ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬೃಹತ್ ಆಲದ ಮರ
ಮೈಸೂರು

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬೃಹತ್ ಆಲದ ಮರ

March 17, 2020

ಮೈಸೂರು, ಮಾ.16(ಎಂಕೆ)- ಆಕಸ್ಮಿಕ ಬೆಂಕಿ ತಗುಲಿ ಖಾಲಿ ನಿವೇಶನದಲ್ಲಿದ್ದ ಬೃಹತ್ ಆಲದಮರ ಹೊತ್ತಿ ಉರಿಯಿತು. ಸೋಮ ವಾರ ಸಂಜೆ ನಗರದ ಸಯ್ಯಾಜಿರಾವ್ ರಸ್ತೆಯ ಲ್ಲಿರುವ ಹೋಟೆಲ್ ವೈಟ್ ಪ್ಯಾರೆಟ್ ಮತ್ತು ರಾಯಲ್ ಎನ್ಫೀಲ್ಡ್ ಶೋ ರೂಂ ಮಧ್ಯದಲ್ಲಿ ರುವ ಖಾಲಿ ನಿವೇಶನದಲ್ಲಿದ್ದ ಬೃಹತ್ ಆಲದಮರದ ಬೇರು ಗಳು ಹಾಗೂ ಕಸದ ರಾಶಿಗೆ ಬೆಂಕಿ ತಗುಲಿ ಕೆಲಕಾಲ ಹೊತ್ತಿ ಉರಿದು ಆತಂಕ ಸೃಷ್ಟಿಸಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನಿಮಂಟಪದ ಅಗ್ನಿಶಾಮಕ ಠಾಣಾಧಿಕಾರಿ ಎಂ.ಶಿವಸ್ವಾಮಿ ನೇತೃತ್ವದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ತಪ್ಪಿದ ಭಾರೀ ಅನಾಹುತ: ಖಾಲಿ ನಿವೇಶನದ ಅಕ್ಕ-ಪಕ್ಕದಲ್ಲಿ ಹೋಟೆಲ್‍ಗಳು, ದ್ವಿಚಕ್ರ ವಾಹನದ ಶೋ ರೂಂ ಮತ್ತು ಇನ್ನಿತರೆ ಹಲವಾರು ಮನೆಗಳಿದ್ದು, ಹೊತ್ತಿಕೊಂಡ ಬೆಂಕಿ ಯನ್ನು ಕೂಡಲೇ ನಂದಿಸಿದ್ದರಿಂದ ಉಂಟಾಗುತ್ತಿದ್ದ ಭಾರೀ ಅನಾಹುತ ತಪ್ಪಿದಂತಾಯಿತು.

Translate »