ರಾಜ್ಯಾದ್ಯಂತ ಮೀನಿನ ಊಟದ ಮತ್ಸ್ಯದರ್ಶಿನಿ ಹೋಟೆಲ್
ಮೈಸೂರು

ರಾಜ್ಯಾದ್ಯಂತ ಮೀನಿನ ಊಟದ ಮತ್ಸ್ಯದರ್ಶಿನಿ ಹೋಟೆಲ್

March 1, 2020

ಬೆಂಗಳೂರು: ಪ್ರತೀ ಜಿಲ್ಲೆಗೊಂದು ಮತ್ಸ್ಯ ದರ್ಶಿನಿ ಹೋಟೆಲ್ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿ ವಾಸ ಪೂಜಾರಿ ಹೇಳಿದ್ದಾರೆ.

ಪ್ರತೀ ಜಿಲ್ಲೆಯಲ್ಲಿ ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ಮೀನುಗಾರಿಕಾ ಸಚಿವರು ಉದ್ದೇಶಿಸಿದ್ದಾರೆ. ಜಿಲ್ಲೆ ಹಾಗೂ ತಾಲೂಕಿಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಉತ್ತಮ ಮೀನಿನ ಊಟ ನೀಡುವ ಯೋಜನೆ ಇದಾಗಿದೆ. ಆ ಮೂಲಕ ಬಡವರು, ಮಧ್ಯಮ ವರ್ಗಕ್ಕೆ ಉತ್ತಮವಾದ ಮೀನಿನ ಊಟ ನೀಡುವ ಯೋಜನೆ ಯನ್ನು ಬಜೆಟ್‍ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಲಿ ದ್ದಾರೆ. ಕನಿಷ್ಠ 100 ರೂ.ಗೆ ಎಲ್ಲಾ ರೀತಿಯ ಮೀನಿನ ಊಟ ನೀಡುವ ಯೋಜನೆ ಇದಾಗಿದ್ದು, ಸಾಮಾನ್ಯ ಹೋಟೆಲ್‍ಗಿಂತ ಕಡಿಮೆ ದರದಲ್ಲಿ ಮೀನಿನ ಖಾದ್ಯ ಸಿಗಲಿದೆ ಎನ್ನಲಾಗಿದೆ. ಈ ಬಗ್ಗೆ ಸಚಿವರು ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಯೋಜನೆ, ಆರ್ಥಿಕ ಅಗತ್ಯತೆ, ಸ್ಥಳಾವಕಾಶ ಸೇರಿದಂತೆ ಯೋಜನಾ ವರದಿ ಸಿದ್ಧಪಡಿಸಿಕೊಂಡಿದ್ದಾರೆ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದ್ದು, ಪ್ರಾರಂ ಭಿಕವಾಗಿ ಜಿಲ್ಲೆಗೊಂದರಂತೆ ಹೋಟೆಲ್ ತೆರೆಯುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಬಳಿಕ ಪ್ರಸ್ತಾವನೆಯನ್ನು ತಯಾರಿಸಿ ಮೀನುಗಾರಿಕೆ ಇಲಾಖೆಯು ಆರ್ಥಿಕ ಇಲಾಖೆಗೂ ರವಾನಿಸಿದೆ. ಆರ್ಥಿಕ ಇಲಾಖೆ ಒಪ್ಪಿಗೆ ದೊರೆತ ಕೂಡಲೇ ಮತ್ಸ್ಯದರ್ಶಿನಿ ಹೋಟೆಲ್‍ಗೆ ಬಜೆಟ್‍ನಲ್ಲಿ ಘೋಷಿಸಿ, ಮುಂಬರುವ ದಿನಗಳಲ್ಲಿ ಹೊಟೇಲುಗಳು ಕಾರ್ಯಾ ರಂಭ ಮಾಡಲು ತಯಾರಿ ನಡೆಸಲಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ಆರಂಭಿ ಸಲಾಗುತ್ತಿದೆ. ಕೆಎಫ್‍ಡಿಸಿ ಮಳಿಗೆಗಳ ಮೂಲಕವೇ ಮತ್ಸ್ಯ ದರ್ಶಿನಿ ಹೋಟೆಲ್ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ಇಡೀ ರಾಜ್ಯದಲ್ಲಿ ಕೆಎಫ್‍ಡಿಸಿ ಮತ್ಸ್ಯದರ್ಶಿನಿಗಳನ್ನು ಒಂದು ಬ್ರಾಂಡ್ ಮಾಡಲು ಮೀನುಗಾರಿಕಾ ಇಲಾಖೆ ನಿರ್ಧರಿ ಸಿದೆ. ಇಲಾಖೆಯಡಿ ಬೆರಳೆಣಿಕೆಯಷ್ಟು ಮಾತ್ರ ಮತ್ಸ್ಯ ದರ್ಶಿನಿ ಹೋಟೆಲ್‍ಗಳು ನಡೆಯುತ್ತಿವೆ. ಹೊರಗಿನ ಹೋಟೆಲ್ ಗಳಲ್ಲಿ 1 ಮೀನಿನ ಊಟಕ್ಕೆ 400 ರೂ.ನಿಂದ 600 ರೂ. ಕೊಡಬೇಕು. ಕೆಲವು ವಿಶೇಷ ಮೀನುಗಳು ಸೇರಿದರೆ ಊಟದ ದರ 1000 ರೂ. ಆಗಲಿದೆ. ಹೀಗಾಗಿ ಸರ್ಕಾರ ರಿಯಾಯ್ತಿ ದರದಲ್ಲಿ ರಾಜ್ಯದ ಜನರಿಗೆ ಮೀನಿನ ಊಟ ಬಡಿಸಲು ನಿರ್ಧಾರ ಮಾಡಿದೆ. ಜೊತೆಗೆ ಮೀನುಗಾರರಿಗೆ ಆರ್ಥಿಕ ನಷ್ಟ ತಪ್ಪಿಸಿ, ನಿರಂತರ ಆದಾಯ ನೀಡುವ ಮೂಲಕ ಮೀನಿನ ಖಾದ್ಯ ಸವಿಯುವವರಿಗೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮೀನಿನ ಊಟ ದೊರೆಯುವಂತೆ ಮಾಡುವ ಪ್ರಯತ್ನಕ್ಕೆ ಮತ್ಯ್ಸಪ್ರೇಮಿಗಳು ಹೇಗೆ ಸ್ಪಂದಿ ಸುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

Translate »