ತಂತ್ರಜ್ಞಾನಕ್ಕೆ ಪೂರಕ ವಾತಾವರಣ ನಿರ್ಮಾಣ ಕಾರ್ಯ ವಿವಿಗಳಿಂದ ಆಗುತ್ತಿಲ್ಲ
ಮೈಸೂರು

ತಂತ್ರಜ್ಞಾನಕ್ಕೆ ಪೂರಕ ವಾತಾವರಣ ನಿರ್ಮಾಣ ಕಾರ್ಯ ವಿವಿಗಳಿಂದ ಆಗುತ್ತಿಲ್ಲ

January 6, 2020

ಮೈಸೂರು,ಜ.5(ಎಸ್‍ಪಿಎನ್)-ದೇಶ ದಲ್ಲಿ ತಂತ್ರಜ್ಞಾನ ಕ್ಷಣಕ್ಷಣಕ್ಕೂ ಬದಲಾ ಗುತ್ತಿರುತ್ತದೆ. ಅದಕ್ಕೆ ಪೂರಕವಾದ ವಾತಾ ವರಣ ನಿರ್ಮಿಸುವಲ್ಲಿ ವಿವಿಗಳಿಂದ ಆಗುತ್ತಿಲ್ಲ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಮಾಧ ವನ್ ನಾಯರ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ಹೊರವಲಯದ ಆರ್.ಟಿ. ನಗರದ ಸಿ.ವೈ.ಶಿವೇಗೌಡ ಒಡೆತನದ ಯುಎಸ್‍ಎ ಫಾರಂನಲ್ಲಿ ಅಂಬಾವಿಲಾಸ ಅರಮನೆ ಮಾದರಿಯ ಬೃಹತ್ ವೇದಿಕೆ ಯಲ್ಲಿ ಆಯೋಜಿಸಿರುವ 3 ದಿನಗಳ ರೋಟರಿ ಜಿಲ್ಲೆ 3181ರ `4ನೇ ಜಿಲ್ಲಾ ಸಮಾವೇಶ’ ಮತ್ತು `ಭಾರತದಲ್ಲಿ ರೋಟರಿ ಶತಮಾನೋತ್ಸವ ದಿನಾಚರಣೆÉ’ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ತಂತ್ರಜ್ಞಾನ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಅದಕ್ಕೆ ಅನುಗುಣ ವಾಗಿ ನಿರಂತರವಾಗಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಬೇಕು. ಇದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ವಿವಿಗಳ ಪ್ರಾಥಮಿಕ ಜವಾ ಬ್ದಾರಿ. ಈ ಕೆಲಸ ವಿಶ್ವವಿದ್ಯಾನಿಲಯಗಳಲ್ಲಿ ಆಗುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದ ಅವರು, ದೇಶದಲ್ಲಿ 350ಕ್ಕೂ ಹೆಚ್ಚು ವಿವಿಗಳಿವೆ. ಆದರೆ, ಅಲ್ಲಿ ಬೋಧಿಸುತ್ತಿ ರುವ ಪಠ್ಯಗಳು ಇಂದಿನ ತಂತ್ರಜ್ಞಾನದ ವೇಗಕ್ಕೆ ಹೊಂದಿಕೆಯಾಗುವಂತಿರಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಅಭಿವೃದ್ಧಿಶೀಲ ರಾಷ್ಟ್ರಗಳು ಬಾಹ್ಯಾಕಾಶ ಸಂಶೋಧನೆಯಲ್ಲಿ ಹಲವು ವರ್ಷಗಳಿಂದ ತೊಡಗಿವೆ. ಇದರಲ್ಲಿ ಭಾರತ 20 ವರ್ಷಗಳ ಬಳಿಕ ಬಾಹ್ಯಾಕಾಶ ಸಂಶೋಧನೆ ಆರಂಭಿಸಿತು. ಆದರೂ ನಾವು ಆ ಎಲ್ಲಾ ದೇಶ ಗಳಿಗೂ ಸಮನಾಗಿ ನಿಂತಿ ದ್ದೇವೆ. ಕೆಲವೊಮ್ಮೆ ಬೇರೆ ದೇಶ ದವರು ನಮ್ಮಿಂದ ನೆರವು ಪಡೆಯು ತ್ತಾರೆಯೇ ಹೊರತು ನಾವು ಎಲ್ಲಾ ಕೆಲಸ ವನ್ನು ನಮ್ಮವರಿಂದಲೇ ಮಾಡಿಸುತ್ತೇವೆ. ಸ್ಯಾಟಲೈಟ್‍ಗಳಲ್ಲಿ ಬಳಸುವ ಪ್ರತಿ ಯೊಂದು ವಸ್ತುವೂ ಅಪ್ಪಟ ದೇಶಿಯದ್ದು ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.

ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ನಮ್ಮಲ್ಲಿ ಉತ್ತರ ಕಂಡುಕೊಂಡಾಗ ಮಾತ್ರವೇ ಜೀವನ ಸಾರ್ಥಕವಾಗುತ್ತದೆ. ಯಾವುದೇ ಕಾರಣಕ್ಕೂ ನಾನು ಎಂಬ ಅಹಂ ಇರಬಾರದು ಎಂದು ಯುವಕರಿಗೆ ಸಲಹೆ ನೀಡಿದರು.

ಪ್ರಪಂಚದಲ್ಲಿ ಇಂದು ಎಷ್ಟೋ ಮಂದಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಬಸವಣ್ಣ ಹೇಳಿದಂತೆ ಅಂತರಂಗ ಮತ್ತು ಬಹಿರಂಗ ಶುದ್ಧಿ ಜನರಿಗೆ ಬಹಳ ಮುಖ್ಯವಾಗಿದೆ. ಕೆಲವರು ಶಾಂತಿ, ಸೌಹಾರ್ದತೆ ಕದಡುವ ಕೆಲಸ ಮಾಡುತ್ತಿದ್ದಾರೆ. ನಿಯಮಗಳಿಗಿಂತ ಮೌಲ್ಯಗಳು ಮುಖ್ಯ. ನಾವು ಎಂದಿಗೂ ಮೌಲ್ಯ ಮರೆತು ಜೀವಿಸಬಾರದು ಎಂದು ಸಲಹೆ ನೀಡಿದರು.
ರೋಟರಿ ಅಂತಾರಾಷ್ಟ್ರೀಯ ಗವರ್ನರ್ ಶೇಖರ್ ಮೆಹ್ತಾ, ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ, ಸಮ್ಮೇಳನ ಸಮಿತಿಯ ಅಧ್ಯಕ್ಷ ಸ್ಯಾಮ್ ಚೆರಿಯನ್, ರವೀಂದ್ರ ಭಟ್, ಪಿ.ಡಿ.ಜಿ. ಜಿ.ಕೆ.ಬಾಲ ಕೃಷ್ಣ, ಎ.ಆರ್.ರವೀಂದ್ರ ಭಟ್, ಎಂ.ರಂಗ ನಾಥ್ ಭಟ್ ಇತರರು ಇದ್ದರು.

Translate »