ಕಳೆದ 6 ವರ್ಷದಲ್ಲಿ ಮುಸ್ಲಿಮರು ಸೇರಿ 2338 ನಿರಾಶ್ರಿತರಿಗೆ ಭಾರತೀಯ ಪೌರತ್ವ
ಮೈಸೂರು

ಕಳೆದ 6 ವರ್ಷದಲ್ಲಿ ಮುಸ್ಲಿಮರು ಸೇರಿ 2338 ನಿರಾಶ್ರಿತರಿಗೆ ಭಾರತೀಯ ಪೌರತ್ವ

January 20, 2020

ಚೆನ್ನೈ, ಜ. 19- ಸಿಎಎ-2019ರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮುಂದು ವರೆದಿದೆ. ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತ ನಾಡಿದ್ದು, ಪಾಕಿಸ್ತಾನದಿಂದ ಬಂದಿ ರುವ 2838 ಜನರಿಗೆ ಕಳೆದ 6 ವರ್ಷ ಗಳಲ್ಲಿ ಭಾರತೀಯ ಪೌರತ್ವ ನೀಡ ಲಾಗಿದೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಿಂದ ಬಂದಿದ್ದ 914 ಜನರಿಗೆ, ಬಾಂಗ್ಲಾದಿಂದ ಶರಣಾಗತಿ ಬಯಸಿ ಬಂದ 172 ಜನರು (ಮುಸ್ಲಿ ಮರೂ ಸೇರಿದಂತೆ) ಒಟ್ಟಾರೆ 2838 ಜನರಿಗೆ ಕಳೆದ

6 ವರ್ಷಗಳಲ್ಲಿ ಭಾರತೀಯ ಪೌರತ್ವ ನೀಡಲಾಗಿದೆ. 1964ರಿಂದ 2008ವರೆಗೆ ಶ್ರೀಲಂಕಾ ದಿಂದ ಬಂದಿರುವ 4,00,000 ತಮಿಳರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಚೆನ್ನೈನಲ್ಲಿ ಸೀತಾರಾಮನ್ ಮಾಹಿತಿ ನೀಡಿದ್ದಾರೆ. 2014ವರೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಿಂದ ಬಂದಿದ್ದ 566 ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಲಾಗಿತ್ತು. 2016-18ರ ಮೋದಿ ಸರ್ಕಾರದ ನೇತೃತ್ವದಲ್ಲಿ 1595 ಪಾಕಿಸ್ತಾನಿ ವಲಸಿಗರು, 391 ಅಫ್ಘಾನಿಸ್ತಾನ ಮುಸ್ಲಿಮರಿಗೆ ಪೌರತ್ವ ನೀಡಲಾಗಿದೆ. ಇದೇ ವೇಳೆಯಲ್ಲಿ ಅದ್ನಾನ್ ಸಮಿ, ತಲ್ಸಿಮಾ ನಸ್ರಿನ್ ಅವರಿಗೂ ಪೌರತ್ವ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Translate »