ಹೊಸಕೋಟೆಯಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ
ಮಂಡ್ಯ

ಹೊಸಕೋಟೆಯಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

January 6, 2020

ಕ್ರೀಡೆಯಿಂದ ಮಾನಸಿಕ, ದೈಹಿಕ ಸದೃಢತೆ: ಸಿಎಸ್‍ಪಿ
ಪಾಂಡವಪುರ, ಜ.5- ಯುವ ಸಮು ದಾಯ ನಿರಂತರವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯ ಹೆಚ್ಚಿಸಿ ಕೊಳ್ಳಬೇಕು ಎಂದು ಶಾಸಕ ಸಿ.ಎಸ್. ಪುಟ್ಟರಾಜು ಸಲಹೆ ನೀಡಿದರು.

ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಹೊಸಕೋಟೆ ಯುವಕರ ಬಳಗದ ವತಿ ಯಿಂದ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

2004ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಸಂದರ್ಭ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ದಲ್ಲಿ ಶಾಸಕರಿಗಾಗಿ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ವಾಲಿಬಾಲ್ ಹಾಗೂ ಕಬ್ಬಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗಳಿಸಿದ್ದೆ. ಅಲ್ಲದೇ ನಾನು ಶಾಸಕನಾದ ಬಳಿಕ ಕ್ರೀಡೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ನನ್ನ ಅಣ್ಣ ಹಾಗೂ ತಂದೆ ಹೆಸರಿನಲ್ಲಿ ಚಿನ ಕುರಳಿಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜಿಸಿದೆ. ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಪೈಕಾ ಕ್ರೀಡಾಕೂಟ ಸೇರಿ ದಂತೆ ಹಲವು ರಾಜ್ಯ, ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಿ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ನೀಡಿದ್ದೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಶಿಕ್ಷಣದಷ್ಟೇ ಕ್ರೀಡೆಗೂ ಆದ್ಯತೆ ನೀಡುವ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡು ತ್ತಿವೆ. ಹೀಗಾಗಿ ಯುವಕರು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ವಾಲಿಬಾಲ್ ಪಂದ್ಯಾವಳಿಗಾಗಿ ದೂರದ ಊರುಗಳಿಂದ ಆಗಮಿಸಿರುವ ಕ್ರೀಡಾಪಟು ಗಳಿಗೆ ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸಬೇಕು ಎಂದರು.

ದಸಂಸ ಮುಖಂಡ ಡಾ.ಎಂ.ಬಿ.ಶ್ರೀನಿ ವಾಸ್ ಮಾತನಾಡಿ, ಮಾನವ ಕ್ರಿಯಾ ಶೀಲತೆಯಿಂದ ಇರಲು ನಿರಂತರವಾಗಿ ಕ್ರೀಡೆ, ವ್ಯಾಯಾಮದಲ್ಲಿ ತೊಡಗಿಸಿಕೊಳ್ಳ ಬೇಕು ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಕ್ರೀಡಾಭಿಮಾನಿ ಗಳು, ಕ್ರೀಡೆಗೆ ಉತ್ತೇಜನ ನೀಡುವ ಸಲು ವಾಗಿ ರಾಷ್ಟ್ರ, ರಾಜ್ಯ ಮಟ್ಟದ ಕ್ರೀಡಾಕೂಟ ಗಳನ್ನು ನಡೆಸಿದ್ದಾರೆ. ಉತ್ತಮ, ಆದರ್ಶ ಜನನಾಯಕರು ರಾಜಕೀಯ ಕ್ಷೇತ್ರದಲ್ಲೂ ಸಹ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಶಿಕ್ಷಣ, ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಮನ್‍ಮುಲ್ ನಿರ್ದೇಶಕ ರಾಮ ಚಂದ್ರು ಮಾತನಾಡಿ, ಗ್ರಾಮೀಣ ಯುವ ಕರು ಕ್ರೀಡೆಗೆ ಹೆಚ್ಚು ಆದ್ಯತೆ ನೀಡುವ ಕೆಲಸ ಮಾಡಬೇಕು, ಯುವಕರು ಕ್ರೀಡಾ ಕೂಟದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾ ವಳಿಯಲ್ಲಿ ಎಸ್‍ಎಂಆರ್ ಮೈಸೂರು (ಪ್ರಥಮ), ಹೊಸಕೋಟೆ-ಬಿ(ದ್ವಿತೀಯ), ಹೊಸಕೋಟೆ-ಸಿ(ತೃತೀಯ) ಹಾಗೂ ನೇತಾಜಿ ಯುವಕರ ಬಳಗ(ಚತುರ್ಥ) ಬಹುಮಾನ ಪಡೆದುಕೊಂಡರು.

ಈ ವೇಳೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ(ಪುಟ್ಟಣ್ಣ), ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಮಾಜಿ ಅಧ್ಯಕ್ಷ ಎಚ್.ಎನ್.ಚನ್ನೇಗೌಡ, ಸದಸ್ಯ ಲತಾ, ಜವರೇಗೌಡ, ಸ್ವಾಮಿ, ಎಚ್.ಪಿ.ಜವರಯ್ಯ, ರೈತ ಸಂಘದ ಮುಖಂಡ ವಿಜಿಕುಮಾರ್, ಇಂಜಿನಿಯರ್ ನಾಗೇಶ್, ಗೋವಿಂದ ರಾಜು ಸೇರಿದಂತೆ ಹಲವರಿದ್ದರು.

Translate »