ಮೈಸೂರು,ಡಿ.25(ಆರ್‍ಕೆಬಿ)-ಕಂಠ ಪೂರ್ತಿ ಕುಡಿದು, ಮತ್ತಿನಲ್ಲಿ ಕಸ ತುಂಬುವ ಕಂಟೈನರ್‍ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ನಗರ ಪಾಲಿಕೆಯ ಕಸ ತುಂಬುವ ಲಾರಿಯಲ್ಲಿ ಕಸ ಸುರಿದಾಗ ಕಂಡು ಬಂದ ವಿಚಿತ್ರ ಘಟನೆಯಿದು.
ಮೈಸೂರಿನ ಆರ್‍ಎಂಸಿ ಮಾರು ಕಟ್ಟೆಯ ಹಿಂಭಾಗದಲ್ಲಿ ಕಸ ತುಂಬುವ ದೊಡ್ಡ ಗಾತ್ರದ ಕಂಟೇನರ್ ಇಡಲಾ ಗಿದ್ದು, ಸುತ್ತಮುತ್ತಲಿನ ಬಡಾವಣೆಯ ಜನರು ನೀಡುವ ಕಸವನ್ನು ಇಲ್ಲಿ ಹಾಕ ಲಾಗುತ್ತದೆ. ಬುಧವಾರ ಬೆಳಿಗ್ಗೆ ತುಂಬಿದ ಕಸದ ಕಂಟೈನರ್ ತೆಗೆದುಕೊಂಡು ಹೋಗಲು ಬಂದಿದ್ದ ಮೈಸೂರು ನಗರ ಪಾಲಿಕೆಯ ಕಸ ತುಂಬುವ ಲಾರಿಯಲ್ಲಿ ಕಂಟೈನರ್ ಅನ್ನು ಲಾರಿಯಲ್ಲಿ ಹಾಕಿಕೊಳ್ಳ ಲಾಯಿತು. ಆದರೆ ಕಂಟೈನರ್‍ನ ತುದಿಯಲ್ಲಿ ಕಸದ ನಡುವೆ ವ್ಯಕ್ತಿಯೊಬ್ಬನ ಕಾಲು ಅಲುಗಾಡುತ್ತಿದ್ದುದನ್ನು ನಗರ ಪಾಲಿಕೆ ನೌಕರರು ಗಮನಿಸಿದರು. ಕೂಡಲೇ ಲಾರಿಯನ್ನು ನಿಲ್ಲಿಸಿ, ಕಂಟೈ ನರ್ ಬಾಕ್ಸ್ ಅನ್ನು ತೆರೆದು ಕಸವನ್ನು ಸುರಿದಾಗ ಅದರೊಳಗೆ ವ್ಯಕ್ತಿಯೊಬ್ಬ ಇದ್ದದ್ದು ಪತ್ತೆಯಾಯಿತು. ಈ ಬಗ್ಗೆ ಪಾಲಿಕೆ ನೌಕರರು ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಅತನನ್ನು ಆಸ್ಪತ್ರೆಗೆ ಕರೆ ದೊಯ್ದು ಪ್ರಥಮ ಚಿಕಿತ್ಸೆ ನೀಡಿ ಕಳುಹಿಸ ಲಾಯಿತು ಎಂದು ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.