ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಕಬಡ್ಡಿ ಪಂದ್ಯದಲ್ಲಿ ವಿಜಯ ಬ್ಯಾಂಕ್ ಮತ್ತು ಬೆಂಗಳೂರಿನ ಕೇಶವ ಸ್ಪೋರ್ಟ್ಸ್ ಕ್ಲಬ್ ತಂಡಗಳು ಕ್ರಮವಾಗಿ ಪುರುಷ- ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು. ಪುರುಷರ ವಿಭಾಗ: ಫೈನಲ್‍ನಲ್ಲಿ ವಿಜಯ ಬ್ಯಾಂಕ್ ತಂಡವು ಹೆಚ್‍ಎಎಲ್ ತಂಡವನ್ನು 29-17ರಿಂದ ಮಣಿಸಿತು. ಮೊದಲಾರ್ಧದಲ್ಲಿ 19-11ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡಕ್ಕೆ ರೋಹಿತ್ ಮಾರ್ಲ ಹೆಚ್ಚು ಪಾಯಿಂಟ್‍ಗಳನ್ನು ತಂದುಕೊಟ್ಟರು. 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಎಎಸ್‍ಸಿ ತಂಡವು ಕೊಡಗು ತಂಡವನ್ನು 42-25ರಿಂದ ಸೋಲಿಸಿತು.
ಮಹಿಳೆಯರ ವಿಭಾಗ: ಫೈನಲ್‍ನಲ್ಲಿ ಕೇಶವ ಸ್ಪೋರ್ಟ್ಸ್ ಕ್ಲಬ್ ತಂಡವು ಬೆಂಗಳೂರು ಮಾತಾ ತಂಡದ ವಿರುದ್ಧ 23-20ರಿಂದ ಜಯ ಸಾಧಿಸಿತು. 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಧಾರವಾಡ ತಂಡವು ರಾಮನಗರ ತಂಡದ ವಿರುದ್ಧ 20-16ರಿಂದ ಜಯ ಸಾಧಿಸಿತು.
ಖೋ-ಖೋ: ಆತಿಥೇಯ ಮೈಸೂರು ಮತ್ತು ಬೆಳಗಾವಿ ತಂಡ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು. ಪುರುಷರ ವಿಭಾಗ: ಮೈಸೂರು ತಂಡ ಬೆಳಗಾವಿ ತಂಡವನ್ನು 18-5ರಿಂದ ಮಣಿಸಿತು. ಬಾಗಲಕೋಟೆ ಮತ್ತು ಹಾವೇರಿ ತಂಡಗಳು 3ನೇ ಸ್ಥಾನ ಗಳಿಸಿದವು. ಮಹಿಳೆಯರ ವಿಭಾಗ: ಬೆಳಗಾವಿ ತಂಡವು ಧಾರ ವಾಡ ತಂಡದ ವಿರುದ್ಧ 10-6ರಿಂದ ಜಯ ಸಾಧಿಸಿತು. ಬೆಂಗಳೂರು ಮತ್ತು ಬಾಗಲಕೋಟೆ ತಂಡಗಳು 3ನೇ ಸ್ಥಾನ ಪಡೆದುಕೊಂಡವು.