ಮೈಸೂರು: ದಸರಾ ಮಹೋತ್ಸವದ ಅಂಗ ವಾಗಿ ನಾಳೆ(ಅ.14) ಮೈಸೂರಿನ ಅರಮನೆ ಆವರಣದಲ್ಲಿ ಪೊಲೀಸ್ ಸಮೂಹ ವಾದ್ಯಮೇಳ(ಒಚಿss ಃಚಿಟಿಜ) ನಡೆಯಲಿದೆ. ಭಾನುವಾರ ಸಂಜೆ 6ರಿಂದ ರಾತ್ರಿ 8 ಗಂಟೆವರೆಗೆ ನಡೆಯಲಿರುವ ಪೊಲೀಸ್ ಸಮೂಹ ವಾದ್ಯಮೇಳದಲ್ಲಿ ಗೃಹಮಂತ್ರಿಗಳೂ ಆದ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸು ತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಭಾಗವಹಿಸುವರು. ಜುಗಲ್‍ಬಂದಿ, ಕರ್ನಾಟಕ ಮತ್ತು ಇಂಗ್ಲೀಷ್ ಬ್ಯಾಂಡ್ ವಾದನ ಸೇರಿದಂತೆ ಹಲವು ಬಗೆಯ ಸಂಗೀತ ರಸದೌತಣವನ್ನು ಪೊಲೀಸರು ಉಣಬಡಿಸಲಿದ್ದಾರೆ.