ಮೂವರು ಸಾಧಕರು, ಎರಡು ಸಂಸ್ಥೆಗಳಿಗೆ ರಮಾಗೋವಿಂದ ಪುರಸ್ಕಾರ
ಮೈಸೂರು

ಮೂವರು ಸಾಧಕರು, ಎರಡು ಸಂಸ್ಥೆಗಳಿಗೆ ರಮಾಗೋವಿಂದ ಪುರಸ್ಕಾರ

January 6, 2020

ಮೈಸೂರು,ಜ.5(ವೈಡಿಎಸ್)- ಕಲಾ ಮಂದಿರದಲ್ಲಿ ಭಾನುವಾರ ಸಂಜೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಸಾಧ ಕರು ಹಾಗೂ ಎರಡು ಸಂಸ್ಥೆಗಳಿಗೆ ರಮಾ ಗೋವಿಂದ ಪುರಸ್ಕಾರ-2020 ನೀಡಿ, ಗೌರವಿಸಲಾಯಿತು.

ಶ್ರೀಮತಿ ಡಿ.ರಮಾಬಾಯಿ ಚಾರಿಟಬಲ್ ಫೌಂಡೇಷನ್ ಮತ್ತು ಶ್ರೀ ಎಂ.ಗೋಪಿ ನಾಥ ಶೆಣೈ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದೆಹಲಿಯ ಓಂಕಾರ್ ನಾಥ್‍ಶರ್ಮ (ಮೆಡಿಸಿನ್ ಬಾಬ), ಡಾ.ಕೆ.ಆರ್. ಕಾಮತ್, ಸಿ.ಆರ್.ಹಿಮಾಂಷು ಈ ಮೂವರು ಸಾಧಕರಿಗೆ ರಮಾಗೋವಿಂದ ಪುರಸ್ಕಾರ ದೊಂದಿಗೆ ತಲಾ 3 ಲಕ್ಷ ರೂ.ಚೆಕ್ ಹಾಗೂ ಹೊಳೆ ಆಲೂರು ಶಿವಾನಂದ ಕೇಲೂರ ಅವರ ಜ್ಞಾನಸಿಂಧು, ವಸತಿ ಶಾಲೆ ಮತ್ತು ಕೆರೆಮನೆ ಶಿವಾನಂದ ಹೆಗಡೆ ಅವರ ಇಡ ಗುಂಜಿ ಯಕ್ಷಗಾನ ಮೇಳ ಸಾಧಕ ಸಂಸ್ಥೆ ಗಳಿಗೆ ರಮಾಗೋವಿಂದ ಪುರಸ್ಕಾರ ದೊಂದಿಗೆ ತಲಾ 5 ಲಕ್ಷ ರೂ. ಚೆಕ್ ನೀಡಿ, ಸನ್ಮಾನಿಸಲಾಯಿತು.

ಸಂಗೀತ ಕಲಾವಿದ ವಿದ್ಯಾಭೂಷಣ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಹುಟ್ಟು, ಬದುಕಿನ ಮಧ್ಯೆ ನಮ್ಮ ಸ್ಥಿತಿ ಏನು, ನಾವು ಏನು ಮಾಡಬೇಕು ಎಂಬು ದನ್ನು ಅರಿತು ನಡೆಯಬೇಕು. ಹೇಗೆ ಇರಬೇಕು, ಹೇಗೆ ಇರಬಾರದು ಎಂಬುದು ಬಹಳ ಮುಖ್ಯ. ಇಂದು ಯಾರಿಗೂ ಗೊತ್ತಾಗ ದಂತೆ ಸಮಾಜಕ್ಕೆ ಅದ್ಭುತ ಸೇವೆ ಮಾಡುತ್ತಿ ರುವವರನ್ನು ಗುರುತಿಸಿ, ಸನ್ಮಾನಿಸುತ್ತಿರು ವುದು ಸಂತೋಷ ತಂದಿದೆ ಎಂದರು.

ಪ್ರಶಸ್ತಿಗಾಗಿ ಅರ್ಜಿ ಹಾಕದೇ, ರಾಜಕಾ ರಣಿಗಳ ಪ್ರಭಾವವಿಲ್ಲದೆ ಪಡೆದಿರುವ ಈ ಪ್ರಶಸ್ತಿಯು ನಿಜಕ್ಕೂ ಸಾರ್ಥಕ. ತಾವು ಮಾಡಿದ ಸಾರ್ಥಕ್ಯ ಕೆಲಸದ ಸುಗಂಧವು ಎಲ್ಲೆಡೆ ಹರಡಿ ತನ್ನ ಇರುವಿಕೆಯನ್ನು ತಿಳಿಸುತ್ತದೆ. ಅದರಂತೆ ಎಲೆಮರೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ, ಸನ್ಮಾನಿಸಲಾಗಿದೆ ಎಂದರು.

