ಮರಂದೋಡು ಗ್ರಾಮದ ಬೇಡಿಕೆ ಈಡೇರಿಸಲು ಕ್ರಮ
ಕೊಡಗು

ಮರಂದೋಡು ಗ್ರಾಮದ ಬೇಡಿಕೆ ಈಡೇರಿಸಲು ಕ್ರಮ

July 9, 2018

ವಿರಾಜಪೇಟೆ:  ಅನೇಕ ದಶಕ ಗಳಿಂದ ಮರಂದೊಡು ಗ್ರಾಮದಲ್ಲಿ ಯಾವುದೇ ಜನಪರ ಅಭಿವೃದ್ಧಿ ಕಾರ್ಯಗಳು ನಡೆ ದಿಲ್ಲ. ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯ ಗಳು ದೊರೆತಿಲ್ಲ. ಗ್ರಾಮದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತ ವಾಗಿ ಈಡೇರಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಮರಂದೋಡು ಗ್ರಾಮಸ್ಥರಿಂದ ಅಲ್ಲಿನ ಧವಸ ಭಂಡಾರದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಂಕೇತ್ ಪೂವಯ್ಯ, ಮೂಲ ಸೌಲಭ್ಯ ಗಳ ಕೊರತೆಯಿಂದ ಮರಂದೋಡು ಕುಗ್ರಾಮ ವೆಂದು ಬಣ್ಣಿಸುವಂತಾಗಿದೆ. ಗ್ರಾಮದಲ್ಲಿನ ಕಾಫಿತೋಟಕ್ಕೆ ಸುಮಾರು 25 ಕಾಡಾನೆಗಳು ನಿರಂತರವಾಗಿ ಉಪಟಳ ನೀಡುತ್ತಿದ್ದು, ಬೆಳೆಗಾರರ ಫಸಲನ್ನು ನಾಶಪಡಿಸುತ್ತಿವೆ. ಇದಕ್ಕೆ ಈಗಿನ ಸರಕಾರದಿಂದ ಶಾಶ್ವತ ಪರಿಹಾರ ಒದಗಿಸಲಾಗುವುದು. ಅರಣ್ಯ ಇಲಾಖೆಯ ಜಿಲ್ಲಾ ಮುಖ್ಯ ಸಂರಕ್ಷಣಾಧಿಕಾರಿ ಸಮ್ಮುಖ ದಲ್ಲಿ ಗ್ರಾಮಸ್ಥರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಗ್ರಾಮಕ್ಕೆ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಸುಮಾರು 25ಗ್ರಾಮ ಗಳನ್ನು ಸೇರಿಸಿ ಒಂದು ವಿದ್ಯುತ್ ಸಬ್‍ಸ್ಟೇಶನ್ ಸ್ಥಾಪನೆ, ಗ್ರಾಮದಲ್ಲಿ ಪಶು ವೈದ್ಯಕೀಯ ಶಾಲೆಯ ಸ್ಥಾಪನೆ, ಆರೋಗ್ಯ ಕೇಂದ್ರಕ್ಕೆ ವೈದ್ಯರುಗಳ ನೇಮಕ, ರಸ್ತೆ ದುರಸ್ತಿ, ಅಗತ್ಯವಿರುವ ಕಡೆಗಳಲ್ಲಿ ಹೊಸ ರಸ್ತೆ ನಿರ್ಮಾಣ, ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಹೊಸ ಟ್ಯಾಂಕ್‍ಗಳ ನಿರ್ಮಾಣ ಹೊಸ ಪೈಪುಗಳ ಜೋಡಣೆ ಮಾಡಲಾ ಗುವುದು ಎಂದು ಹೇಳಿದರು. ಸಭೆಯಲ್ಲಿ ತಕ್ಕ ಮುಖ್ಯಸ್ಥರಾದ ಮಾರ್ಚಂಡ ಅಯ್ಯಪ್ಪ, ಅನ್ನಡಿಯಂಡ ಅಚ್ಚಪ್ಪ, ಅನ್ನಮಂಡ ನರೇಶ್, ಮೇರಿಯಂಡ ಹರೀಶ್, ಅನ್ನಡಿಯಂಡ ನೂತನ್, ಮುದ್ದಯ್ಯ, ನಿಡುಮಂಡ ಹರೀಶ್, ಮೇರಿಯಂಡ ಕರುಂಬಯ್ಯ, ಪ್ರತೀಶ್, ಕೆ.ಜಿ. ಗಿರೀಶ್, ಅನಿತಾ ಪೂವಮ್ಮ, ಚಿಣ್ಣಮ್ಮ, ಶೀಲಾ, ಚೋಂದು, ಎಂ.ಕೆ ಪೊನ್ನಪ್ಪ, ರಾಜೇಶ್ ಮತ್ತಿತರಿದ್ದರು.

Translate »