ಮೈಸೂರಿನ ವಿವಿಧ ವೇದಿಕೆಗಳಲ್ಲಿ ನಾನಾ ರೀತಿಯ ಸಂಗೀತ ಸಂಭ್ರಮ
ಮೈಸೂರು, ಮೈಸೂರು ದಸರಾ

ಮೈಸೂರಿನ ವಿವಿಧ ವೇದಿಕೆಗಳಲ್ಲಿ ನಾನಾ ರೀತಿಯ ಸಂಗೀತ ಸಂಭ್ರಮ

October 13, 2018

ಮೈಸೂರು: ಮೈಸೂರು ಅರಮನೆ ವೇದಿಕೆಯಲ್ಲಿ ಬೆಂಗಳೂರಿನ ಮಂಜುಳಾ ಪರಮೇಶ್ ನೇತೃತ್ವದ ತಂಡ ಪ್ರಸ್ತುತಪಡಿಸಿದ ಸಮೂಹ ಗೀತೆಗಳ `ನೃತ್ಯ ರೂಪಕ’ ಪ್ರೇಕ್ಷಕರ ಮನಸೂರೆಗೊಂಡಿತು.

ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆ ವೇದಿಕೆ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ಆಯೋಜಿಸಿದ್ದ 3ನೇ ದಿನದ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳು ಪ್ರೇಕ್ಷಕರ ಮನ ಸೆಳೆದವು. ಅರಮನೆ ವೇದಿಕೆ ಯಲ್ಲಿ ಮೊದಲಿಗೆ ವಿನಾಯಕನ ಕುರಿತಾದ ನೃತ್ಯ, ಮಹಿಷಾ ಮರ್ಧಿನಿ ನೃತ್ಯ, ಕೆ.ಎಸ್. ನರ ಸಿಂಹಸ್ವಾಮಿ ರಚಿತ ದೀಪವು ನನ್ನದೇ, ಗಾಳಿಯು ನಿನ್ನದೇ ಹಾಡಿಗೆ ಸಂಯೋಜಿ ಸಿದ್ದ ನೃತ್ಯಕಾವ್ಯ ನೆರೆದಿದ್ದ ಕಲಾರಸಿಕರ ಮನ ಗೆದ್ದಿತು. ಇದಕ್ಕೂ ಮುನ್ನ ಕೇರಳದ `ಮೋಹಿನಿ ಅಟ್ಟಂ’ ಕಾರ್ಯ ಕ್ರಮ ಎಲ್ಲರ ಗಮನ ಸೆಳೆಯಿತಲ್ಲದೆ, ರಾಯ ಚೂರಿನ ಪಂಡಿತ್ ನರಸಿಂಹಲು ವಡವಾಟಿ ನಡೆಸಿಕೊಟ್ಟ `ಕ್ಲಾರಿಯೋನೆಟ್’ ವಾದನ ಸಭಿಕರ ಮನ ಸೆಳೆಯಿತು. ನಂತರ ಹಿರಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ `ಸಂಗೀತ ಸಂಭ್ರಮ’ ಪ್ರೇಕ್ಷಕರ ಮನತಣಿಸಿತು.

ಕಲಾಮಂದಿರ ವೇದಿಕೆಯಲ್ಲಿ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದವರಿಂದ `ಕೋಲಿ’ ನೃತ್ಯ, ನವದೆಹಲಿಯ ದಿವ್ಯ ಕೆ.ಶರ್ಮಾ ತಂಡ ದವರಿಂದ ಕಥಕ್ ನೃತ್ಯ, ಕಲ್ಬುರ್ಗಿಯ ಜಿ.ಚಂದ್ರಕಾಂತ ಅವರಿಂದ ತ್ರಿಭಾಷಾ ವಚನ ಗಾಯನ, ಕೊಳ್ಳೇಗಾಲದ ಚಿತ್ರ ಬಿಳಿಗಿರಿ ರಂಗ ಫೌಂಡೇಷನ್ ಕಲಾವಿದರಿಂದ ನೃತ್ಯ ರೂಪಕ ಪ್ರದರ್ಶನಗೊಂಡಿತು. ಕಲಾ ಮಂದಿರ ಕಿರುರಂಗ ಮಂದಿರದಲ್ಲಿ ರಂಗಜಗಲಿ ಸಂಸ್ಥೆ ಕಲಾವಿದರಿಂದ ಒಂದು ಹಳ್ಳಿಯ ಕಥೆ ಕಾರ್ಯ ಕ್ರಮ, ಮಂಗಳೂರಿನ ಹವ್ಯಾಸಿ ಕದ್ರಿ ಬಳಗದ ಕಲಾವಿದ ಶರತ್‍ಕುಮಾರ್ ಕದ್ರಿ ಅವರಿಂದ ಯಕ್ಷಗಾನ ಪ್ರದರ್ಶನಗೊಂಡಿತು.

