ವಿಶ್ವ ಶ್ರವಣ ದಿನಾಚರಣೆ: ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಶಿಬಿರಕ್ಕೆ ನಟಿ ಅಮೂಲ್ಯ ಚಾಲನೆ
ಮೈಸೂರು

ವಿಶ್ವ ಶ್ರವಣ ದಿನಾಚರಣೆ: ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಶಿಬಿರಕ್ಕೆ ನಟಿ ಅಮೂಲ್ಯ ಚಾಲನೆ

March 4, 2020

ಮೈಸೂರು, ಮಾ. 3 (ಆರ್‍ಕೆ)- ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಮೈಸೂ ರಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿ ಸುವ ಹಲವು ಕಾರ್ಯಕ್ರಮಗಳನ್ನು ಇಂದು ಆಯೋಜಿಸಲಾಗಿತ್ತು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಿಂದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಿಭಾಗ ದಲ್ಲಿ ಇಂದು ಆಯೋಜಿಸಿದ್ದ ನವಜಾತ ಶಿಶುಗಳಿಗೆ ಶ್ರವಣದೋಷ ಪರೀಕ್ಷಾ ಶಿಬಿರ ವನ್ನು ಶ್ರವಣ ದೋಷ ಜಾಗೃತಿ, ನಿವಾ ರಣಾ ರಾಯಭಾರಿಯೂ ಆದ ಚಲನ ಚಿತ್ರ ನಟಿ ಅಮೂಲ್ಯ ಉದ್ಘಾಟಿಸಿದರು.

ಓಟೋಕಾಸ್ಟಿಕ್ ಎಮಿಷನ್ (ಒಎಇ) ಉಪ ಕರಣದಿಂದ ಇಂದು ಜನಿಸಿದ ಮಕ್ಕಳಿಗೆ ಶ್ರವಣದೋಷ ಪತ್ತೆ ಹಚ್ಚುವ ಶಿಬಿರದಲ್ಲಿ ಸಂಜೆವರೆಗೂ ಆಸ್ಪತ್ರೆಯ 10 ಶಿಶುಗಳಿಗೆ ಹಿಯರಿಂಗ್ ಸ್ಕ್ರೀನಿಂಗ್ ಮಾಡಲಾಯಿತು.

ಮೈಸೂರು ನಗರದ 15 ಹೆರಿಗೆ ಆಸ್ಪತ್ರೆ ಗಳಲ್ಲಿ ಆಯಿಷ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಡಿಯೋ ಲಜಿಸ್ಟ್‍ಗಳಿಂದ ನವಜಾತ ಶಿಶುಗಳಿಗೆ ಶ್ರವಣ ದೋಷ ಪತ್ತೆ ಮಾಡುವ ಸ್ಕ್ರೀನಿಂಗ್ ಶಿಬಿರ ವನ್ನು ಇಂದು ಆಯೋಜಿಸಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರವಣ ದೋಷ ಜಾಗೃತಿ ಕಾರ್ಯಕ್ರಮದ ರಾಯಭಾರಿಯಾಗಿರುವ ನಟಿ ಅಮೂಲ್ಯ, ಇಂದು ಇಡೀ ಪ್ರಪಂಚದಲ್ಲಿ ಶ್ರವಣ ದಿನ ವನ್ನಾಗಿ ಆಚರಿಸಲಾಗುತ್ತಿದೆ. ಹುಟ್ಟಿದ ದಿನ ದಂದೇ ಮಕ್ಕಳ ಶ್ರವಣ ದೋಷ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ನ್ಯೂನತೆ ಗುಣಪಡಿಸಬಹುದಾಗಿದೆ. ಪೋಷಕರು ತಮ್ಮ ಮಕ್ಕಳ ಶ್ರವಣ ಪರೀಕ್ಷೆ ಮಾಡಿಸಿ ಕೊಂಡು ಆರಂಭದಲ್ಲೇ ಸಮಸ್ಯೆ ಬಗೆಹರಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕರಾದ ಡಾ. ಎಂ. ಪುಷ್ಪಾ ವತಿ, ನಟಿ ಅಮೂಲ್ಯ, ಅವರ ಪತಿ ಜಗದೀಶ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಪಿ. ನಂಜರಾಜ್, ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಆರ್.ವೆಂಕಟೇಶ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಡಾ. ಪ್ರಕಾಶ್, ಜಿಲ್ಲಾ ಆಡಿಯಾಲಜಿಸ್ಟ್ ಡಾ.ವಿನಿತಾ, ಚೆಲುವಾಂಬ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಪ್ರಮೀಳಾ, ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಸುಧಾ ರುದ್ರಪ್ಪ, ಶ್ರವಣದೋಷವನ್ನು ಯಶಸ್ವಿ ಚಿಕಿತ್ಸೆ ಮೂಲಕ ಪರಿಹರಿಸಿಕೊಂಡ ಅಬ್ದುಲ್ಲಾ, ಆಯಿಷ್‍ನ ಡಾ.ಶ್ರೀದೇವಿ ಸೇರಿದಂತೆ ಹಲ ವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮೈಸೂರಿನ ತಿಲಕ್‍ನಗರದಲ್ಲಿರುವ ಅಂಧ ಮಕ್ಕಳ ಶಾಲೆ ಆವರಣದಿಂದ ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಜನಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮ, ಜಾಥಾಗೆ ಚಾಲನೆ ನೀಡಿದರು. ಮಗು ಹುಟ್ಟಿದಾ ಗಲೇ ಶ್ರವಣ ದೋಷ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಬೇಕೆಂದು ಅರಿವು ಮೂಡಿಸಿದ ಜಾಥಾವು ತಿಲಕ್‍ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮರಳಿ ಅಂಧ ಮಕ್ಕಳ ಶಾಲೆ ತಲುಪಿತು.

ಅಂಧ ಮಕ್ಕಳು, ಕಿವುಡ, ಮೂಗ ಶಾಲೆ ಮಕ್ಕಳು ಹಾಗೂ ಇಲಾಖಾ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಮತಾ, ಜಿಲ್ಲಾ ಅಂಗವಿಕಲರ ಪುನ ರ್ವಸತಿ ಕೇಂದ್ರದ ಆಡಿಯಾಲಜಿಸ್ಟ್ ಇರ್ಫಾನ್ ಹುಸೇನ್, ಸರ್ಕಾರಿ ಅಂಧ ಮಕ್ಕಳ ಶಾಲೆ ಅಧೀಕ್ಷಕ ಕಿರಣ್, ಕಿವುಡ-ಮೂಗರ ಶಾಲೆ ಸೂಪರಿಂಟೆಂಡೆಂಟ್ ಹರೀಶ್, ಮಕ್ಕಳ ಅಭಿವೃದ್ಧಿ ಯೋಜನಾ ಧಿಕಾರಿ ಮಂಜುಳಾ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »