ಪ್ರಥಮ್ ಮೈಸೂರು ಆಶ್ರಯದ ಗ್ರಾಮೀಣ ಶಾಲೆಗಳ ಶೈಕ್ಷಣಿಕ ಮೇಳ
ಮೈಸೂರು

ಪ್ರಥಮ್ ಮೈಸೂರು ಆಶ್ರಯದ ಗ್ರಾಮೀಣ ಶಾಲೆಗಳ ಶೈಕ್ಷಣಿಕ ಮೇಳ

January 12, 2020

ಮೈಸೂರು, ಜ.11(ಎಸ್‍ಪಿಎನ್)-ತಿ.ನರಸೀಪುರ ತಾಲೂಕಿನ ಮುತ್ತತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಆಯೋಜಿಸಿದ್ದ ಹತ್ತು ಹಲವು ಶೈಕ್ಷಣಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು

ಪ್ರಥಮ್ ಮೈಸೂರು ಶನಿವಾರ ಆಯೋ ಜಿಸಿದ್ದ ಶೈಕ್ಷಣಿಕ ಮಾದರಿ ಗ್ರಾಮಗಳ 2ನೇ ವಾರ್ಷಿಕೋತ್ಸವ ಹಾಗೂ ಶೈಕ್ಷಣಿಕ ಮೇಳ ದಲ್ಲಿ ಮುತ್ತತ್ತಿ ಶಾಲೆಯ ಮಕ್ಕಳು ಗಣಿತ ಮೇಳ, ಮಾವಿನಹಳ್ಳಿ ಶಾಲೆ ಮಕ್ಕಳು ವಿಜ್ಞಾನ, ಯಾತನೂರು ಶಾಲೆ ಮಕ್ಕಳು ಕನ್ನಡ ಭಾಷಾ, ಸುಜ್ಜಲ್ಲೂರು ಶಾಲೆ ಮಕ್ಕಳು ಇಂಗ್ಲಿಷ್ ಮೇಳವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಜತೆಗೆ ಕಲಿಕಾ ತಾಣ ಮೇಳದಲ್ಲಿ ಕಂಪ್ಯೂ ಟರ್ ಕಲಿಕೆ, ಪದಬಂಧ ಕಲಿಕಾ ವಿಧಾನ, ಡಿಜಿಟಲ್ ಶಿಕ್ಷಣ ಮತ್ತಿತರೆ ಮಾದರಿ ಪ್ರದರ್ಶನಗಳು ಎಲ್ಲರ ಗಮನ ಸೆಳೆದವು.

ಇದೇ ಸಂದರ್ಭದಲ್ಲಿ ನಡೆದ ಸಂವಾದ ದಲ್ಲಿ `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ರಾದ ಕೆ.ಬಿ.ಗಣಪತಿ ಮಾತನಾಡಿ, ಶೈಕ್ಷಣಿಕ ವಾಗಿ ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಮಾದರಿ ಶೈಕ್ಷಣಿಕ ಗ್ರಾಮಗಳನ್ನಾಗಿ ಪರಿವರ್ತಿಸುವ ಕಾರ್ಯಗಳು ಮತ್ತಷ್ಟು ಹೆಚ್ಚಾಗಬೇಕು ಎಂದು ಆಶಿಸಿದರು.

ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕಾಪಾಡಲು ಸರ್ಕಾರ ಹಲವು ಕಾರ್ಯ ಕ್ರಮಗಳನ್ನು ರೂಪಿಸಿದ್ದು, ಇದು ಯಶಸ್ವಿ ಯಾಗಬೇಕಾದರೆ ಶಿಕ್ಷಕರು, ಗ್ರಾಮಸ್ಥರು, ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವ ಅವಶ್ಯ ಎಂದರು. ಈ ಮೇಳದಲ್ಲಿ ಭಾಗವ ಹಿಸಿರುವ ನಾಲ್ಕು ಶಾಲೆಗಳ ಮಕ್ಕಳು ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಹಿಡಿತ ಸಾಧಿಸಿದ್ದಾರೆ. ಇದೇ ರೀತಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಗುಣಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಿಸಲು ಪ್ರಯತ್ನಿಸ ಬೇಕು ಎಂದು ಸಲಹೆ ನೀಡಿದರಲ್ಲದೆ, ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನ ಹಿಂದೆ ಶಿಕ್ಷಕರು ಹಾಗೂ ಪ್ರಥಮ್ ಮೈಸೂರು ಸಂಸ್ಥೆಯ ಪರಿಶ್ರಮವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Pratham Mysore Rural Schools Educational Fair held -1