ಕಲಿಯುಗದಲ್ಲಿ ಗಾನ ಮತ್ತು ದಾನ ದಿಂದ ಭಗವಂತನನ್ನು ಒಲಿಸಿಕೊಳ್ಳಬೇಕು. ಗಾನ ಎಂದರೆ ಭಗವಂತನ ಕುರಿತ ಗುಣ ಗಾನ ಆಗಬೇಕು. ದಾನವು ಹಸಿವು ಇರುವ ವರಿಗೆ, ಯೋಗ್ಯರಿಗೆ ಜ್ಞಾನಪೂರ್ವಕವಾಗಿ ನೀಡಬೇಕು. ಅದು ಜಗತ್ತಿನ ಹಿತಕ್ಕೆ ಬಳಕೆಯಾಗಬೇಕು ಎಂದು ಹೇಳಿದರು.

ಹಿಂದೆ ರಾಜರು ಸಾಧಕರನ್ನು ಗುರು ತಿಸಿ ಗೌರವಿಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರಾಗಿರುವುದರಿಂದ ಸತ್ಪ್ರಜೆ ಗಳು ಸಾಧಕ ಪ್ರಜೆಗಳನ್ನು ಗುರುತಿಸಿ ಬೆನ್ನು ತಟ್ಟುವ ಕಾರ್ಯಮಾಡಬೇಕಿದೆ. ಆ ಕೆಲಸವನ್ನು ಸತ್ಪ್ರಜೆಗಳಾದ ಶೆಣೈ ಕುಟುಂಬದವರು ಮಾಡು ತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಸ್ಟಿ ಎಂ.ಜಗನ್ನಾಥ್ ಶೆಣೈ ಮಾತ ನಾಡಿ, ಸಮಾಜದ ಒಳಿತಿಗಾಗಿ ಪ್ರಾಮಾ ಣಿಕವಾಗಿ ಸೇವೆ ಸಲ್ಲಿಸುವವರನ್ನು ಗುರು ತಿಸಿ ಕಳೆದ 5 ವರ್ಷಗಳಿಂದ ರಮಾ ಗೋವಿಂದ ಪುರಸ್ಕಾರ ನೀಡಿ ಗೌರವಿಸ ಲಾಗುತ್ತಿದೆ. ಇವರುಗಳು ಇನ್ನೂ ಅನೇಕ ಯುವ ಸಾಧಕರಿಗೆ ಪ್ರೇರಣೆಯಾಗಲಿ ದ್ದಾರೆ. ಮೂವರು ಸಾಧಕರಿಗೆ ಪುರಸ್ಕಾರ ದೊಂದಿಗೆ ತಲಾ 3 ಲಕ್ಷ ರೂ. ಹಾಗೂ ಹೊಳೆ ಆಲೂರು ಶಿವಾನಂದ ಕೇಲೂರ ಅವರ ಜ್ಞಾನ ಸಿಂಧು ವಸತಿ ಶಾಲೆ ಮತ್ತು ಕೆರೆಮನೆ ಶಿವಾ ನಂದ ಹೆಗಡೆ ಅವರ ಇಡಗುಂಜಿ ಯಕ್ಷಗಾನ ಮೇಳ ಸಾಧಕ ಸಂಸ್ಥೆ ಗಳಿಗೆ ರಮಾಗೋವಿಂದ ಪುರಸ್ಕಾರ ದೊಂದಿಗೆ 5 ಲಕ್ಷ ರೂ. ಚೆಕ್ ನೀಡಲಾಗುತ್ತಿದೆ ಎಂದು ಹೇಳಿದರು.

ಶ್ರೀಮತಿ ಡಿ.ರಮಾಬಾಯಿ ಚಾರಿಟಬಲ್ ಫೌಂಡೇಷನ್ ಮತ್ತು ಶ್ರೀ ಎಂ.ಗೋಪಿ ನಾಥ ಶೆಣೈ ಚಾರಿಟಬಲ್ ಟ್ರಸ್ಟ್‍ನ ಎಂ.ರಾಮನಾಥಶೆಣೈ, ಎಂ.ಜಗ ನ್ನಾಥ ಶೆಣೈ, ಎಂ.ಗೋಪಿನಾಥಶೆಣೈ ಕುಟುಂಬದವರು ಉಪಸ್ಥಿತರಿದ್ದರು.

ಅಂಧಮಕ್ಕಳ ಮೈನವಿರೇಳಿಸುವ ಪ್ರದ ರ್ಶನ: ಹೊಳೆ ಆಲೂರಿನ ಜ್ಞಾನಸಿಂಧು, ಅಂಧಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿ ಗಳು ಕಣ್ಣು ಕಾಣಿಸುವವರಿಗೇನೂ ಕಡಿಮೆ ಇಲ್ಲವೆಂಬಂತೆ ಮಲ್ಲಕಂಬ, ಯೋಗಾಸನ, ಹಗ್ಗ ಬಳಸಿ ಮೈನವಿರೇಳಿಸುವ ಸಾಹಸ ಪ್ರದರ್ಶಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಇಟ್ಟಿಸಿದರು.

Translate »