುಗಡೆಯಾಗಿದ್ದು, ಹೊಸದೊಡ್ಡಿ ರಸ್ತೆ ಅಭಿವೃದ್ಧಿಗೆ 40 ಲಕ್ಷ ರೂ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗ ಲಿದ್ದು ಈ ವ್ಯಾಪ್ತಿಯ ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳು ನಿವಾರಣೆಯಾಗಲಿರುವುದಾಗಿ ತಿಳಿಸಿದರು.

ಈ ವೇಳೆ ಜಿಪಂ ಸದಸ್ಯ ಬೋರಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಶೇಖರ್, ಬೋರೇಗೌಡ, ರಾಜಣ್ಣ, ರಾಜೇಶ್, ಮಹೇಶ್, ಕುಮಾರ್, ಈರಣ್ಣ, ಮಾದೇಶ್ ಇತರರಿದ್ದರು.

 

 

 

Translate »