ಮಳವಳ್ಳಿ, ಜ.5- ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್‍ನವರು ಅಪಪ್ರಚಾರ ನಡೆಸಿ ಬಿಜೆಪಿ ಸರ್ಕಾರವಿ ರುವ ರಾಜ್ಯಗಳಲ್ಲಿ ಗಲಭೆ ಎಬ್ಬಿಸುವ ಮೂಲಕ ಸರ್ಕಾರ ಗಳನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಸೋಮಶೇಖರ್ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನ ಕಾರ್ಯಾ ಗಾರದಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಸಂವಿ ಧಾನದಲ್ಲಿ 369 ವಿಧಿಗಳನ್ನಷ್ಟೇ ಬರೆದಿದ್ದರು. ಆದರೆ ಜವಹರ ಲಾಲ್ ನೆಹರು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ 370ನೇ ವಿಧಿಯನ್ನು ಸೇರಿಸಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಇಡೀ ದೇಶದಲ್ಲಿ ಅಶಾಂತಿ ಉಂಟಾಗಲು ಕಾರಣರಾದರು. 6 ದಶಕಗಳ ಕಾಲ ಕುಟುಂಬ ರಾಜಕಾರಣದ ಮೂಲಕ ಕಾಂಗ್ರೆಸ್ ದೇಶದಲ್ಲಿ ಮಾಡಿರುವ ಅವ್ಯವಸ್ಥೆ ಗಳನ್ನು ಪ್ರಧಾನಿ ಮೋದಿ ಸರ್ಕಾರ ಸರಿಪಡಿಸುತ್ತಿದ್ದು, ಮುಂದಿನ ದಿನಗಳಲ್ಲೂ ದೇಶದ ಭದ್ರ ಬುನಾದಿಗೆ ಉತ್ತಮ ಕ್ರಮ ಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದರು.
ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ ಶೇ.3 ರಷ್ಟಿದ್ದ ಮುಸಲ್ಮಾ ನರ ಸಂಖ್ಯೆ ಪ್ರಸ್ತುತ ಶೇ.15ಕ್ಕೆ ತಲುಪಿದೆ. ಆದರೆ ಪಾಕಿ ಸ್ತಾನ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಇರುವ ಅಲ್ಪ ಸಂಖ್ಯಾತ ಹಿಂದುಗಳ ಪರಿಸ್ಥಿತಿ ಹೇಳತೀರದಾಗಿದೆ. ಎಡಪಂಥೀಯರು ಹಾಗೂ ಕಾಂಗ್ರೆಸ್‍ನವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ದೇಶದಲ್ಲಿ ವಾಸವಿರುವ ಮುಸಲ್ಮಾನ್ ಸಮುದಾಯಕ್ಕೆ ಪೌರತ್ವ ವಿಧೇಯಕದ ಬಗ್ಗೆ ತಪ್ಪು ಮಾಹಿತಿ ನೀಡಿ ಸಮಾಜ ದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು. ಇಂತಹ ಅಪಪ್ರಚಾರಗಳನ್ನು ಹತ್ತಿಕ್ಕಲೂ ಪಕ್ಷದ ಕಾರ್ಯಕರ್ತರು ತಳಮಟ್ಟದಿಂದ ಸಂಘಟಿತರಾಗಿ ಜನರಲ್ಲಿ ಪೌರತ್ವದ ಬಗ್ಗೆ ಅರಿವು ಮೂಡಿಸುವ ಜತೆಗೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜಾಗೃತಿ ಆಂದೋ ಲನ ನಡೆಸಲು ಸಜ್ಜಾಗುವಂತೆ ಕರೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕ ನಂಜುಂಡಸ್ವಾಮಿ, ಚಾಮರಾಜ ನಗರ ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಮಣ್ಯ, ಪುರಸಭೆ ಸದಸ್ಯರಾದ ರವಿ, ಕೃಷ್ಣ, ತಾಲೂಕು ಬಿಜೆಪಿ ಮುಖಂಡರಾದ ಅಶೋಕ್, ಕುಮಾರ್, ಬಸವರಾಜು, ಪ್ರಸಾದ್, ಶಿವಲಿಂಗೇಗೌಡ, ಕೆ.ಸಿ.ನಾಗೇಗೌಡ, ಅಪ್ಪಾಜಿಗೌಡ, ಶಿವಣ್ಣ ಇತರರಿದ್ದರು.