ಬಗೆ ಬಗೆ ತಿಂಡಿ ತಿನಿಸುಗಳ ಸ್ಪರ್ಧೆ, ಪ್ರತ್ಯಕ್ಷ ಪ್ರಾತಕ್ಷಿಕೆ
ಮೈಸೂರು, ಮೈಸೂರು ದಸರಾ

ಬಗೆ ಬಗೆ ತಿಂಡಿ ತಿನಿಸುಗಳ ಸ್ಪರ್ಧೆ, ಪ್ರತ್ಯಕ್ಷ ಪ್ರಾತಕ್ಷಿಕೆ

October 14, 2018

ಮೈಸೂರು: ರುಚಿಯಾದ ವೆಜ್‍ಪ್ರೈಡ್ ರೈಸ್ ಮತ್ತು ಸಲಾಡ್ ತಯಾರಿಸಿದ ಯುವಕರಿಗೆ ಪ್ಲೇಟ್ ಪಾನಿ ಪೂರಿಯನ್ನು ಕೆಲವೇ ನಿಮಿಷದಲ್ಲಿ ಗುಳುಂ ಮಾಡಿ ಸೆಡ್ಡು ಹೊಡೆದ ನಾರಿಯರು. ಆಹಾರ ಮೇಳದ ಅಂಗಳದಲ್ಲಿ ಮೋಡಿ ಮಾಡಿದ ಸಿಹಿಕಹಿ ಚಂದ್ರು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಆಹಾರ ಮೇಳ ಉಪಸಮಿತಿ ವತಿಯಿಂದ ಆಯೋಜಿಸಿದ್ದ ವೆಜ್‍ಪ್ರೈಡ್ ರೈಸ್ ಮತ್ತು ಸಲಾಡ್ ತಯಾರಿಸುವ ಸ್ಪರ್ಧೆ, ಪಾನಿಪೂರಿ ತಿನ್ನುವ ಸ್ಪರ್ಧೆ ಹಾಗೂ ಅಡುಗೆ ತಯಾರಿಕೆ ಪ್ರತ್ಯಕ್ಷ ಪಾತಕ್ಷಿಕೆಯಲ್ಲಿ ಹೊಸ ಬಗೆಯ ಅಡುಗೆ ಪಾಠ ಕಲಿತ ಪ್ರೇಕ್ಷಕರು.

ಯುವಕರಿಗಾಗಿ ಆಯೋ ಜಿಸಿದ್ದ ವೆಜ್‍ಪ್ರೈಡ್ ರೈಸ್ ಮತ್ತು ಸಲಾಡ್ ತಯಾರಿಸುವ ಸ್ಪರ್ಧೆ ಯಲ್ಲಿ 10 ಮಂದಿಗೆ ಅವಕಾಶವಿದ್ದರೂ. ಏಳು ಮಂದಿ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೈಚಳಕ ತೋರಿಸಿದರು. ಸ್ವಚ್ಛತೆ, ಅಡುಗೆ ಮಾಡುವ ವಿಧಾನ, ಪರಿಕರಗಳ ಬಳಕೆ, ರುಚಿ ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅಂಕಗಳನ್ನು ನಿಗಧಿಮಾಡಲಾಗಿತ್ತು. ಸ್ಪರ್ಧೆಯಲ್ಲಿ ಮೈಸೂರಿನ ತರುಣ್ ಪ್ರಥಮ ಸ್ಥಾನ ಪಡೆದರೆ, ಮಹದೇವ ಪ್ರಸಾದ್ ದ್ವಿತೀಯ ಸ್ಥಾನ ಪಡೆದರು. ನಂತರ ಹರ್ಷ ಮತ್ತು ಸಾಗರ್ ಅವರು ಸಮಾನ ಅಂಕ ಗಳಿಸಿದ ಕಾರಣ ಇಬ್ಬರೂ ತೃತೀಯ ಸ್ಥಾನ ಪಡೆದುಕೊಂಡರು. ಕಾಲೇಜು ವಿದ್ಯಾರ್ಥಿ ನಿಯರಿಗಾಗಿ ಪಾನಿಪೂರಿ ತಿನ್ನುವ ಸ್ಪರ್ಧೆ ನಡೆಯಿತು. ಪ್ಲೇಟ್‍ನಲ್ಲಿದ್ದ 12 ಪಾನಿಪೂರಿಗಳನ್ನು ಕೇವಲ 110 ಸೆಕೆಂಡುಗಳಲ್ಲಿ ಗುಳುಂ ಮಾಡಿದ ಶ್ರೀರಂಗಪಟ್ಟಣದ ಸಿ. ಪೂಜಾ ಪ್ರಥಮ ಸ್ಥಾನ ಪಡೆದರೆ, ಸಿತಾರಾ 118 ಸೆಕೆಂಡುಗಳಲ್ಲಿ ಪ್ಲೇಟ್ ಖಾಲಿ ಮಾಡಿ ದ್ವಿತೀಯ ಸ್ಥಾನ ಪಡೆದರು.

Translate »