ಪ್ರಥಮ್ ಮೈಸೂರು ಸಂಸ್ಥೆಯಿಂದ ಯಾತನೂರು, ಮುತ್ತತ್ತಿ, ಸುಜ್ಜಲೂರು, ಮಾವಿನಹಳ್ಳಿ ಗ್ರಾಮಗಳನ್ನು ಶೈಕ್ಷಣಿಕ ಮಾದರಿ ಗ್ರಾಮಗಳಾಗಿ ದತ್ತು ಸ್ವೀಕರಿಸಿ, ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂ ಡಿರುವುದು ಸ್ವಾಗತಾರ್ಹ. ಗ್ರಾಮಸ್ಥರೊಂ ದಿಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಕಾಲಕಾಲಕ್ಕೆ ಸಭೆಗಳನ್ನು ಆಯೋ ಜಿಸಿ ಕಳೆದೆರಡು ವರ್ಷಗಳಿಂದ ಮಾಹಿತಿ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮುತ್ತತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಾಜೇಂದ್ರ, ಯಾತನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಗೋವಿಂದರಾಜು, ಮಾವಿನಹಳ್ಳಿ ಶಾಲೆಯ ಮುಖ್ಯಶಿಕ್ಷಕ ಕುಮಾರಸ್ವಾಮಿ, ಸುಜ್ಜಲ್ಲೂರು ಶಾಲೆಯ ಮುಖ್ಯಶಿಕ್ಷಕಿ ಆಶಾ ಅವರನ್ನು ಸನ್ಮಾನಿಸಲಾಯಿತು. ಪ್ರಥಮ್ ಮೈಸೂರು ಮ್ಯಾನೇಜಿಂಗ್ ಟ್ರಸ್ಟಿ ಅಶ್ವಿನಿ ರಂಜನ್ ಅವರು ತಮ್ಮ ಸಂಸ್ಥೆಯ ಧೈಯೋ ದ್ದೇಶಗಳ ಕುರಿತು ಮಾತನಾಡಿದರು.

ಈ ವೇಳೆ ಪ್ರಥಮ್ ಮೈಸೂರು ವತಿ ಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಉತ್ತಮ `ಎಸ್‍ಡಿಎಂಸಿ ಪ್ರಶಸ್ತಿ ಸುಜ್ಜಲೂರು ಶಾಲೆಗೆ, `ಉತ್ತಮ ಶೈಕ್ಷಣಿಕ ಮಾದರಿ ಗ್ರಾಮ’ ಯಾತನೂರು ಶಾಲೆಗೆ, `ಉತ್ತಮ ಕ್ರೀಡಾ ಗ್ರಾಮ’ ಮುತ್ತತ್ತಿ ಶಾಲೆಗೆ ಬಹುಮಾನ ನೀಡಿ, ಅಭಿನಂದಿಸಲಾಯಿತು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ಭಾಗ ವಹಿಸಿದ್ದ ಮಕ್ಕಳು ಮತ್ತು ಪೋಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಥಮ್ ಮೈಸೂರು ಸಂಸ್ಥೆಯ ಟ್ರಸ್ಟಿಗಳಾದ ಶಶಿ ರಂಜನ್, ಡಾ.ಟಿ.ಪದ್ಮಿನಿ, ನಿರ್ಮಲ ಪ್ರಕಾಶ್, ಅಶೋಕ್ ರಾವ್, ಸಿಇಓ ಶೇಷಾದ್ರಿ, ಸಲಹೆ ಗಾರ ಭಾಮಿ ವಿ.ಶೆಣೈ, ಕಾರ್ಯಕ್ರಮ ಸಂಯೋಜಕರಾದ ಜಗದೀಶ್ ಇತರರು ಉಪಸ್ಥಿತರಿದ್ದರು. ನಂತರ ಈ ನಾಲ್ಕು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

Translate »