ಭೂಮಿಗೀತಾದಲ್ಲಿ ನವರಾತ್ರಿ ರಂಗೋತ್ಸ ವದ ಅಂಗವಾಗಿ ಬೆಂಗಳೂರಿನ ದೊಡ್ಡಗುಬ್ಬಿ ಗ್ರಾಮದ ಅನಾಥರ ಆಶ್ರಯದಾತ ಆಟೋರಾಜ ಅವರನ್ನು ಸನ್ಮಾನಿಸಲಾಯಿತು. ನಂತರ ಲೇಖಕ ಬೊಳುವಾರು ಮಹಮದ್ ಕುಂಞï ರಚಿತ ಮೈಮ್ ರಮೇಶ್ ನಿರ್ದೇಶನದ ಎನ್‍ಐಇ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ `ಮಲಾಲ ಅಲ್ಲಾ’ ನಾಟಕ ಪ್ರದರ್ಶನವಾಯಿತು.
ಜಗನ್ಮೋಹನ ಅರಮನೆಯಲ್ಲಿ ಬಳ್ಳಾರಿಯ ಹೇಮಾವತಿ ಅವರಿಂದ ಭರತನಾಟ್ಯ, ರಾಯ ಚೂರಿನ ವಿಶ್ವಮಾನವ ಸಂಗೀತ ಯಾನ ಸಂಸ್ಥೆ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮೈಸೂರಿನ ಗಾಯಕರಾದ ಜಯಂತಿ ಭಟ್ ತಂಡದಿಂದ ಜನಪದ ಗೀತೆಗಳು, ಬೆಂಗ ಳೂರಿನ ರೇಖಾ ಹೆಗ್ಡೆ ಪ್ರಸ್ತುತಪಡಿಸಿದ ಹಿಂದೂ ಸ್ತಾನಿ ಗಾಯನ ಜನರ ಗಮನ ಸೆಳೆಯಿತು.
ಕುವೆಂಪುನಗರದ ಗಾನಭಾರತಿ ವೇದಿಕೆಯಲ್ಲಿ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ತಂಡ ದಿಂದ ನಿಕೋಬಾರಿ ನೃತ್ಯ, ಮೈಸೂರಿನ ಸಿಂಧೂರ ತಂಡದಿಂದ ಸುಗಮ ಸಂಗೀತ, ಮೈಸೂರಿನ ಅರ್ಚನ, ಅನುಷಾ ಅವರು ನಡೆಸಿ ಕೊಟ್ಟ ಸ್ಯಾಕ್ಸೋಫೋನ್ ವಾದನ ಕಲಾ ರಸಿಕರ ಮನಗೆದ್ದಿತು. ಬೆಂಗಳೂರಿನ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ ಕಲಾವಿದರು ನಡೆಸಿ ಕೊಟ್ಟ ನೃತ್ಯ ರೂಪಕ ರಸಿಕರ ಮನತಣಿಸಿತು.

ಪುರಭವನ ವೇದಿಕೆಯಲ್ಲಿ ಭುವನೇಶ್ವರಿ ಕನ್ನಡ ಕಲಾ ಸಂಘದ ಎಂ.ಕುಮಾರ್ ನಡೆಸಿ ಕೊಟ್ಟ `ಕೆಚ್ಚೆದೆಯ ರಣಧೀರ ಕಂಠೀರವ’ ನಾಟಕ, ಮೈಸೂರಿನ ಮಹದೇಶ್ವರ ಕಲಾ ಸಂಘ ದಿಂದ ಪ್ರದರ್ಶನಗೊಂಡ `ಕಿತಾಪತಿ ಗುಂಡ’ ನಾಟಕ ಪ್ರದರ್ಶನವಾಯಿತು. ಬೆಂಗಳೂ ರಿನ ಕಲಾವಿದೆ ಸಂಧ್ಯಾ ಅವರಿಂದ `ಸುಯೋ ಧನ’ ನಾಟಕ ಪ್ರದರ್ಶನಗೊಂಡಿತು. ಚಿಕ್ಕಗಡಿಯಾರ ವೇದಿಕೆಯಲ್ಲಿ ನಟಿ ಸಿರಿಮೌರಿ ಅವರಿಂದ ಜಾನಪದ ನೃತ್ಯ, ತುಮಕೂರಿನ ಹನುಮಂತ ದಾಸ ಮತ್ತು ತಂಡದಿಂದ ಹರಿಕಥಾ ಕೀರ್ತನ, ಬೀದರ್‍ನ ವಿಜಯ್‍ಕುಮಾರ ಸೋನಾರೆ ಅವರಿಂದ ಜಾನಪದ ಗಾಯನ ಎಲ್ಲರ ಗಮನ ಸೆಳೆಯಿತು. ಉತ್ತರ ಕನ್ನಡದ ಜ್ಯೋತಿ ಕೆ.ನಾಯಕ್ ಸುಗಮ ಸಂಗೀತ ನಡೆಸಿ ಕೊಟ್ಟರು. ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಮೈದಾ ನದ ಆಹಾರ ಮೇಳದಲ್ಲಿ ಮೈಸೂರಿನ ಅರುಣೋ ದಯ ಸಾಂಸ್ಕøತಿಕ ವೇದಿಕೆ ಕಲಾವಿದೆ ಮಂಜುಳಾ ಅವರಿಂದ ಸುಗಮ ಸಂಗೀತ, ಮಂಗಳೂರು, ಉಡುಪಿ ಜಿಲ್ಲೆಯ ಪುಟಾಣಿ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ನಂತರ ಲಲಿತಮಹಲ್ ಹೋಟೆಲ್ ಬಳಿಯ ಆಹಾರ ಮೇಳದಲ್ಲಿ ಶಾರದಾದೇವಿ ನಗರದ ಧ್ರುವತೇಜ ಮ್ಯೂಸಿಕ್ ತಂಡದಿಂದ ಸುಗಮ ಸಂಗೀತ, ಮಂಗಳೂರು, ಉಡುಪಿ ಜಿಲ್ಲೆಯ ಪುಟಾಣಿ ಮಕ್ಕಳಿಂದ ಯಕ್ಷಗಾನ ಪ್ರದರ್ಶನಗೊಂಡಿತು.

Translate »